– ಶಾಲೆ ಬಿಟ್ಟ ಬಳಿಕವೂ ವಿದ್ಯಾರ್ಥಿಯ ಜೊತೆ ಸಂಪರ್ಕಕ್ಕೆ ಯತ್ನ
– ಆರೋಪಿ ಶಿಕ್ಷಕಿಗೆ ಮದುವೆಯಾಗಿದ್ದು, ಮಕ್ಕಳಿದ್ದಾರೆ
ಮುಂಬೈ: 11ನೇ ತರಗತಿ ವಿದ್ಯಾರ್ಥಿಯ (Student) ಜೊತೆ ಸೆಕ್ಸ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮುಂಬೈಯ ಶಿಕ್ಷಕಿಯನ್ನು (Mumbai Teacher) ಪೋಕ್ಸೋ ಕಾಯ್ದೆಯ ಅಡಿ ಬಂಧಿಸಲಾಗಿದೆ.
ಮುಂಬೈನ ಪ್ರಖ್ಯಾತ ಶಾಲೆಯ 40 ವರ್ಷದ ಇಂಗ್ಲಿಷ್ ಶಿಕ್ಷಕಿ ಕಳೆದ ಒಂದು ವರ್ಷದಲ್ಲಿ 16 ವರ್ಷದ ವಿದ್ಯಾರ್ಥಿಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ (Sexually Assault) ಎಸಗಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಶಿಕ್ಷಕಿಗೆ ಮದುವೆಯಾಗಿದ್ದು, ಮಕ್ಕಳಿದ್ದಾರೆ. ಈಗ ಪೋಕ್ಸೋ (POCSO), ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಅಡಿ ಕೇಸ್ ದಾಖಲಾಗಿದೆ. ಇದನ್ನೂ ಓದಿ: ಶೌಚಾಲಯದಲ್ಲಿ ಮಹಿಳಾ ಸಹೋದ್ಯೋಗಿ ವೀಡಿಯೋ ರೆಕಾರ್ಡ್ – ಟೆಕ್ಕಿ ಅರೆಸ್ಟ್
ವಿದ್ಯಾರ್ಥಿ 11ನೇ ತರಗತಿಯಲ್ಲಿ ಓದುತ್ತಿದ್ದಾಗ ಆತನಿಗೆ ಶಿಕ್ಷಕಿ ಪಾಠ ಕಲಿಸಿದ್ದಳು. ಡಿಸೆಂಬರ್ 2023 ರಲ್ಲಿ ವಾರ್ಷಿಕ ಶಾಲೆಯ ನೃತ್ಯ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಗುಂಪನ್ನು ಮಾಡಲಾಗಿತ್ತು. ಈ ವೇಳೆ ಶಿಕ್ಷಕಿ ಅಪ್ರಾಪ್ತರತ್ತ ಆಕರ್ಷಿತಳಾಗಿದ್ದಳು. ಜನವರಿ 2024 ರಲ್ಲಿ ಅವಳು ವಿದ್ಯಾರ್ಥಿಗೆ ಲೈಂಗಿಕ ಸನ್ನೆ ಮಾಡಲು ಆರಂಭಿಸಿದ್ದಳು.
ಶಿಕ್ಷಕಿಯ ಈ ವರ್ತನೆ ನೋಡಿ ಆರಂಭದಲ್ಲಿ ವಿದ್ಯಾರ್ಥಿ ಆಕೆಯಿಂದ ದೂರ ಸರಿಯಲು ಆರಂಭಿಸಿದ್ದ. ಈ ವೇಳೆ ಶಿಕ್ಷಕಿ ಸ್ನೇಹಿತೆಯ ಮೂಲಕ ಆಕೆ ಆತನ ಜೊತೆ ಸಂಬಂಧ ಬೆಳೆಸಿದಳು. ಆಕೆಯ ಸ್ನೇಹಿತೆ ವಿದ್ಯಾರ್ಥಿಯ ಜೊತೆ ಮಾತನಾಡಿ ವಯಸ್ಸಾದ ಮಹಿಳೆಯರು ಮತ್ತು ಹದಿಹರೆಯದ ಹುಡುಗರ ನಡುವಿನ ಸಂಬಂಧಗಳು ಈಗ ಸಾಮಾನ್ಯ, ನಿಮ್ಮ ಜೋಡಿ ಸ್ವರ್ಗದಲ್ಲೇ ನಿಶ್ಚಯವಾಗಿದೆ ಎಂದು ಹೇಳಿ ಮನವೊಲಿಸಿದ್ದಳು. ಕೃತ್ಯಕ್ಕೆ ಸಾಥ್ ನೀಡಿದ್ದಕ್ಕೆ ಶಿಕ್ಷಕಿಯ ಸ್ನೇಹಿತೆಯ ವಿರುದ್ಧವೂ ಆರೋಪ ಹೊರಿಸಲಾಗಿದೆ.
ಶಿಕ್ಷಕಿ ವಿದ್ಯಾರ್ಥಿಯನ್ನು ಕಾರಿನಲ್ಲಿ ಫೈವ್ ಸ್ಟಾರ್ ಹೋಟೆಲಿಗೆ ಕರೆದುಕೊಂಡು ಹೋಗಿ ಬಲವಂತವಾಗಿ ಬಟ್ಟೆಗಳನ್ನು ಬಿಚ್ಚಿ ಲೌಂಗಿಕ ದೌರ್ಜನ್ಯ ಎಸಗುತ್ತಿದ್ದಳು. ಕೃತ್ಯ ಎಸಗಿದ ಕೆಲ ದಿನಗಳ ಬಳಿಕ ವಿದ್ಯಾರ್ಥಿ ಭಯಗೊಂಡಿದ್ದ. ಈ ವೇಳೆ ಶಿಕ್ಷಕಿ ಭಯ ನಿವಾರಕ ಮಾತ್ರೆಗಳನ್ನು ನೀಡಿದ್ದಳು. ಇದನ್ನೂ ಓದಿ: I Stand By My Words, ಡಿಕೆಶಿಗೂ ಅವಕಾಶ ಸಿಗಲಿ – ಇಕ್ಬಾಲ್ ಹುಸೇನ್
ಶಿಕ್ಷಕಿಯ ಕಾಮ ತೃಷೆ ಎಷ್ಟಿತ್ತು ಅಂದರೆ ಕೆಲವೊಮ್ಮೆ ವಿದ್ಯಾರ್ಥಿಗೆ ಬಲವಂತವಾಗಿ ಮದ್ಯ ಕುಡಿಸಿ ದಕ್ಷಿಣ ಮುಂಬೈ ಮತ್ತು ವಿಮಾನ ನಿಲ್ದಾಣದ ಬಳಿಯ ಪಂಚತಾರಾ ಹೋಟೆಲ್‌ಗಳಿಗೆ ಕರೆದುಕೊಂಡು ಹೋಗಿ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯಿಸುತ್ತಿದ್ದಳು.
ಬೆಳಕಿಗೆ ಬಂದಿದ್ದು ಹೇಗೆ?
ಪೋಷಕರು ಪುತ್ರನ ನಡವಳಿಕೆಯಲ್ಲಿನ ಬದಲಾವಣೆಯನ್ನು ಗಮನಿಸಿ ಅವನನ್ನು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ವಿದ್ಯಾರ್ಥಿ ತನ್ನ ಕಷ್ಟವನ್ನು ಹೇಳುತ್ತಿದ್ದಂತೆ ಶೀಘ್ರವೇ ಆತ 12ನೇ ತರಗತಿ ತೇರ್ಗಡೆಯಾಗುತ್ತಾನೆ ಎಂಬ ಕಾರಣಕ್ಕೆ ಕುಟುಂಬ ಈ ವಿಚಾರವನ್ನು ರಹಸ್ಯವಾಗಿ ಇಡಲು ಮುಂದಾಗಿತ್ತು. ಆದರೆ 12ನೇ ತರಗತಿ ತೇರ್ಗಡೆಯಾಗಿ ಶಾಲೆ ತೊರೆದ ಬಳಿಕವೂ ಶಿಕ್ಷಕಿ ಮತ್ತೆ ವಿದ್ಯಾರ್ಥಿಯನ್ನು ಸಂಪರ್ಕಿಸಲು ಮುಂದಾಗಿದ್ದಾಳೆ.
ಶಿಕ್ಷಕಿ ತನ್ನ ಮನೆಕೆಲಸದ ಸಿಬ್ಬಂದಿ ಮೂಲಕ ವಿದ್ಯಾರ್ಥಿಯನ್ನು ಸಂಪರ್ಕಿಸಿ ಭೇಟಿಯಾಗುವಂತೆ ಕೇಳಿಕೊಂಡಿದ್ದಾಳೆ. ಈ ವಿಚಾರ ಪೋಷಕರಿಗೆ ತಿಳಿದ ಬಳಿಕ ಈಗ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.