ಬಾಗಲಕೋಟೆ: ಮೀಸಲಾತಿಗೆ ಅಪಸ್ವರ ಎತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಚಂದ್ರು ಅವನೇನು ಮುಖ್ಯಮಂತ್ರಿಯೋ, ಪ್ರಧಾನ ಮಂತ್ರಿಯೋ ಎಂದು ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
Advertisement
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಚಂದ್ರು ಅವನೇನು ಮುಖ್ಯಮಂತ್ರಿಯೋ, ಪ್ರಧಾನ ಮಂತ್ರಿಯೋ? ಪಂಚಮಸಾಲಿ ಸಮುದಾಯ ಮೀಸಲಾತಿ ಬೇಡ ಅನ್ನೋದಕ್ಕೆ ಇವರ್ಯಾರು? ನಮಗೆ ಮೀಸಲಾತಿ ಬೇಕಿದೆ, ಇದಕ್ಕಾಗಿಯೇ ರಾಜ್ಯದಲ್ಲಿ ಪಾದಯಾತ್ರೆ ಮಾಡಿದ್ದೇವೆ. 10 ಲಕ್ಷ ಜನ ಸೇರಿಸಿ ಸಮಾವೇಶ ಮಾಡಿ ನ್ಯಾಯ ಕೇಳಿದ್ದೇವೆ. ನಮಗೆ ಮೀಸಲಾತಿ ಬೇಡ ಅನ್ನೋಕೆ ಇವರ್ಯಾರು? ನೀವು ನಿಮ್ಮಷ್ಟಕ್ಕೆ ಹೋರಾಟ ಮಾಡಿ, ಆದರೆ ನಮ್ಮ ತಂಟೆಗೆ ಬಂದರೆ ಸುಮ್ಮನೆ ಕೂರೋಕಾಗಲ್ಲ. ಜನ ಕೇಳ್ತಾರೆ ಅಂತ ಬಾಯಿಗೆ ಬಂದಂತೆ ಮಾತನಾಡೋಕೆ ಇವನ್ಯಾರು? ಮೀಸಲಾತಿ ಬೇಡ ಅನ್ನೋಕೆ ಇವನಿಗೆ ರೈಟ್ಸ್ ಕೊಟ್ಟೋರು ಯಾರು? ಅವರು ಉದ್ದಾರ ಆಗಿರಬಹುದು, ಸಂವಿಧಾನಾತ್ಮಕವಾಗಿ ಹಕ್ಕಿದೆ ಮೀಸಲಾತಿ ಕೇಳುತ್ತೇವೆ. ಅಗಸ್ಟ್ 26ರಿಂದ ಮಲೆ ಮಹದೇಶ್ವರ ಬೆಟ್ಟದಿಂದ ಮತ್ತೇ ಜಾಗೃತಿ ಸಭೆ ಆರಂಭಿಸುತ್ತೇವೆ ಎಂದರು.ಇದನ್ನೂ ಓದಿ: ಬಲಿಷ್ಠ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರಿಸದಂತೆ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಆಗ್ರಹ
Advertisement
Advertisement
ಬಸನಗೌಡ ಪಾಟೀಲ್ ಯತ್ನಾಳ್ ಸಚಿವ ಸ್ಥಾನ ಕೈ ತಪ್ಪಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಿ.ಪಿ ಯೋಗೇಶ್ವರ್‍ಗೆ ಮಂತ್ರಿ ಸ್ಥಾನ ನೀಡಬಾರದು ಎಂದು ಬಿಎಸ್‍ವೈ ಪಟ್ಟು ಹಿಡಿದಿದ್ದರು ಎಂದು ಸುದ್ದಿ ಕೇಳಿ ಬಂತು. ಯತ್ನಾಳ್ ಸಣ್ಣವರಲ್ಲ, ಅವರಿಗೆ ಶಕ್ತಿಯಿದೆ, ತಾಕತ್ತಿದೆ. ಯತ್ನಾಳ್ ಜೊತೆ ಅವರ ಸಮಾಜವಿದೆ. ಅವರೇ ಮುಂದೆ ಮುಖ್ಯಮಂತ್ರಿ ಯಾಕೆ ಆಗಬಾರದು? ಬಿಜೆಪಿ ಪಕ್ಷದ ಬಗ್ಗೆ ನಾನು ಮಾತನಾಡಲ್ಲ. ನಮ್ಮದು ಪಕ್ಷಾತೀತ ಪಂಚಮಸಾಲಿ ಮೀಸಲಾತಿ ಹೋರಾಟ. ನಮ್ಮ ಹೋರಾಟದಲ್ಲಿ ನಾನು ಕಾಂಗ್ರೆಸ್ ಪಕ್ಷದವನಾದರೂ ಕೂಡಾ ಪಕ್ಷ ಬದಿಗೊತ್ತಿ ನಿಂತಿದ್ದೇನೆ. ಯತ್ನಾಳ್, ರಾಜೂಗೌಡರಿಗೆ ಮಂತ್ರಿಸ್ಥಾನ ನೀಡಬೇಕಿತ್ತು. ಆದರೆ ಅದು ಅವರ ವೈಯಕ್ತಿಕ ವಿಚಾರ ಯತ್ನಾಳ್ ಬಿಜೆಪಿಯ ಹಿರಿಯ ಮನುಷ್ಯ. ಅವರ ವಿಷಯದಲ್ಲಿ ಕುತಂತ್ರ ನಡೆಸಿದೆ. ಕುತಂತ್ರ ಇದ್ದೆ ಇರುತ್ತದೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದ್ದಕ್ಕೆ ಯತ್ನಾಳ್ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ಯಡಿಯೂರಪ್ಪ ನವರೇ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮಂತ್ರಿಸ್ಥಾನ ಕೊಡಬಾರದು ಎಂದಿದ್ದಾರೆ ಎಂದರು. ಇದನ್ನೂ ಓದಿ: ಬೋವಿ ಸ್ವಾಮೀಜಿ, ನಾರಾಯಣಸ್ವಾಮಿ ನಡುವೆ ತಾರಕಕ್ಕೇರಿದ ಒಳಮೀಸಲಾತಿ ಸಮರ
Advertisement
ರಾಜಕೀಯ ಪ್ರೇರಿತ ಕೇಸ್:
ನಿನ್ನೆ ಇಳಕಲ್ ಪಟ್ಟಣಕ್ಕೆ ಮಾಜಿ ಸಚಿವ ವಿನಯ್ ಕುಲಕರ್ಣಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಜಾಮೀನು ಸಿಗುತ್ತೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಸೋಮವಾರ ಸಿಗಬಹುದು ಎಂದುಕೊಂಡಿದ್ವಿ ಆದರೆ ನಿನ್ನೆ ಸಿಕ್ಕಿದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ವಿನಯ್ ಕುಲಕರ್ಣಿಯವರು ಬೆಂಗಳೂರಿಗೆ ಹೊರಟಿದ್ದರು. ಸ್ನೇಹಿತರಿಂದ ವಿಷಯ ತಿಳಿದು ಮಾರ್ಗಮಧ್ಯೆ ಮನೆಗೆ ಬರಮಾಡಿಕೊಂಡೆ. ಚಹಾ ಕುಡಿದು ಹೋಗಿ ಎಂದು ಮನವಿ ಮಾಡಿದ್ದೆ, ಭೇಟಿ ವೇಳೆ ಯಾವುದೇ ಚರ್ಚೆ ಆಗಿಲ್ಲ. ಅವರೊಬ್ಬರು ಸಮಾಜದ ಮುಖಂಡರು ಸಮಾಜ ಅವರ ಜೊತೆ ಇದೆ ಎಂದು ಅಂದೆ ಸ್ಪಷ್ಟಪಡಿಸಿದ್ದೆ. ಏನೋ ದುರದೃಷ್ಟ ಉದ್ದೇಶ ಪೂರ್ವಕವಾಗಿ ಅವರ ಮೇಲೆ ಪ್ರಕರಣ ಹಾಕಲಾಗಿದೆ. ಸುಮಾರು 10 ತಿಂಗಳ ಕಾಲ ಜೈಲುಶಿಕ್ಷೆ ಅನುಭವಿಸುವ ಪರಿಸ್ಥಿತಿ ಬಂತು. ಅವರಿಗೆ ಅನ್ಯಾಯ ಆಗಿದೆ ಭಗವಂತ ಅವರಿಗೆ ನ್ಯಾಯ ಕೊಡುತ್ತಾನೆ. ನ್ಯಾಯಾಲಯಕ್ಕೆ ನಾವು ಗೌರವ ಕೋಡುತ್ತೇವೆ. ವಿನಯ್ ಕುಲಕರ್ಣಿ ಬಿಡುಗಡೆ ವೇಳೆ ಕೋವಿಡ್ ನಿಯಮ ಉಲ್ಲಂಘನೆಗೆ ಪ್ರಕರಣ ದಾಖಲಾಗಿರುವುದು ರಾಜಕೀಯ ಕುತಂತ್ರ. ಶ್ರೀರಾಮುಲು ಜನ ಸೇರಿಸಿ ಜಾತ್ರೆ ಮಾಡಿದರೆ ಅವರಿಗೆ ಕೇಸ್ ಹಾಕಿದ್ರಾ? ನನ್ನ ಮೇಲೂ ಕೇಸ್ ಹಾಕಿದ್ದಾರೆ. ಸಣ್ಣಪುಟ್ಟ ಕಾರ್ಯಕ್ರಮ ಮಾಡಿದರೆ ಕೇಸ್ ಹಾಕುತ್ತಾರೆ. ಇದು ದ್ವೇಷದ ರಾಜಕೀಯ, ಇವತ್ತು ಅವರು ಮಾಡಿದರೆ ನಾಳೆ ನಾವು ಮಾಡುತ್ತೇವೆ ಎಂದರು.