ಮುಂಬೈ: ಮುಂಬೈನ (Mumbai) ಕುರ್ಲಾದಲ್ಲಿ (Kurla) ಸೋಮವಾರ (ಡಿ.09) ರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಅಪಘಾತ ನಡೆದಿದೆ ಎನ್ನಲಾಗಿತ್ತು. ಆದರೆ ತನಿಖೆಯ ಬಳಿಕ ಚಾಲಕನಿಗೆ ತರಬೇತಿ ಇರಲಿಲ್ಲ. ಹಾಗಾಗಿ ಬ್ರೇಕ್ ಬದಲು ಎಕ್ಸಲೇಟರ್‌ನ್ನು ತುಳಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳ ಮಾಹಿತಿ ಪ್ರಕಾರ, ಚಾಲಕನಿಗೆ ತರಬೇತಿ ಇರಲಿಲ್ಲ. ಆತ ಬ್ರೇಕ್ ಹಾಕುವ ಬದಲು ಎಕ್ಸ್ಲೇಟರ್ ಒತ್ತಿದ್ದ. ಇದರಿಂದ ವಾಹನದ ವೇಗ ಹೆಚ್ಚಾದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ.ಇದನ್ನೂ ಓದಿ: ಜಾತಿ ವ್ಯವಸ್ಥೆಯ ಕ್ರೂರ ಘಟನೆ – ಎಸ್‌ಎಂಕೆ ಕೋಲಾರದ ಕಂಬಾಲಪಲ್ಲಿ ದುರಂತ ನಿಭಾಯಿಸಿದ್ದು ಹೇಗೆ?
ಚಾಲಕ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು, ಡಿ.1 ರಿಂದ ಬೃಹತ್ ಮುಂಬೈ ಸರಬರಾಜು ಮತ್ತು ಸಾರಿಗೆ ಸಂಸ್ಥೆಗೆ ಸೇರಿದ್ದನು ಎಂದು ತಿಳಿಸಿದ್ದಾರೆ.
ಘಟನೆ ಏನು?
ಬೃಹತ್ ಮುಂಬೈ ಸರಬರಾಜು ಮತ್ತು ಸಾರಿಗೆ ಸಂಸ್ಥೆಯ ಬಸ್ ಕುರ್ಲಾ ನಿಲ್ದಾಣದಿಂದ ಅಂಧೇರಿಗೆ ಹೋಗುತ್ತಿತ್ತು. ಈ ವೇಳೆ ಅವಘಡ ಸಂಭವಿಸಿದ್ದು, ಬಳಿಕ 30 ರಿಂದ 40 ವಾಹನಗಳಿಗೆ ಡಿಕ್ಕಿ ಹೊಡೆದಿತ್ತು. ಜೊತೆಗೆ ಪಾದಚಾರಿಗಳ ಮೇಲೆ ಹಾಯ್ದು ಮುಂದಕ್ಕೆ ಸಾಗಿ, ಎದುರಿಗೆ ಇದ್ದ ಗೋಡೆಗೆ ಡಿಕ್ಕಿ ಹೊಡೆದು ಬಳಿಕ ಅಲ್ಲಿಯೇ ನಿಂತಿತ್ತು. ಪರಿಣಾಮ 6 ಜನರು ಸಾವನ್ನಪ್ಪಿದ್ದು, 49 ಜನ ಗಾಯಗೊಂಡಿದ್ದರು.
ಬಸ್‌ನ ಬ್ರೇಕ್ ಫೇಲ್ ಆದ ಕಾರಣ ಚಾಲಕನಿಗೆ ನಿಯಂತ್ರಣಕ್ಕೆ ಸಿಗದೇ ಅಪಘಾತ ಸಂಭವಿಸಿದೆ ಎನ್ನಲಾಗಿತ್ತು.ಇದನ್ನೂ ಓದಿ: ಇಂದು ಎಸ್‌ಎಂಕೆ ಅಂತ್ಯಕ್ರಿಯೆ – ಭದ್ರತೆಗೆ 1,000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ