ನವದೆಹಲಿ: ಮುಂಬೈ ಭಯೋತ್ಪಾದಕ ದಾಳಿಗೆ (Mumbai Attack) ಸಂಬಂಧಿಸಿದಂತೆ ಉಗ್ರ ತಹವ್ವೂರ್ ಹುಸೇನ್ ರಾಣಾನನ್ನು (Tahawwur Hussain Rana) ರಾಷ್ಟ್ರೀಯ ತನಿಖಾ ದಳಕ್ಕೆ (NIA) ಔಪಚಾರಿಕವಾಗಿ ಹಸ್ತಾಂತರಿಸುವ ಮೊದಲ ಚಿತ್ರವನ್ನು ಅಮೆರಿಕ ಬಿಡುಗಡೆ ಮಾಡಿದೆ.
ಛಾಯಾಚಿತ್ರದಲ್ಲಿ ರಾಣಾನನ್ನು ದೆಹಲಿ ವಿಮಾನ (Delhi Plane) ಏರುವ ಮೊದಲು ಅಮೆರಿಕದ ಮಾರ್ಷಲ್‌ಗಳು (US Marshals) ಭಾರತೀಯ ಅಧಿಕಾರಿಗಳಿಗೆ ಆತನನ್ನು ಹಸ್ತಾಂತರಿಸುತ್ತಿರುವುದನ್ನು ನೋಡಬಹುದು. ಇದನ್ನೂ ಓದಿ: 18 ದಿನಗಳ ಕಾಲ NIA ಕಸ್ಟಡಿಗೆ ರಾಣಾ – ಮಧ್ಯರಾತ್ರಿ ಕೋರ್ಟ್‌ನಲ್ಲಿ ವಾದ ಏನಿತ್ತು?
ಫೋಟೋದಲ್ಲಿ ರಾಣಾನನ್ನು ಅಮೆರಿಕದ ಮಾರ್ಷಲ್‌ಗಳು ಕರೆದೊಯ್ಯುತ್ತಿರುವಾಗ ಆತನ ಸೊಂಟ ಮತ್ತು ಪಾದಗಳನ್ನು ಸರಪಳಿಯಿಂದ ಬಂಧಿಸಿರುವುದನ್ನು ಕಾಣಬಹುದು.
ಭಾರತದಲ್ಲಿ ರಾಣಾ ವಿಮಾನದಿಂದ ಇಳಿಯುವಾಗ ಸೊಂಟ ಮತ್ತು ಕಾಲಿಗೆ ಅಳವಡಿಸಿದ್ದ ಸರಪಳಿಯನ್ನು ತೆಗೆಯಲಾಗಿತ್ತು. ಅಪಾಯಕಾರಿ ಎನಿಸಿದ ಕ್ರಿಮಿನಲ್ ಹೊರತುಪಡಿಸಿ ಬೇರೆ ಆರೋಪಿಗಳ ಕಾಲು ಮತ್ತು ಸೊಂಟವನ್ನು ಸರಪಳಿಯಿಂದ ಬಂಧನ ಮಾಡುವಂತಿಲ್ಲ ಸುಪ್ರೀಂ ಕೋರ್ಟ್ ಆದೇಶ ಇರುವ ಹಿನ್ನೆಲೆಯಲ್ಲಿ ಸರಪಳಿಯನ್ನು ತೆಗೆಯಲಾಗಿತ್ತು. ಎನ್‌ಐಎ ಬಿಡುಗಡೆ ಮಾಡಿದ ಚಿತ್ರದಲ್ಲಿ ರಾಣಾ ಮೈಮೇಲೆ ಯಾವುದೇ ಸರಪಳಿ ಇರಲಿಲ್ಲ. ಇದನ್ನೂ ಓದಿ: ರಾಣಾ ಕರೆತಂದ ವಿಮಾನಕ್ಕೆ ನೀಡಲಾಗಿತ್ತು ಡಮ್ಮಿ ಕೋಡ್, ಮಧ್ಯೆ 11 ಗಂಟೆ ಪಿಟ್ ಸ್ಟಾಪ್!
ಎನ್‌ಐಎ ಅಧಿಕಾರಿಗಳು ಮತ್ತು ಎನ್‌ಎಸ್‌ಜಿ ಕಮಾಂಡೋಗಳಿದ್ದ ವಿಶೇಷ ವಿಮಾನ ಲಾಸ್ ಏಂಜಲೀಸ್‌ನಿಂದ ಹೊರಟ ಬಳಿಕ ರಾಣಾನ ಸುರಕ್ಷತೆ ಮತ್ತು ಸ್ವಯಂ ಹಾನಿ ಮಾಡಿಕೊಳ್ಳದೇ ಇರಲು ಒಬ್ಬ ಎನ್‌ಐಎ ಅಧಿಕಾರಿ ಪ್ರುಯಾಣದ ಉದ್ದಕ್ಕೂ ರಾಣಾನ ಕೈಯನ್ನು ಹಿಡಿಕೊಂಡಿದ್ದರು.
ರಾಣಾ ಪಾಲಂ ವಾಯುನೆಲೆಗೆ ಕರೆತರುತ್ತಿದ್ದಂತೆ ಯಾವುದೇ ಸೋರಿಕೆ ಅಥವಾ ಅನಧಿಕೃತ ಸಂವಹನವನ್ನು ತಡೆಯಲು ದೆಹಲಿ ಪೊಲೀಸರು ಭದ್ರತಾ ವಿಭಾಗದ ಸಿಬ್ಬಂದಿಗೆ ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡುವಂತೆ ಸೂಚಿಸಿದ್ದರು. ಇದನ್ನೂ ಓದಿ: ಹೈಟೆಕ್ ವಿಮಾನ, 11 ಗಂಟೆ ಪ್ರಯಾಣ – ಉಗ್ರ ರಾಣಾನನ್ನ ಅಮೆರಿಕದಿಂದ ಭಾರತಕ್ಕೆ ಕರೆತಂದಿದ್ದು ಹೇಗೆ?
ಮಾಧ್ಯಮದವರ ಗಮನ ಸೆಳೆಯುವುದನ್ನು ತಪ್ಪಿಸಲು ರಾಣಾನನ್ನು ವಿಮಾನ ನಿಲ್ದಾಣದಿಂದ ಪರ್ಯಾಯ ದ್ವಾರದ ಮೂಲಕ ಹೊರಗೆ ಕರೆದೊಯ್ಯಲಾಗಿತ್ತು. ಪಾರದರ್ಶಕವಲ್ಲದ ಜೈಲು ವ್ಯಾನ್‌ನಲ್ಲಿ ಕುಳ್ಳಿರಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.