ಅಬುಧಾಬಿ: ರಿಲಯನ್ಸ್ ಇಂಡಸ್ಟ್ರೀಸ್ನ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು ತಮ್ಮ ಕಿರಿಯ ಪುತ್ರನಿಗಾಗಿ ದುಬೈನಲ್ಲಿರುವ ಅತ್ಯಂತ ದುಬಾರಿ ಮನೆಯನ್ನು ಖರೀದಿ ಮಾಡಿರುವುದಾಗಿ ವರದಿಯಾಗಿದೆ.
ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ದುಬೈನಲ್ಲಿ 80 ಮಿಲಿಯನ್ ಡಾಲರ್ನ(ಸುಮಾರು 640 ಕೋಟಿ ರೂ.) ಸಮುದ್ರ ಬದಿಯ ವಿಲ್ಲಾವನ್ನು ಗುಪ್ತವಾದಿ ಖರೀದಿಸಿದೆ ಎನ್ನಲಾಗಿದೆ. ಇದು ನಗರದಲ್ಲೇ ಅತಿ ದೊಡ್ಡ ಆಸ್ತಿ ವ್ಯವಹಾರವಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಾಮನಗರದಲ್ಲಿ ಕಂಡು ಕೇಳರಿಯದ ಮಳೆ – ಶಾಲಾ, ಕಾಲೇಜುಗಳಿಗೆ ರಜೆ
Advertisement
Advertisement
ಪಾಮ್ ಜುಮೆರಾದಲ್ಲಿರುವ ಮನೆಯನ್ನು ಈ ವರ್ಷದ ಆರಂಭದಲ್ಲಿಯೇ ಮುಖೇಶ್ ಅವರು ತಮ್ಮ ಕಿರಿಯ ಪುತ್ರ ಅನಂತ್ಗಾಗಿ ಖಾಸಗಿಯಾಗಿ ಖರೀದಿ ಮಾಡಿದ್ದಾರೆ. ವಿಲ್ಲಾ ಸಮುದ್ರ ತೀರದಲ್ಲಿದ್ದು, ಅದರಲ್ಲಿ 10 ಮಲಗುವ ಕೋಣೆಗಳು, ಖಾಸಗಿ ಸ್ಪಾ, ಒಳಾಂಗಣ ಹಾಗೂ ಹೊರಾಂಗಣದಲ್ಲಿ ಸ್ವಿಮ್ಮಿಂಗ್ ಪೂಲ್ಗಳಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಅಪ್ಪು ಅಗಲಿ ಹತ್ತು ತಿಂಗಳು: ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬ
Advertisement
ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಮೂವರು ಮಕ್ಕಳಿರುವ ಅಂಬಾನಿ 93.3 ಬಿಲಿಯನ್ ಡಾಲರ್ ಸಂಪತ್ತಿನ ಒಡೆಯರಾಗಿದ್ದಾರೆ. 65 ವರ್ಷದ ಅಂಬಾನಿ ವಿಶ್ವದ 11 ನೇ ಶ್ರೀಮಂತ ವ್ಯಕ್ತಿ. ಹಸಿರು ಶಕ್ತಿ, ತಂತ್ರಜ್ಞಾನ ಮತ್ತು ಇ-ಕಾಮರ್ಸ್ಗಳಲ್ಲಿ ಕಾರ್ಯ ನಿರ್ವಹಿಸಿ, ಸಂಪತ್ತು ವೃದ್ಧಿಸಿರುವ ಇವರು ಇದೀಗ ನಿಧಾನವಾಗಿ ತಮ್ಮ ಮಕ್ಕಳಿಗೆ ಅಧಿಕಾರವನ್ನು ಹಸ್ತಾಂತರಿಸುತ್ತಿದ್ದಾರೆ.