ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಭಾನುವಾರ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲಾ ಜಯವರ್ಧನೆ (Mahela Jayawardene) ಅವರನ್ನು ಮುಖ್ಯ ಕೋಚ್ ಆಗಿ ಮರುನೇಮಕ ಮಾಡಿದೆ.
47 ವರ್ಷ ವಯಸ್ಸಿನ ಜಯವರ್ಧನೆ ಈ ಹಿಂದೆ 2017-2022 ರವರೆಗೆ ಇದೇ ತಂಡಕ್ಕೆ ಕೋಚ್ ಆಗಿದ್ದರು. ಈ ಅವಧಿಯಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಮೂರು IPL ಟ್ರೋಫಿಗಳನ್ನು ಗೆದ್ದಿದೆ. 2022 ರಲ್ಲಿ ಜಯವರ್ಧನೆ ಅವರನ್ನು ಮುಖ್ಯ ತರಬೇತುದಾರನ ಸ್ಥಾನದಿಂದ MI ಫ್ರಾಂಚೈಸ್‌ಗಾಗಿ ಗ್ಲೋಬಲ್ ಹೆಡ್ ಆಫ್ ಕ್ರಿಕೆಟ್‌ಗೆ ವರ್ಗಾಯಿಸಲಾಗಿತ್ತು. ಇದನ್ನೂ ಓದಿ: ತೆಲಂಗಾಣ ಡಿಎಸ್‌ಪಿ ಆಗಿ ಅಧಿಕಾರ ವಹಿಸಿಕೊಂಡ ಸಿರಾಜ್ – ಪೊಲೀಸ್ ಡ್ರೆಸ್‌ನಲ್ಲಿ ವೇಗಿ
Advertisement
???????????????????????? ????????????????????????????????????????????. ???????????????? ????????????????????. ???????????????? ???????? ???????????? ???????????????????????? ????#MumbaiMeriJaan #MumbaiIndians | @MahelaJay pic.twitter.com/SajRfzLYkQ
— Mumbai Indians (@mipaltan) October 13, 2024
Advertisement
ಮಹೇಲಾ ಅವರು ಮುಂಬೈ ಇಂಡಿಯನ್ಸ್‌ನ ಮುಖ್ಯ ಕೋಚ್ ಆಗಿ ಮರಳಿ ಬಂದಿರುವುದಕ್ಕೆ ನಾವು ರೋಮಾಂಚನಗೊಂಡಿದ್ದೇವೆ. ನಮ್ಮ ಜಾಗತಿಕ ತಂಡಗಳು ತಮ್ಮ ಪರಿಸರ ವ್ಯವಸ್ಥೆಯಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡಿದ್ದರಿಂದ, ಅವರನ್ನು MI ಗೆ ಮರಳಿ ಕರೆತರುವ ಅವಕಾಶ ಸಿಕ್ಕಿದೆ. ಅವರ ನಾಯಕತ್ವ, ಜ್ಞಾನ ಮತ್ತು ಆಟದ ಮೇಲಿನ ಉತ್ಸಾಹವು ಯಾವಾಗಲೂ MI ಗೆ ಪ್ರಯೋಜನವನ್ನು ನೀಡುತ್ತದೆ ಎಂದು ಫ್ರಾಂಚೈಸಿ ಮಾಲೀಕ ಆಕಾಶ್ ಅಂಬಾನಿ ಪ್ರತಿಕ್ರಿಯಿಸಿದ್ದಾರೆ.
Advertisement
ಕಳೆದೆರಡು ಋತುಗಳಲ್ಲಿ ಜಯವರ್ಧನೆ ಅನುಪಸ್ಥಿತಿಯಲ್ಲಿ ಪಾತ್ರ ವಹಿಸಿದ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಮಾರ್ಕ್ ಬೌಚರ್ ಅವರ ಸೇವೆಗಳನ್ನು ಇದೇ ವೇಳೆ ಅಂಬಾನಿ ಶ್ಲಾಘಿಸಿದ್ದಾರೆ. ಕಳೆದ ಎರಡು ಋತುಗಳಲ್ಲಿ ಮಾರ್ಕ್ ಬೌಚರ್ ಅವರು ತಂಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಪರಿಣತಿ ಮತ್ತು ಸಮರ್ಪಣೆಯು ಪ್ರಮುಖವಾಗಿತ್ತು. ಈಗ MI ಕುಟುಂಬದ ಅವಿಭಾಜ್ಯ ಸದಸ್ಯರಾಗಿದ್ದಾರೆ ಎಂದು ಆಕಾಶ್ ಅಂಬಾನಿ ತಿಳಿಸಿದ್ದಾರೆ. ಇದನ್ನೂ ಓದಿ: ನನಗೆ ಐಪಿಎಲ್‌ಗಿಂತಲೂ ಟೆಸ್ಟ್ ಕ್ರಿಕೆಟ್ ಮುಖ್ಯ: ಬಿಸಿಸಿಐ ಹೊಸ ನಿಯಮದ ಕುರಿತು ಕಮ್ಮಿನ್ಸ್ ರಿಯಾಕ್ಷನ್
Advertisement
ಮುಂಬೈ ಇಂಡಿಯನ್ಸ್, ಐಪಿಎಲ್ 2023 ರಲ್ಲಿ ಪ್ಲೇಆಫ್‌ಗೆ ತಲುಪಿತ್ತು. 2024 ರ ಋತುವಿನಲ್ಲಿ ಬೌಚರ್ ಕೋಚ್ ಆಗಿದ್ದಾಗ, 10 ನೇ ಸ್ಥಾನಕ್ಕೆ ಕುಸಿದಿತ್ತು. ಈ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ತಂಡದ ನಾಯಕರಾಗಿದ್ದರು. 2013 ರಿಂದ 2023 ರವರೆಗೆ MI ಅನ್ನು ಮುನ್ನಡೆಸಿದ್ದ ರೋಹಿತ್ ಶರ್ಮಾ, ತಂಡಕ್ಕೆ ಐದು ಟ್ರೋಫಿಗಳನ್ನು ತಂದುಕೊಟ್ಟಿದ್ದರು.