ಚಿಕ್ಕಮಗಳೂರು: ರಾಜ್ಯದ ಸುಪ್ರಸಿದ್ಧ ಪ್ರವಾಸಿ ತಾಣ ತಾಲೂಕಿನ ಮುಳ್ಳಯ್ಯನಗಿರಿಗೆ ಇಂದು ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದು, ಕೈಮರ ಚೆಕ್ ಪೋಸ್ಟ್ ಬಳಿ ಭಾರೀ ಸಂಖ್ಯೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
Advertisement
ಗೌರಿ-ಗಣೇಶ ಹಬ್ಬ ಹಾಗೂ ವಾರಾಂತ್ಯದ ಹಿನ್ನೆಲೆ ತಾಲೂಕಿನ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಮಾಣಿಕ್ಯಧಾರ ಭಾಗಕ್ಕೆ ಇಂದು ಸಾವಿರಾರು ಪ್ರವಾಸಿಗರು ಭೇಟಿ ನೀಡಿದ್ದರು. ಏಕಕಾಲಕ್ಕೆ ಭಾರೀ ವಾಹನಗಳು ಬಂದ ಹಿನ್ನೆಲೆ ಮುಳ್ಳಯ್ಯನಗಿರಿ, ಚಿಕ್ಕಮಗಳೂರು ಹಾಗೂ ತರೀಕೆರೆ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಕೈಮರ ಚೆಕ್ ಪೋಸ್ಟ್ ಬಳಿ ಸುಮಾರು ಒಂದು ಗಂಟೆ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದನ್ನೂ ಓದಿ: ಆರೋಗ್ಯ ಕವಚ ಸೇವೆಯಡಿ 120 ಅಂಬುಲೆನ್ಸ್ ಸೇರ್ಪಡೆ – ಸಿಎಂ ಲೋಕಾರ್ಪಣೆ
Advertisement
Advertisement
ಈ ವೇಳೆ ವಾಹನಗಳನ್ನ ನಿಯಂತ್ರಿಸುವಾಗ ಪೊಲೀಸರು, ಚೆಕ್ ಪೋಸ್ಟ್ ಸಿಬ್ಬಂದಿ ಹಾಗೂ ಪ್ರವಾಸಿಗರ ಮಧ್ಯೆ ಮಾತಿನ ಚಕಮಕಿ ಕೂಡ ನಡೆಯಿತು. ಕೇವಲ ಮುಳ್ಳಯ್ಯನಗಿರಿ ಭಾಗಕ್ಕೆ ಒಂದೇ ತಿಂಗಳಲ್ಲಿ 85 ಸಾವಿರಕ್ಕೂ ಅಧಿಕ ಜನ ಬಂದ ಹಿನ್ನೆಲೆ ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಗಿರಿ ಭಾಗಕ್ಕೆ ಪ್ರವಾಸಿಗರಿಗೆ ಮಿತಿ ಹೇರಿತ್ತು. ದಿನಕ್ಕೆ ಕೇವಲ 300 ವಾಹನ 1,200 ಪ್ರವಾಸಿಗರಗಷ್ಟೆ ಅವಕಾಶ ನೀಡಿತ್ತು. ಬೆಳಗ್ಗೆ 6-9ಕ್ಕೆ 150 ಗಾಡಿ, 600 ಪ್ರವಾಸಿಗರು, ಮಧ್ಯಾಹ್ನ 2-4ಕ್ಕೆ 150 ವಾಹನಗಳು 600 ಜನ. ದಿನಕ್ಕೆ ಕೇವಲ 300 ಗಾಡಿ, 1,200 ಪ್ರವಾಸಿಗರಷ್ಟೆ ಅವಕಾಶ ನೀಡಿತ್ತು. ಆದರೆ ಇಂದು ಭಾರೀ ಸಂಖ್ಯೆಯಲ್ಲಿ ಟ್ರಾಫಿಕ್ ಜಾಮ್ ಆದ ಹಿನ್ನೆಲೆ ಚೆಕ್ ಪೋಸ್ಟ್ ಸಿಬ್ಬಂದಿ 250ಕ್ಕೂ ಹೆಚ್ಚು ವಾನಗಳನ್ನ ಗಿರಿಗೆ ಕಳಿಸಿ ಮತ್ತೆ ನಿರ್ಬಂಧಿಸಿತ್ತು.
Advertisement
ಪ್ರವಾಸಿ ವಾಹನಗಳು ಹೇಳದೆ-ಕೇಳದೆ ಮುನ್ನುಗ್ಗಿದವು. ಪ್ರಶ್ನಿಸಿದ ಪೊಲೀಸರ ಜೊತೆ ಪ್ರವಾಸಿಗರು ವಾಗ್ಯುದ್ಧಕ್ಕೆ ಇಳಿದಿದ್ದರು. ಬಳಿಕ ಪೊಲೀಸರ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆ ಎಲ್ಲರೂ ಸುಮ್ಮನಾದರು. ವಾಹನಗಳನ್ನು ಗಿರಿ ಭಾಗಕ್ಕೆ ಕಳಿಸಿ ಟ್ರಾಫಿಕ್ ಜಾಮ್ ನಿಯಂತ್ರಿಸಿದರು. ನಂತರ ಬಂದ ವಾಹನಗಳನ್ನು ಪೊಲೀಸರು ರಸ್ತೆ ಬದಿ ಸಾಲುಗಟ್ಟಿ ನಿಲ್ಲಿಸಿದ್ದರು. ತಡವಾಗಿ ಬಂದ ಪ್ರವಾಸಿಗರು ಮಧ್ಯಾಹ್ನ 2 ಗಂಟೆವರೆಗೂ ಕಾಯಬೇಕೆಂದು ಕೆಲವರು ಬೇರೆ-ಬೇರೆ ಭಾಗಕ್ಕೆ ಹೊರಟರು. ಇನ್ನೂ ಕೆಲವರು ಬೇರೆ ಕಡೆ ಹೋದರೆ ಮತ್ತೆ ಗಿರಿ ಭಾಗಕ್ಕೆ ಹೋಗಲು ಆಗುತ್ತೋ, ಇಲ್ಲವೋ ಎಂದು ರಸ್ತೆ ಬದಿ ಗಾಡಿ ಹಾಕಿ ಟೈಂ ಪಾಸ್ ಮಾಡಲು ಮುಂದಾದರು.