ಮುಂಬೈ: ಇತ್ತೀಚಿಗೆ ಮುಂಬೈ ಕರಾವಳಿಯಲ್ಲಿ (Mumbai) ನಡೆದ ಬೋಟ್ ಅಪಘಾತದಲ್ಲಿ ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಪತ್ತೆಯಾಗಿದೆ.
ಡಿ.18 ರಂದು ನೀಲಕಮಲ್ ಎಂಬ ಪ್ರಯಾಣಿಕ ಹಡಗಿಗೆ ನೌಕಾಪಡೆಯ ಬೋಟ್ ಡಿಕ್ಕಿ ಹೊಡೆದಿತ್ತು. ಪರಿಣಾಮ 13 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. ಈ ವೇಳೆ ನಾಪತ್ತೆಯಾಗಿದ್ದ 7 ವರ್ಷದ ಮೊಹಮ್ಮದ್ ನಿಸಾರ್ ಅಹ್ಮದ್ ಪಠಾಣ್ ಎಂಬ ಬಾಲಕನ ಮೃತದೇಹಕ್ಕಾಗಿ ಶೋಧಕಾರ್ಯ ನಡೆದಿತ್ತು.ಇದನ್ನೂ ಓದಿ: ಮುಂಬೈ ಪಾಲಿಕೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಶಿವಸೇನೆ ಉದ್ಧವ್ ಬಣ – ಸಂಜಯ್ ರಾವತ್ ಸುಳಿವು
Advertisement
Advertisement
ನೌಕಾಪಡೆಯ ಹೆಲಿಕಾಪ್ಟರ್ ಹಾಗೂ ಗಾರ್ಡ್ ದೋಣಿಗಳ ಮೂಲಕ ಕಳೆದ ಮೂರು ದಿನಗಳಿಂದ ಮೃತದೇಹಕ್ಕಾಗಿ ಶೋಧ ನಡೆಸಲಾಗಿತ್ತು. ಮೂರು ದಿನಗಳ ಸುದೀರ್ಘ ಕಾರ್ಯಾಚರಣೆಯ ನಂತರ ಡಿ.21 ರಂದು ಬೆಳಿಗ್ಗೆ ಬಾಲಕನ ಮೃತದೇಹ ಪತ್ತೆಯಾಗಿದೆ. ಈ ಮೂಲಕ ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement
(Maharashtra Maritime Board) ಮಹಾರಾಷ್ಟ್ರ ಮಾರಿಟೈಮ್ ಬೋರ್ಡ್ ದಾಖಲೆಗಳ ಪ್ರಕಾರ, ಪ್ರಯಾಣಿಕ ಹಡಗಿನಲ್ಲಿ 84 ಪ್ರಯಾಣಿಕರು ಹಾಗೂ ಆರು ಸಿಬ್ಬಂದಿ ಪ್ರಯಾಣಕ್ಕೆ ಮಾತ್ರ ಅವಕಾಶವಿದೆ. ಆದರೆ ಹಡಗು ಓವರ್‌ಲೋಡ್ ಆಗಿತ್ತು. ಹೀಗಾಗಿ ಇನ್‌ಲ್ಯಾಂಡ್ ವೆಸೆಲ್ ಕಾಯ್ದೆಯನ್ನು ಉಲ್ಲಂಘಿಸಿದ ಹಡಗಿನ ಪರವಾನಗಿಯನ್ನು ರದ್ದುಗೊಳಿಸಿಲಾಗಿದೆ. ಎರಡು ಹಡಗುಗಳಲ್ಲಿ ಒಟ್ಟು 113 ಜನರಿದ್ದರು. ಆ ಪೈಕಿ 15 ಮಂದಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದರು. ಇನ್ನುಳಿದಂತೆ 98 ಜನರನ್ನು ರಕ್ಷಿಸಲಾಗಿದೆ ಎಂದು ತಿಳಿಸಿದೆ.
Advertisement
ಘಟನೆ ಏನು?
ಡಿ.18 ರಂದು ಮುಂಬೈ ಕರಾವಳಿಯಲ್ಲಿ ಇಂಜಿನ್ ಪ್ರಯೋಗಕ್ಕೆ ಒಳಗಾಗಿದ್ದ ನೌಕಾಪಡೆಯ ಬೋಟ್ `ನೀಲ್ ಕಮಲ್’ ಎಂಬ ಪ್ರಯಾಣಿಕ ಹಡಗಿಗೆ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದು ಅವಘಡ ಸಂಭವಿಸಿತ್ತು. 100ಕ್ಕೂ ಹೆಚ್ಚು ಪ್ರಯಾಣಿಕರನ್ನು ಒಳಗೊಂಡಿದ್ದ ನೀಲ್ ಕಮಲ್ ಹಡಗು ಗೇಟ್‌ವೇ ಆಫ್ ಇಂಡಿಯಾದಿAದ ಎಲಿಫೆಂಟಾ ದ್ವೀಪಕ್ಕೆ ತೆರಳುತ್ತಿತ್ತು, ಈ ವೇಳೆ ಸಂಜೆ 4 ಗಂಟೆ ಸುಮಾರಿಗೆ ಡಿಕ್ಕಿ ಹೊಡೆದಿದೆ. ಈಗಾಗಲೇ ನೌಕಾಪಡೆಯ ಚಾಲಕನ ವಿರುದ್ಧ ಕೊಲಾಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಅಪಾರ್ಟ್‌ಮೆಂಟ್‌ನಲ್ಲಿ ನಿರಂತರ ಕಳ್ಳತನ – 18 ವರ್ಷದಿಂದ ಸೆಕ್ಯೂರಿಟಿಯಾಗಿದ್ದ ಕಳ್ಳ ಅರೆಸ್ಟ್