ಹಾವೇರಿ: ಲಕ್ಷಾಂತರ ರೂಪಾಯಿ ಬೆಲೆಬಾಳುವ ಆಸ್ತಿಯನ್ನ ಗೆದ್ದುಕೊಟ್ಟಿದ್ದ ಮೂಕಾಂಬಿಕಾ ಎಕ್ಸ್ಪ್ರೆಸ್ ಹೋರಿ (Mukambika Express Hori) ಚಿರ ಮೌನಕ್ಕೆ ಜಾರಿದೆ.
ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ (Kobbari Hori Habba) ಹೆಸರು ಮಾಡಿದ್ದ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರು ಗ್ರಾಮದ ಸಾಹುಕಾರ ಸಾಮ್ರಾಜ್ಯ ಮೂಕಾಂಬಿಕಾ ಎಕ್ಸ್ಪ್ರೆಸ್ ಹೋರಿ ನಿಧನವಾಗಿದೆ. ಗ್ರಾಮದ ಎನ್‌ಟಿಸಿ ಮುತ್ತುರಾಜ್ ಅವರಿಗೆ ಸೇರಿದ ಈ ಹೋರಿಯನ್ನು ತಬ್ಬಿಕೊಂಡು ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ವಸಿಷ್ಠ ಜೊತೆಗಿನ ನಿಶ್ಚಿತಾರ್ಥದ ಬೆನ್ನಲ್ಲೇ ವಿಶೇಷ ಪೋಸ್ಟ್ ಹಂಚಿಕೊಂಡ ಹರಿಪ್ರಿಯಾ
ಮೂಕಾಂಬಿಕಾ ಎಕ್ಸ್ಪ್ರೆಸ್ ಹೋರಿ (Mukambika Express Hori) ಸಾವಿರಾರು ಅಭಿಮಾನಿಗಳ ಮನಗೆದ್ದಿತ್ತು. ಶಿವಮೊಗ್ಗ, ಶಿರಸಿ, ಹಾನಗಲ್, ಶಿಕಾರಿಪುರ ಸೇರಿದಂತೆ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ತನ್ನದೇ ಹವಾ ಸೃಷ್ಟಿಸಿತ್ತು. ಇದನ್ನೂ ಓದಿ: ವಿವಾಹಪೂರ್ವ ಸೆಕ್ಸ್ ಮಾಡಿದ್ರೆ 1 ವರ್ಷ ಜೈಲು – ಹೊಸ ಕಾನೂನು ಜಾರಿಗೆ ಇಂಡೋನೇಷ್ಯಾ ಸಜ್ಜು
ಎಲ್ಲೇ ಹೋದರೂ ಬಹುಮಾನ ಗಿಟ್ಟಿಸಿಕೊಳ್ಳುತ್ತಿದ್ದ ಮೂಕಾಂಬಿಕಾ, ಈವರೆಗೆ 8 ಬೈಕ್, 40 ಗ್ರಾಂ ಬಂಗಾರದ ಉಂಗುರ, 5 ಟಿವಿ, 4 ಫ್ರಿಡ್ಜ್ ಸೇರಿದಂತೆ ಹಲವು ಬಹುಮಾನವನ್ನ ಗೆದ್ದುಕೊಟ್ಟಿದೆ. ಮೂಕಾಂಬಿಕಾ ಎಕ್ಸ್ಪ್ರೆಸ್ ಹೋರಿ ನಿಧನದಿಂದ ಅಭಿಮಾನಿಗಳು ಆಕ್ರಂದನ ಮುಗಿಲುಮುಟ್ಟಿದೆ. ಮಾಸೂರು ಗ್ರಾಮದಲ್ಲಿ ಶನಿವಾರ ಅಂತ್ಯಕ್ರಿಯೆ ನಡೆಯಲಿದೆ.