ಮುಂಬೈ: ಮುಖೇಶ್ ಅಂಬಾನಿ ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನದಿಂದ ಕೆಳಗಿಳಿದು, ತನ್ನ ಪುತ್ರ ಆಕಾಶ್ ಅಂಬಾನಿಗೆ ಸ್ಥಾನವನ್ನು ಹಸ್ತಾಂತರಿಸಿದ ಬೆನ್ನಲ್ಲೇ ಪುತ್ರಿ ಇಶಾ ಅಂಬಾನಿಗೂ ಕಂಪನಿಯ ದೊಡ್ಡ ಅಧಿಕಾರವನ್ನು ನೀಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
Advertisement
ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಅವರನ್ನು ರಿಲಯನ್ಸ್‌ನ ರಿಟೇಲ್‌ವಿಭಾಗದ ಅಧ್ಯಕ್ಷೆಯನ್ನಾಗಿ ನೇಮಿಸಲಿದ್ದಾರೆ ಎಂದು ವರದಿಯಾಗಿದ್ದು, ಇದೀಗ 217 ಬಿಲಿಯನ್ ಡಾಲರ್(ಸುಮಾರು 17 ಲಕ್ಷ ಕೋಟಿ ರೂ.) ಮೌಲ್ಯದ ಕಂಪನಿಯನ್ನು ಮುನ್ನಡೆಸಲು ಮುಖೇಶ್ ಅಂಬಾನಿ ತಮ್ಮ ಮಕ್ಕಳನ್ನು ನೇಮಿಸುತ್ತಿದ್ದಾರೆ. ಇದನ್ನೂ ಓದಿ: ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನದಿಂದ ಕೆಳಗಿಳಿದ ಮುಖೇಶ್ ಅಂಬಾನಿ – ಮಗ ಆಕಾಶ್‌ಗೆ ಪಟ್ಟ
Advertisement
ಇಶಾ ಅಂಬಾನಿ ಪ್ರಸ್ತುತ ರಿಲಯನ್ಸ್ ರಿಟೇಲರ್ ವೆಂಚರ್ಸ್ ಲಿಮಿಟೆಡ್‌ನ ನಿರ್ದೇಶಕಿಯಾಗಿದ್ದಾರೆ. ಇಶಾ ಅವರ ಹೊಸ ಹುದ್ದೆ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಿಲ್ಲವಾದರೂ ಶೀಘ್ರವೇ ಕಂಪನಿ ಈ ಬಗ್ಗೆ ತಿಳಿಸುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ.
Advertisement
Advertisement
ಇಶಾ ಮತ್ತು ಆಕಾಶ್ ಮುಕೇಶ್ ಅಂಬಾನಿಯ ಅವಳಿ ಮಕ್ಕಳಾಗಿದ್ದು, ಅನಂತ್ ಹೆಸರಿನ ಕಿರಿಯ ಸಹೋದರನೂ ಇದ್ದಾನೆ. ಇಶಾ ಯೆಲ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿನಿಯಾಗಿದ್ದಾರೆ. ಇದನ್ನೂ ಓದಿ: ಸರ್ಕಾರಿ ಕಾಲೇಜಿನಲ್ಲಿ ಪಿಯು ಓದುವ ವಿದ್ಯಾರ್ಥಿನಿಯರಿಗೆ ಗುಡ್‌ನ್ಯೂಸ್ – ಯಾವುದೇ ಫೀಸ್ ಕಟ್ಟುವ ಅಗತ್ಯವಿಲ್ಲ