ಮುಂಬೈ: ಮುಂಬೈನಲ್ಲಿ ಒಂದು ಕಡೆ ರಾಜಕೀಯ ಮೇಲಾಟ ನಡೆಯುತ್ತಿದೆ. ಇನ್ನೊಂದೆಡೆ, ಬೆಳ್ಳಂಬೆಳಗ್ಗೆ ಮುಂಬೈನ 4 ಅಂತಸ್ತಿನ ಕಟ್ಟಡ ಕುಸಿತವಾಗಿದ್ದು, ಓರ್ವ ಸಾವನ್ನಪ್ಪಿದ್ದು, 11 ಮಂದಿಗೆ ಗಾಯಗಳಾಗಿರುವ ಘಟನೆ ನಡೆದಿದೆ.
ಮುಂಬೈನ ಹೃದಯಭಾಗ ಕುರ್ಲಾದಲ್ಲಿ 4 ಅಂತಸ್ತಿನ ಕಟ್ಟಡ ಕುಸಿತವಾಗಿದೆ. ಅವಶೇಷಗಳಡಿ ಸಿಲುಕಿದ್ದ 12 ಮಂದಿಯನ್ನು ಈವರೆಗೆ ರಕ್ಷಿಸಿದ್ದು, 10 ಮಂದಿ ಸಿಲುಕಿರುವ ಶಂಕೆ ಇದೆ.
Advertisement
Mumbai: One dead, 8 rescued in Kurla building collapse, more feared trapped
Read @ANI Story: https://t.co/TequBtH13X#Mumbai #buildingcollapse #MumbaiBuildingCollapse #BMC pic.twitter.com/QWiIXEeb45
— ANI Digital (@ani_digital) June 28, 2022
ಅಗ್ನಿಶಾಮಕ ಸಿಬ್ಬಂದಿ ಮತ್ತು ಎನ್‍ಡಿಆರ್‌ಎಫ್ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಕಟ್ಟಡ ದುರಂತವಾದ ಸ್ಥಳಕ್ಕೆ ಆದಿತ್ಯ ಠಾಕ್ರೆ ಭೇಟಿ ಕೊಟ್ಟಿದ್ದಾರೆ. ಈ ಹಿಂದೆ, ಮುಂಬೈ ಪಾಲಿಕೆ ನೋಟಿಸ್ ಕೊಟ್ಟಿತ್ತು. ಆದರೆ ಕಟ್ಟಡದಲ್ಲಿದ್ದವರು ತೆರವು ಮಾಡಿರಲಿಲ್ಲ. ಇದನ್ನೂ ಓದಿ: ಬರಿಗಾಲಲ್ಲಿ ಕಲ್ಲಿನಕೋಟೆ ಏರಿದ IPS ಅಧಿಕಾರಿ- ವೀಡಿಯೋ ವೈರಲ್
Advertisement
Advertisement
ಗಾಯಾಳುಗಳನ್ನು ಘಾಟ್‍ಕೋಪರ್ ಮತ್ತು ಸಿಯಾನ್‍ನಲ್ಲಿರುವ ನಾಗರಿಕ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದ್ದು, ಬದುಕುಳಿದವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: ಮೇಲಧಿಕಾರಿ ವಿರುದ್ಧ ತಿರುಗಿಬಿದ್ದ ಕಾನ್ಸ್‌ಟೇಬಲ್ – ವಿಧಾನಸೌಧದ ಭದ್ರತಾ DCP ವಿರುದ್ಧ ದೂರು