ಮುಂಬೈ: ಪೊಲೀಸರು ವ್ಯಕ್ತಿಯೊಬ್ಬನನ್ನು ನಿದ್ದೆಯಿಂದ ಎಬ್ಬಿಸಿದಕ್ಕೆ ಆತ ಬಾಯಿಗೆ ಬಂದ ರೀತಿ ಬೈದಿದ್ದಾನೆ. ಈ ಹಿನ್ನೆಲೆ ಮುಂಬೈ ಕೋರ್ಟ್ ಆತನಿಗೆ 1 ವರ್ಷ, 7 ತಿಂಗಳು ಜೈಲು ಶಿಕ್ಷೆ ವಿಧಿಸಿದೆ.
ಮುಂಬೈನ ರೈಲ್ವೆ ನಿಲ್ದಾಣದ ಪ್ಲಾಟ್‍ಫಾರ್ಮ್‍ನಲ್ಲಿ ನಿದ್ದೆ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಎಬ್ಬಿಸಿ ಹೊರಹೋಗುವಂತೆ ತಿಳಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ವ್ಯಕ್ತಿಯೂ ಪೊಲೀಸರನ್ನು ನಿಂದಿಸಿದ್ದಾನೆ. ಈ ಹಿನ್ನೆಲೆ ಮುಂಬೈ ಸೆಷನ್ಸ್ ನ್ಯಾಯಾಲಯವು ಆ ವ್ಯಕ್ತಿಗೆ 1 ವರ್ಷ, 7 ತಿಂಗಳು ಜೈಲು ಶಿಕ್ಷೆ ವಿಧಿಸಿದೆ.
Advertisement
Advertisement
ನಡೆದಿದ್ದೇನು?
2020ರಲ್ಲಿ ನವೆಂಬರ್ 11 ರಂದು, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್(CSMT) ನಲ್ಲಿ ಕೆಲವು ಪೊಲೀಸರು ಗಸ್ತು ಕರ್ತವ್ಯದಲ್ಲಿದ್ದರು. 15ನೇ ಪ್ಲಾಟ್‍ಫಾರ್ಮ್‍ನಲ್ಲಿ ಒಬ್ಬ ವ್ಯಕ್ತಿ ಮಲಗಿದ್ದ. ಅವನನ್ನು ನೋಡಿದ ಪೊಲೀಸರು ಎಬ್ಬಿಸಲು ಪ್ರಯತ್ನಿಸಿ, ಅಲ್ಲಿಂದ ಹೋಗುವಂತೆ ಹೇಳಿದರು. ಆದರೆ, ಆ ವ್ಯಕ್ತಿ ಅವರ ಮೇಲೆ ಕೂಗಾಡಿದನಲ್ಲದೆ, ಅಸಭ್ಯ ಪದಗಳಿಂದ ನಿಂದಿಸಿದ್ದಾನೆ. ಆ ವ್ಯಕ್ತಿ, ಇದು ನಿಮ್ಮ ತಂದೆಯ ನಿಲ್ದಾಣವೇ? ನಾನು ಇಲ್ಲೇ ಮಲಗುತ್ತೇನೆ, ಇಲ್ಲಿಂದ ಹೋಗುವುದಿಲ್ಲ, ನಿನಗೆ ಏನು ಬೇಕೋ ಅದನ್ನು ಮಾಡು ಎಂದು ಸವಾಲು ಹಾಕಿದ್ದಾನೆ. ಇದನ್ನೂ ಓದಿ: ನಿಯಮ ಮೀರಿ ಚಾಮರಾಜಪೇಟೆ ಬಂದ್ ಮಾಡಿದ್ರೆ ಕಠಿಣ ಕ್ರಮ: ಪೊಲೀಸರ ಎಚ್ಚರಿಕೆ
Advertisement
Advertisement
ವ್ಯಕ್ತಿ ಮಾತು ಅತೀರೇಕಕ್ಕೆ ಹೋದ ಪರಿಣಾಮ ಆತನನ್ನು ಪೊಲೀಸ್ ಠಾಣೆಗೆ ಕರೆತಂದಿದ್ದು, ಸಾರ್ವಜನಿಕ ಕರ್ತವ್ಯವನ್ನು ನಿರ್ವಹಿಸಲು ಪೊಲೀಸ್ ಅಧಿಕಾರಿಗಳಿಗೆ ಅಡ್ಡಿಪಡಿಸಿದ ಹಿನ್ನೆಲೆ ಎಫ್‍ಐಆರ್ ದಾಖಲಿಸಲಾಯಿತು.
ಪೊಲೀಸರು ಸಹ ಆರೋಪಿಯ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದು, ವಿಚಾರಣೆಗೆ ಒಳಪಡಿಸಿದರು. ಅಲ್ಲದೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಹಲವು ಆರೋಪಗಳ ಆಧಾರದ ಮೇಲೆ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ.