ಮುಂಬೈ: ಭೋಜ್‍ಪುರಿ ನಟಿ ಆತ್ಮಹತ್ಯೆಗೆ ಕಾರಣರಾದ ಇಬ್ಬರು ನಕಲಿ ಎನ್‍ಸಿಬಿ ಅಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರೇವ್ ಪಾರ್ಟಿ ಹೆಸರಿನಲ್ಲಿ ನಕಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್‍ಸಿಬಿ) ಅಧಿಕಾರಿಗಳು ದಾಳಿ ಮಾಡಿದ ಪರಿಣಾಮ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಹಿನ್ನೆಲೆ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
Advertisement
ಏನಿದು ಘಟನೆ?
ಮುಂಬೈ ಜೋಗೇಶ್ವರಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ 28 ವರ್ಷದ ಭೋಜ್‍ಪುರಿ ನಟಿ ಮತ್ತು ಆಕೆಯ ಸ್ನೇಹಿತರ ಮೇಲೆ ಎನ್‍ಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ನಮಗೆ 20 ಲಕ್ಷ ರೂ. ಕೊಡಲಿಲ್ಲವೆಂದರೆ ನಿಮ್ಮನ್ನು ರೇವ್ ಪಾರ್ಟಿಯಲ್ಲಿ ಸಿಕ್ಕಿಸುತ್ತೇವೆ ಎಂದು ಬೆದರಿಕೆಯನ್ನು ಹಾಕಿದ್ದಾರೆ. ಇದನ್ನೂ ಓದಿ: ವೈರಲ್ ಜ್ವರದ ನಂತರ ಮತ್ತೆ ವರ್ಕೌಟ್‍ಗೆ ಮರಳಿದ ಸಮಂತಾ
Advertisement
Advertisement
ಈ ಪರಿಣಾಮ ಖಿನ್ನತೆಗೆ ಬಳಗಾದ ಭೋಜ್‍ಪುರಿ ನಟಿ ಡಿಸೆಂಬರ್ 23 ರಂದು ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಂತರ ಆಕೆಯ ಸ್ನೇಹಿತರು ಪೊಲೀಸರಿಗೆ ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ.
Advertisement
ಈ ಸಂಬಂಧ ಅಂಬೋಲಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಟಿಯು ಇತ್ತೀಚೆಗೆ ಹೋಟೆಲ್‍ನಲ್ಲಿ ಮೂವರು ಸ್ನೇಹಿತರೊಂದಿಗೆ ಪಾರ್ಟಿಯಲ್ಲಿ ಭಾಗವಹಿಸಿದ್ದಳು ಎಂದು ಪೊಲೀಸರು ತಿಳಿದುಕೊಂಡಿದ್ದು, ಅಲ್ಲಿ ಇಬ್ಬರು ಪುರುಷರು ಎನ್‍ಸಿಬಿ ಅಧಿಕಾರಿಗಳಂತೆ ನಟಿಸಿದ್ದಾರೆ. ನಂತರ ಅವರ ಬಳಿಗೆ ಹೋಗಿ ಡ್ರಗ್ಸ್ ಸೇವಿಸಿದ್ದಕ್ಕಾಗಿ ನಿಮ್ಮನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.
ನಟಿ ಮತ್ತು ಆಕೆಯ ಸ್ನೇಹಿತರು ಇದರಿಂದ ಹೆದರಿಕೊಂಡ ಈ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದ್ದು, ಆರೋಪಿಗಳು 40 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದಾರೆ. ಆದರೆ ಕೊನೆಯಲ್ಲಿ 20 ಲಕ್ಷ ರೂ. ನೀಡುವಂತೆ ಬೆದರಿಕೆಯನ್ನು ಹಾಕಿದ್ದಾರೆ.
ಆಗ ನಟಿ ಈ ದೊಡ್ಡ ಮೊತ್ತವನ್ನು ಹೇಗೆ ಹೊಂದಿಸುವುದು ಎಂದು ಖಿನ್ನತೆಗೆ ಒಳಗಾಗಿದ್ದು, ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾಳೆ ಎಂದು ಆಕೆಯ ಸ್ನೇಹಿತರು ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಸೋಮವಾರ ಯಾದಗಿರಿಯಲ್ಲಿ ಚುನಾವಣೆ – ಪೊಲೀಸ್ ಇಲಾಖೆ ಸಜ್ಜು
ನಂತರ ಈ ಕುರಿತು ಪೊಲೀಸರು ತನಿಖೆ ಮಾಡಿ ನಕಲಿ ಅಧಿಕಾರಿಗಳಾದ ಸೂರಜ್ ಪರದೇಸಿ(32) ಮತ್ತು ಪ್ರವೀಣ್ ವಾಲಿಂಬೆ(28) ಯನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಜಿ ಮತ್ತು ಇನ್ನೊಬ್ಬ ಆರೋಪಿ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 306(ಆತ್ಮಹತ್ಯೆ ಪ್ರಚೋದನೆ), 170(ಸರ್ಕಾರಿ ನೌಕರನಂತೆ ನಟಿಸುವುದು) 420 (ವಂಚನೆ), 384, 388 ಮತ್ತು 389 (ಸುಲಿಗೆ), 506 (ಕ್ರಿಮಿನಲ್ ಬೆದರಿಕೆ), 120 ಬಿ(ಅಪರಾಧ ಸಂಚು) ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.