ಲಕ್ನೋ: ಧಾರ್ಮಿಕ ನಗರಗಳ ಪ್ರತಿಷ್ಠಿತ ದೇವಾಲಯಗಳ ಬಳಿ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಬಾರದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಸೂಚನೆ ನೀಡಿದ್ದಾರೆ.
ಸಭೆಯೊಂದರಲ್ಲಿ ಮಾತನಾಡಿದ ಅವರು, ಗೋರಖ್‌ಪುರ, ವಾರಣಾಸಿ ಮತ್ತು ಮಥುರಾ-ವೃಂದಾವನದಂತಹ ಧಾರ್ಮಿಕ ನಗರಗಳ ಪುರಾತನ ಮತ್ತು ಐತಿಹಾಸಿಕ ಸಾರವನ್ನು ಕಾಪಾಡುವ ಸಲುವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ. ದೇವಾಲಯಗಳ ಎತ್ತರವನ್ನು ಮೀರಿದ ಯಾವುದೇ ರೀತಿಯ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡದಂತೆ ಆಡಳಿತ ವಲಯಕ್ಕೆ ಸೂಚಿಸಿದ್ದಾರೆ. ಇದನ್ನೂ ಓದಿ: Ram Mandir: ಭಗವಾನ್ ರಾಮನ ಅಜ್ಜಿ ಮನೆಯಿಂದ 3,000 ಕ್ವಿಂಟಾಲ್ ಅಕ್ಕಿ, ಅತ್ತೆ ಮನೆಯಿಂದ 1,100 ತಟ್ಟೆ ಉಡುಗೊರೆ
Advertisement
Advertisement
ಗೋರಖ್‌ಪುರ, ವಾರಣಾಸಿ ಮತ್ತು ಮಥುರಾ-ವೃಂದಾವನದ ಯೋಜಿತ ಅಭಿವೃದ್ಧಿಗಾಗಿ ಸಂಬಂಧಿಸಿ ಅಧಿಕಾರಿಗಳು ಸಿದ್ಧಪಡಿಸಿದ ಜಿಐಎಸ್ ಆಧಾರಿತ ಮಾಸ್ಟರ್ ಪ್ಲಾನ್-2031 ಅನ್ನು ಸಿಎಂ ಪರಿಶೀಲಿಸಿದರು. ಜೊತೆಗೆ ಅಗತ್ಯ ಮಾರ್ಗಸೂಚಿಗಳನ್ನು ನೀಡಿದರು.
Advertisement
ಧಾರ್ಮಿಕ ನಗರಗಳ ದೇವಾಲಯಗಳು ಮಹತ್ವದ ರಚನೆಗಳಿಗೆ ಹೆಸರುವಾಸಿಯಾಗಿವೆ. ಈ ದೇವಾಲಯಗಳು ಮತ್ತು ಪವಿತ್ರ ಕಟ್ಟಡಗಳ ಎತ್ತರವನ್ನು ಮೀರಿದ ರಚನೆಗಳಿಗೆ ಅನುಮತಿಸಬಾರದು. ನಿಯಂತ್ರಣಕ್ಕೆ ಮಾಸ್ಟರ್ ಪ್ಲ್ಯಾನ್ ಅಳವಡಿಸಬೇಕು. ನಾವು ಸಂಘಟಿತ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: Ayodhya Ram Mandir: 1,200 ಕೆ.ಜಿಯ 42 ಘಂಟೆಗಳು ತಮಿಳುನಾಡಿನಿಂದ ಅಯೋಧ್ಯೆಗೆ ರವಾನೆ
Advertisement
ನಗರದಲ್ಲಿ ಎಲೆಕ್ಟ್ರಿಕ್ ಬಸ್‌ಗಳಿಗೆ ಆದ್ಯತೆ ನೀಡಿ. ಸಾಂಪ್ರದಾಯಿಕ ಇಂಧನ ಬಸ್‌ಗಳನ್ನು ಆದಷ್ಟು ನಗರದಿಂದ ಹೊರಗಿಡಬೇಕು. ಮಲ್ಟಿಲೆವೆಲ್ ಪಾರ್ಕಿಂಗ್‌ಗೆ ಸೂಕ್ತ ಜಾಗವನ್ನು ನಿರ್ಧರಿಸಿ ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಪ್ರತಿ ನಗರದ ಮಾಸ್ಟರ್ ಪ್ಲ್ಯಾನ್‌ನಲ್ಲಿ ಒಟ್ಟು ಪ್ರದೇಶದ ಶೇ.15-16 ರಷ್ಟು ಹಸಿರು ಜಾಗವನ್ನು ಮೀಸಲಿಡುವುದು ಅತ್ಯಗತ್ಯ. ಹಸಿರು ಪಟ್ಟಿ ಇರುವ ಕಡೆ ಯಾವುದೇ ಸಂದರ್ಭದಲ್ಲೂ ಹೊಸ ಕಾಲೊನಿ ಸ್ಥಾಪಿಸಬಾರದು. ಮಾಸ್ಟರ್ ಪ್ಲ್ಯಾನ್‌ನಲ್ಲಿ ಈ ಸೂಚನೆಯನ್ನು ಸೇರಿಸಿ ಎಂದು ಹೇಳಿದ್ದಾರೆ. ಇದನ್ನೂ ಓದಿ: Ayodhya: ರಾಮಮಂದಿರ ಉದ್ಘಾಟನೆಗೂ ಮುನ್ನ ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ರೋಡ್ ಶೋ