ಮುಂಬೈ: ಜಿಯೋ ಮೂಲಕ ಗ್ರಾಹಕರಿಗೆ ಉಚಿತ ಡೇಟಾ ನೀಡಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಈಗ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದಾರೆ.
ಮುಖೇಶ್ ಅಂಬಾನಿ ಅವರ ಸಂಪತ್ತಿನ ಮೌಲ್ಯ ಈ ಬಾರಿ 12.1 ಶತಕೋಟಿ ಡಾಲರ್(ಅಂದಾಜು 77 ಸಾವಿರ ಕೋಟಿ ರೂ.)ಗೆ ಏರಿಕೆಯಾಗುವ ಮೂಲಕ ಈ ಪಟ್ಟ ಸಿಕ್ಕಿದೆ.
Advertisement
ಬ್ಲೂಮ್ ಬರ್ಗ್ ಪ್ರಕಟಿಸಿದ ಪಟ್ಟಿಯಲ್ಲಿ ಚೀನಾದ ಅಲಿಬಾಬಾ ಸಮೂಹದ ಮುಖ್ಯಸ್ಥ ಜಾಕ್ ಮಾ ಮೊದಲ ಸ್ಥಾನದಲ್ಲಿದ್ದರೆ, ಹಾಂಕಾಂಗ್ ಉದ್ಯಮಿ ಲಿ ಕಾಶಿಂಗ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
Advertisement
ಫೋರ್ಬ್ಸ್ ನಿಯತಕಾಲಿಕೆ ಈ ಹಿಂದೆ ವಿಶ್ವದ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಅವರಿಗೆ 20ನೇ ಸ್ಥಾನ ಸಿಕ್ಕಿತ್ತು.
Advertisement
ಉಚಿತ ಡೇಟಾ ನೀಡಿ ಟೆಲಿಕಾಂ ವಲಯದಲ್ಲಿ ಸಂಚಲನ ಮೂಡಿಸಿದ್ದ ಮುಖೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ 40ನೇ ವಾರ್ಷಿಕ ಮಹಾಸಭೆಯಲ್ಲಿ ಕಡಿಮೆ ಬೆಲೆಯ ಎಲ್‍ಟಿಇ ಫೀಚರ್ ಫೋನ್ ಬಿಡುಗಡೆ ಮಾಡಿದ್ದರು. ಈ ಫೋನಿಗೆ 1500 ರೂ. ಬೆಲೆ ವಿಧಿಸಿದ್ದರೂ ಮೂರು ವರ್ಷಗಳ ನಂತರ ಈ ಹಣ ಮರುಪಾವತಿಯಾಗಲಿದೆ ಎಂದು ಘೋಷಿಸಿದ್ದರು.
Advertisement