ಮುಂಬೈ: ಸಿಮ್ ಸ್ವಾಪಿಂಗ್ ಮೂಲಕ ಮುಂಬೈನ ಮೂಲದ ಉದ್ಯಮಿ ಶಾ ಎಂಬವರ ಬ್ಯಾಂಕ್ ಖಾತೆಯಿಂದ ಸುಮಾರು 1.87 ಕೋಟಿ ರೂ. ದೋಚಿರುವ ಘಟನೆ ನಡೆದಿದ್ದು, ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 27ರ ಮಧ್ಯರಾತ್ರಿ ಮತ್ತು ಡಿಸೆಂಬರ್ 28ರ ನಸುಕಿನ ಜಾವ +44ನಿಂದ ಆರಂಭವಾಗುವ ನಂಬರ್‍ನಿಂದ 6 ಮಿಸ್ಡ್ ಕಾಲ್ ಬಂದಿದೆ. ರಾತ್ರಿ ಬಂದಿದ್ದ ಮಿಸ್ಡ್ ಕಾಲ್‍ಗೆ ಬೆಳಗ್ಗೆ ಉದ್ಯಮಿ ಶಾ ಕಾಲ್ ಮಾಡಿದಾಗ ಅವರ ಸಿಮ್ ಬ್ಲಾಕ್ ಆಗಿರುವುದು ಗೊತ್ತಾಗಿದೆ. ಆದರೆ ಸಿಮ್ ಕಂಪನಿಗೆ ಕಾಲ್ ಮಾಡಿದಾಗ ಡಿಸೆಂಬರ್ 27ರ ರಾತ್ರಿ ಮನವಿ ಮಾಡಿರುವಂತೆ ಸಿಮ್ ಬ್ಲಾಕ್ ಮಾಡಿದ್ದೇವೆ ಎಂದಿದ್ದಾರೆ.
Advertisement
Advertisement
ಸಿಮ್ ಬ್ಲಾಕ್ ಆಗಿರುವ ವಿಷಯ ತಿಳಿದ ಉದ್ಯಮಿಗಳು ಬ್ಯಾಂಕ್‍ಗೆ ಹೋದಾಗ ಶಾ ಅವರ ಕಂಪನಿ ಅಕೌಂಟ್‍ನಿಂದ ಇತರೆ 14 ಬ್ಯಾಂಕ್ ಖಾತೆಗಳಿಗೆ 28 ಬಾರಿ ಹಣ ವರ್ಗಾವಣೆ ಆಗಿರುವುದು ತಿಳಿದಿದೆ. ದೆಹಲಿ, ಪಶ್ಚಿಮ ಬಂಗಾಳ, ಜಾರ್ಖಂಡ್, ಹಾಗೂ ಕೆಲ ಇತರೇ ರಾಜ್ಯಗಳ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ. ಈ ಬಗ್ಗೆ ಉದ್ಯಮಿ ಮುಂಬೈ ಸೈಬರ್ ಕ್ರೈಂ ಬ್ರಾಂಚ್‍ಗೆ ದೂರು ನೀಡಿದ್ದು, ಸುಮಾರು 20 ಲಕ್ಷದಷ್ಟು ಹಣ ಮಾತ್ರ ವಾಪಸ್ ಸಿಕ್ಕಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದನ್ನು ಓದಿ: ಏನಿದು ಸಿಮ್ ಸ್ವಾಪ್? ಮಾಹಿತಿ ಹೇಗೆ ಕದಿಯುತ್ತಾರೆ? ಇಲ್ಲಿದೆ ಪೂರ್ಣ ವಿವರ
Advertisement
ವಂಚಕರು ಆ ಉದ್ಯಮಿಯ ಬ್ಯಾಂಕ್ ಅಕೌಂಟ್ ಮಾಹಿತಿ, ಕ್ರೆಡಿಟ್ ಕಾರ್ಡ್ ನಂಬರ್ ಮುಂತಾದ ಖಾಸಗಿ ಮಾಹಿತಿಯನ್ನು ಪಡೆದು, ಸಿಮ್ ಕಾರ್ಡ್ ಹ್ಯಾಕ್ ಮಾಡಿದ್ದಾರೆ. ಬಳಿಕ ಸಿಮ್‍ಗೆ ಬರುವ ಓಟಿಪಿ ಮೂಲಕ ಉದ್ಯಮಿಯ ಬ್ಯಾಂಕ್ ಖಾತೆಯ ಹಣವನ್ನು ವರ್ಗಾವಣೆ ಮಾಡಿದ್ದಾರೆ ಎಂದು ಸೈಬರ್ ಕ್ರೈಂ ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv