ಗರ್ಭಿಣಿ ಪತ್ನಿ ಮನೆಯಿಂದ ಓಡಿಹೋಗಿದಕ್ಕೆ ಪತಿ ಆತ್ಮಹತ್ಯೆ: ಪೋಷಕರಿಗೆ ವಿಡಿಯೋ ಮೂಲಕ ಕ್ಷಮೆಯಾಚನೆ

Public TV
1 Min Read
HUSBAND SUICIDE COLLAGE

ವಿರಾರ್: ಗರ್ಭಿಣಿ ಪತ್ನಿ ಮನೆಯಿಂದ ಓಡಿಹೋಗಿದಕ್ಕೆ 25 ವರ್ಷದ ವ್ಯಕ್ತಿ ತನ್ನ ಪೋಷಕರಿಗೆ ವಿಡಿಯೋ ಮೂಲಕ ಕ್ಷಮೆಯಾಚಿಸಿ ಬುಧವಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ವಿರಾರ್ ನಲ್ಲಿ ನಡೆದಿದೆ.

ಅಮಿತ್ ರತಂಶಿ ಪೋಕರ್(25) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಅಮಿತ್ ವಿರಾರ್ ನ ಗ್ಲೋಬಲ್ ಸಿಟಿ ನಿವಾಸಿಯಾಗಿದ್ದು, ತನ್ನ ಪೋಷಕರೊಂದಿಗೆ ವಾಸಿಸುತ್ತಿದ್ದರು. ಅಮಿತ್ ಪತಯ್ನಿ ಧರ್ಮಿಷ್ಟಾ ಮಾರ್ಚ್ 9 ರಿಂದ ಕಾಣೆಯಾಗಿದ್ದಳು. ಪತ್ನಿ ಮನೆ ಬಿಟ್ಟು ಓಡಿಹೋಗಿದ್ದಾಳೆಂದು ಮನನೊಂದು ಅಮಿತ್ ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಸೈ ಸರ್ಕಾರಿ ರೈಲ್ವೇ ಪೊಲೀಸರು ಈ ಬಗ್ಗೆ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

suicide image 2

ಅಮಿತ್ ಸಾಯುವ ಮುನ್ನ ತನ್ನ ಪೋಷಕರು ಮತ್ತು ಗೆಳೆಯರಿಗೆ 4 ನಿಮಿಷಗಳ ವಿಡಿಯೋವನ್ನು ಕಳುಹಿಸಿದ್ದರು. ಏಳು ತಿಂಗಳ ಗರ್ಭಿಣಿಯಾಗಿದ್ದ ಪತ್ನಿ ಧರ್ಮಿಷ್ಟ ಓಡಿಹೋಗಲು ಕಾರಣವೇನು ಎಂಬುದು ನನಗೆ ಗೊತ್ತಿಲ್ಲ. ಪತ್ನಿಯ ನಡವಳಿಕೆ ಬಗ್ಗೆ ಆಕೆಯ ಪೋಷಕರೊಂದಿಗೆ ಮಾತನಾಡಿದ್ದೆ ಎಂದು ವಿಡಿಯೋದಲ್ಲಿ ಅಮಿತ್ ಹೇಳಿದ್ದಾರೆ. ಜೊತೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ತಂದೆ-ತಾಯಿಗೆ ಕ್ಷಮೆಯಾಚಿಸಿದ್ದಾರೆ.

ಧರ್ಮಿಷ್ಟ ಕಾಣೆಯಾದ ಬಳಿಕ, ಇದು ಖಾಸಗಿ ವಿಚಾರವೆಂದು ಪೊಲೀಸರಿಗೆ ದೂರು ನೀಡಿರಲಿಲ್ಲ ಎಂದು ಅಮೀತ್ ಸಂಬಂಧಿಕರಾದ ರಮೇಶ್ ಪೋಕರ್ ಹೇಳಿದ್ದಾರೆ.

ವಾಸೈ ಜಿಆರ್ ಟಿಯ ಹಿರಿಯ ಪೊಲೀಸ್ ಅಧಿಕಾರಿ ವಿಲಾಸ್ ಚೌಗುಲೆ ಈ ಘಟನೆ ಕುರಿತು ಪ್ರತಿಕ್ರಿಯಿಸಿದ್ದು, ಸದ್ಯಕ್ಕೆ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಲಾಗಿದ್ದು, ಅಮಿತ್ ಕುಟುಂಬದವರು ನಮ್ಮನ್ನು ಸಂಪರ್ಕಿಸಿದ ಬಳಿಕ ಎಫ್‍ಐಆರ್ ದಾಖಲಿಸುತ್ತೇವೆ. ಅಮಿತ್‍ನ 4 ನಿಮಿಷಗಳ ವಿಡಿಯೋವನ್ನು ಪರಿಶೀಲಿಸಬೇಕಿದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *