LatestMain PostNational

ಫ್ರೀ ಫುಡ್‌ ಇಲ್ಲ ಎಂದಿದ್ದಕ್ಕೆ ರೆಸ್ಟೋರೆಂಟ್‌ ಮ್ಯಾನೇಜರ್‌ ಮೇಲೆ ಪೊಲೀಸ್‌ ಅಧಿಕಾರಿಯಿಂದ ಹಲ್ಲೆ

Advertisements

ಮುಂಬೈ: ಉಚಿತವಾಗಿ ಊಟ ನೀಡಲು ನಿರಾಕರಿಸಿದ್ದಕ್ಕೆ ರೆಸ್ಟೋರೆಂಟ್‌ ಮ್ಯಾನೇಜರ್‌ ಮೇಲೆ ಮುಂಬೈ ಪೊಲೀಸ್‌ ಅಧಿಕಾರಿ ಹಲ್ಲೆ ನಡೆಸಿರುವ ಘಟನೆಯ ವೀಡಿಯೋ ಎಲ್ಲೆಡೆ ವೈರಲ್‌ ಆಗಿದೆ.

ಸಾಂತಾಕ್ರೂಜ್ ಪೂರ್ವದಲ್ಲಿರುವ ಸ್ವಾಗತ್ ಡೈನಿಂಗ್ ಬಾರ್‌ನಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಪೊಲೀಸ್‌ ಅಧಿಕಾರಿ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರೆಸ್ಟೋರೆಂಟ್‌ ಮ್ಯಾನೇಜರ್‌ ಗಣೇಶ್‌ ಪಾಟಿಲ್‌ ಮೇಲೆ ಸಹಾಯಕ ಪೊಲೀಸ್‌ ಇನ್‌ಸ್ಪೆಕ್ಟರ್‌ ವಿಕ್ರಮ್‌ ಪಾಟೀಲ್‌ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಸೂಪರ್ ಮಾರ್ಕೆಟ್‌ನಲ್ಲಿ ಕಳ್ಳತನ – ತಾಯಿ ಮಗಳ ಕೈ ಚಳಕ ಸಿಸಿಟಿವಿಯಲ್ಲಿ ಸೆರೆ

ರೆಸ್ಟೋರೆಂಟ್‌ ಆಗಮಿಸಿದ ಪೊಲೀಸ್‌ ಅಧಿಕಾರಿ ಕಿಚನ್‌ಗೆ ನೇರವಾಗಿ ತೆರಳಿ ಊಟ ನೀಡುವಂತೆ ಕೇಳಿದ್ದಾರೆ. ಆಗಾಗಲೇ ಪೊಲೀಸ್‌ ಅಧಿಕಾರಿ ಕುಡಿಲ ಅಮಲಿನಲ್ಲಿದ್ದರು. ಆಗ ಮ್ಯಾನೇಜರ್‌, ರಾತ್ರಿ 12:35 ಗಂಟೆಯಾಗಿದೆ. ಕಿಚನ್‌ ಬಾಗಿಲು ಮುಚ್ಚಲಾಗಿದ್ದು, ಊಟ ಇಲ್ಲ ಎಂದು ಮನವರಿಕೆ ಮಾಡಿದ್ದಾರೆ. ಇದರಿಂದ ಕೋಪಗೊಂಡ ಪೊಲೀಸ್‌ ಅಧಿಕಾರಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮ್ಯಾನೇಜರ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಹಲ್ಲೆ ನಡೆಸುತ್ತಿರುವ ಪೊಲೀಸ್‌ ಅಧಿಕಾರಿ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟೀಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಐಫೋನ್ ಬಳಸಿ ಈಗ ರಹಸ್ಯವಾಗಿ ಬೇರೆಯವರ ಮಾತುಗಳನ್ನು ಆಲಿಸಬಹುದು!

Leave a Reply

Your email address will not be published.

Back to top button