ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಬಲೂಚಿಸ್ತಾನ್ ಪ್ರಾಂತ್ಯದ ಹಲವೆಡೆ ಸ್ಫೋಟ ನಡೆಸಲಾಗಿದ್ದು, ಐವರು ಸಾವನ್ನಪ್ಪಿದ್ದಾರೆ. ಸ್ಫೋಟದಲ್ಲಿ 10 ಮಂದಿ ಗಾಯಗೊಂಡಿದ್ದಾರೆ.
ಎರಡು ಹ್ಯಾಂಡ್ ಗ್ರೆನೇಡ್‌ಗಳನ್ನು ರಸ್ತೆಯ ಮೇಲೆ ಎಸೆಯಲಾಗಿದೆ. ಅದರಲ್ಲಿ ಒಂದು ಸ್ಫೋಟಗೊಂಡಿದೆ. ಮತ್ತೊಂದನ್ನು ನಿಷ್ಕ್ರಿಯಗೊಳಿಸಲಾಯಿತು ಎಂದು ಕ್ವೆಟ್ಟಾ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇಂಧನ ಟ್ಯಾಂಕರ್ ಭೀಕರ ಸ್ಫೋಟ – 10 ಸಾವು, 40 ಮಂದಿಗೆ ಗಾಯ
ಘಟನೆಗೆ ಖಂಡನೆ ವ್ಯಕ್ತಪಡಿಸಿರುವ ಬಲೂಚಿಸ್ತಾನ ಮುಖ್ಯಮಂತ್ರಿ ಅಬ್ದುಲ್ ಖುಡೂಸ್ ಬಿಜೆಂಜೊ ಅವರು ನಗರದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವಂತೆ ಪೊಲೀಸ್ ಮುಖ್ಯಸ್ಥರಿಗೆ ತಿಳಿಸಿದ್ದಾರೆ. ಕಳೆದ ಕೆಲವು ವಾರಗಳಿಂದ ಪಾಕಿಸ್ತಾನ ವಿವಿಧ ಭಯೋತ್ಪಾದಕ ದಾಳಿಗಳನ್ನು ಎದುರಿಸಿದೆ.
ಬಲೂಚಿಸ್ತಾನದ ಚಮನ್ ನಗರದ ಆಫ್ಘನ್ ಗಡಿ ಹಲವಾರು ಘರ್ಷಣೆಗಳಿಗೆ ಸಾಕ್ಷಿಯಾಗಿದೆ ಎಂದು ಪಾಕಿಸ್ತಾನಿ ಪತ್ರಿಕೆ ವರದಿ ಮಾಡಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ನೆರೆಯ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ತಾಲಿಬಾನ್‌ನೊಂದಿಗೆ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ ಮೈತ್ರಿ ಮಾಡಿಕೊಂಡಿದೆ. ನವೆಂಬರ್‌ನಲ್ಲಿ ಪಾಕಿಸ್ತಾನ ಸರ್ಕಾರದೊಂದಿಗೆ ಅಫ್ಘಾನ್ ತಾಲಿಬಾನ್ ಮಧ್ಯಸ್ಥಿಕೆಯ ಕದನ ವಿರಾಮದ ಅಂತ್ಯವನ್ನು ಘೋಷಿಸಿದಾಗಿನಿಂದ ತೀವ್ರಗಾಮಿ ಇಸ್ಲಾಮಿಕ್ ಸಂಘಟನೆಯು ದಾಳಿಗಳನ್ನು ಹೆಚ್ಚಿಸಿದೆ. ಇದನ್ನೂ ಓದಿ: ರಣಭೀಕರ ಹಿಮ ಸುನಾಮಿಗೆ ತತ್ತರಿಸಿದ ಅಮೆರಿಕ – ಕುದಿಯುವ ನೀರು ಕ್ಷಣ ಮಾತ್ರದಲ್ಲಿ ಐಸ್ ಆಗ್ತಿದೆ