ತಾರಾ ದಂಪತಿ ಮೇಲೆ ಬಹುಕೋಟಿ ವಂಚನೆ ಪ್ರಕರಣ

Public TV
1 Min Read
FotoJet 50

ಬಾಬು ರಾಜ್ ಮತ್ತು ವಾಣಿ ವಿಶ್ವನಾಥ್ ತಾರಾ ದಂಪತಿ ಸಿನಿಮಾ ಮಾಡುವ ನೆಪದಲ್ಲಿ ರಿಯಾಜ್ ಎನ್ನುವವರಿಗೆ ಮೋಸ ಮಾಡಿದ್ದಾರೆ ಎಂದು ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತ್ರಿಶೂರ್ ಜಿಲ್ಲೆಯ ತಿರುವಿಲ್ವಾಮಲ ಮೂಲದ ರಿಯಾಜ್ ಎನ್ನುವವರು ಈ ದಂಪತಿ ವಿರುದ್ಧ ದೂರು ನೀಡಿದವರು. ಈ ತಾರಾ ದಂಪತಿ ತಮಗೆ 3.14 ಕೋಟಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

FotoJet 2 24

ರಿಯಾಜ್ ಗಾಗಿ ಸಿನಿಮಾವೊಂದನ್ನು ಮಾಡಿಕೊಡುವುದಾಗಿ ಈ ದಂಪತಿ 2017ರಲ್ಲಿ ಕೋಟಿ ಕೋಟಿ ಹಣವನ್ನು ಬ್ಯಾಂಕ್ ಖಾತೆಗಳಿಗೆ ವಿವಿಧ ಹಂತಗಳಲ್ಲಿ ಪಡೆದುಕೊಂಡಿರುವುದ ರಿಯಾಜ್ ದೂರಿನಲ್ಲಿ ತಿಳಿಸಿದ್ದಾರೆ.  ಈ ಸಿನಿಮಾ ಸಂಬಂಧಿಸಿದಂತೆ ತ್ರಿಶೂರ್ ಮತ್ತು ಕೊಚ್ಚಿಯಲ್ಲಿ ಮಾತುಕತೆ ಆಗಿದೆ ಎಂದೂ ಹೇಳಿದ್ದಾರೆ. ಚಿತ್ರ ಬಿಡುಗಡೆಯಾದ ನಂತರ ಬರುವ ಲಾಭದಲ್ಲಿ ಹಣವನ್ನು ವಾಪಸ್ಸು ಮಾಡುವುದಾಗಿ ತಿಳಿಸಿದ್ದರಂತೆ. ಆದರೆ, ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದಿದ್ದಾರೆ. ಇದನ್ನೂ ಓದಿ:ಶಶಾಂಕ್ ನಿರ್ದೇಶನದ ‘ಲವ್ 360’ ಚಿತ್ರದ ಮತ್ತೊಂದು ಹಾಡು ರಿಲೀಸ್

FotoJet 1 31

ಬಾಬುರಾಜ್ ಮತ್ತು ಪತ್ನಿ ವಾಣಿ ವಿಶ್ವನಾಥ್ ಮಲಯಾಳಂ ಸೇರಿದಂತೆ ದಕ್ಷಿಣದ ಹಲವು ಸಿನಿಮಾಗಳಲ್ಲಿ ನಟಿಸಿದ್ದು, ನಿರ್ಮಾಣಕ್ಕೂ ಮುಂದಾಗಿದ್ದರು. ಬಾಬು ರಾಜ್ ಗಿಂತಲೂ ವಾಣಿ ವಿಶ್ವನಾಥ್ ಫೇಮಸ್ ನಟಿಯಾಗಿ ಗುರುತಿಸಿಕೊಂಡವರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *