ಮುಂಬೈ: ಮಹಿಳೆಯೊಬ್ಬಳ ಸಾವಿಗೆ ಕಾರಣವಾಗಿದ್ದ ಬಿಎಂಡಬ್ಲ್ಯೂ ಕಾರು ಅಪಘಾತ ಪ್ರಕರಣಕ್ಕೆ (Mumbai BMW Hit And Run case) ಸಂಬಂಧಿಸಿದಂತೆ, ಆರೋಪಿಗೆ ಮದ್ಯ ನೀಡಿದ್ದ ಮುಂಬೈನ (Mumbai) ಪಬ್‍ನ್ನು ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆ ಅಧಿಕಾರಿಗಳು ಪಬ್‍ನ್ನು ಸೀಲ್ ಮಾಡಿದ್ದರು. ಇದಾದ 24 ಗಂಟೆಗಳಲ್ಲಿ ಅಧಿಕಾರಿಗಳು ಪಬ್ ಮೇಲೆ ಬುಲ್ಡೋಜರ್ ಅಸ್ತ್ರ ಪ್ರಯೋಗಿಸಿದ್ದಾರೆ. ಪಬ್ 25 ವರ್ಷ ವಯಸ್ಸಿನ ಮತ್ತು ಕುಡಿಯಲು ಕಾನೂನುಬದ್ಧ ವಯೋಮಿತಿಗಿಂತ ಕಡಿಮೆ ವಯಸ್ಸಿನ ಆರೋಪಿ ಮಿಹಿರ್ ಶಾಗೆ (24) ಮದ್ಯವನ್ನು ನೀಡಿದೆ. ಅಲ್ಲದೇ ಸರಿಯಾದ ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡಿದ್ದು ಕಂಡು ಬಂದಿದೆ. ಬಾಂಬೆ ವಿದೇಶಿ ಮದ್ಯದ ನಿಯಮಗಳ (Bombay Foreign Liquor Rules) ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬಿಎಂಡಬ್ಲ್ಯೂ ಹಿಟ್ ಆ್ಯಂಡ್ ರನ್ ಕೇಸ್; 72 ಗಂಟೆಗಳ ಬಳಿಕ ರಾಜಕಾರಣಿ ಪುತ್ರ ಅರೆಸ್ಟ್
Advertisement
Advertisement
ಈ ಪ್ರಕರಣದ ಪ್ರಮುಖ ಆರೋಪಿ ಮಿಹಿರ್ ಶಾನನ್ನು ಮಂಗಳವಾರ ಸಂಜೆ ಬಂಧಿಸಲಾಗಿತ್ತು. ಆರೋಪಿ ಮತ್ತು ಆತನ ತಾಯಿ, ಇಬ್ಬರು ಸಹೋದರಿಯರು ಸೇರಿದಂತೆ ಒಟ್ಟು 12 ಜನರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನಾ ಬಣದ ಮುಖಂಡ ರಾಜೇಶ್ ಶಾ ಅವರ ಮಗ ಕೃತ್ಯದ ಬಳಿಕ ಪರಾರಿಯಾಗಿದ್ದ. ಆರೋಪಿ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು ಮೂರು ದಿನಗಳ ಬಳಿಕ ಬಂಧಿಸಿದ್ದರು. ಆರೋಪಿ ತಪ್ಪಿಸಿಕೊಳ್ಳಲು ತಾಯಿ ಮತ್ತು ಸಹೋದರಿಯರು ಶಾಗೆ ಸಹಾಯ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಮೂರು ದಿನಗಳ ಹಿಂದಷ್ಟೇ ಮುಂಬೈನಲ್ಲಿ ಹಿಟ್ & ರನ್ ಪ್ರಕರಣ ವರದಿಯಾಗಿತ್ತು. ಅಪಘಾತಕ್ಕೆ ಮಹಿಳೆಯೊಬ್ಬರು ಬಲಿಯಾಗಿದ್ದರು. ಆಕೆ ಪತಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದ ವೇಳೆ ಮಿಹಿರ್ ಶಾ ಕಾರನ್ನು ಚಲಾಯಿಸಿದ್ದ, ಈ ವೇಳೆ ಆತ ಕುಡಿದಿದ್ದ. ಇಷ್ಟೇ ಅಲ್ಲದೇ ಅಪಘಾತದ ಬಳಿಕ ಕಾರಿನಲ್ಲಿ ತನ್ನ ಸೀಟ್ ಬದಲಿಸಿದ್ದ ಎಂದು ಪೊಲೀಸರು ತಿಳಿಸಿದ್ದರು. ಆದರೆ ಬಂಧನದ ನಂತರ ಮಿಹಿರ್ ಶಾ ವಾಹನ ಚಲಾಯಿಸುತ್ತಿದ್ದುದನ್ನು ಒಪ್ಪಿಕೊಂಡಿದ್ದು, ಕುಡಿದಿರಲಿಲ್ಲ ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ಮಹಿಳೆಯಿಂದ ಪುರುಷನಾದ ಐಆರ್‌ಎಸ್ ಅಧಿಕಾರಿ – ಲಿಂಗ, ಹೆಸರು ಬದಲಾವಣೆಗೆ ಕೇಂದ್ರ ಒಪ್ಪಿಗೆ