ಢಾಕಾ: ಶೇಖ್ ಹಸೀನಾ (Sheikh Hasina) ವಿರುದ್ಧ ದಂಗೆ ರೂಪಿಸಿ ಅಧಿಕಾರಕ್ಕೇರಿದ ಮೊಹಮ್ಮದ್ ಯೂನುಸ್‌ಗೂ (Muhammad Yunus) ಇದೀಗ ಅದೇ ರೀತಿಯ ಸಂಕಷ್ಟ ಎದುರಾಗುವ ಸರ್ವ ಸಾಧ್ಯತೆಯಿದೆ.
ಬಾಂಗ್ಲಾದೇಶದಲ್ಲಿ(Bangladesh)ಮತ್ತೊಂದು ರಾಜಕೀಯ ದಂಗೆ ನಡೆಬಹುದು. ಯೂನುಸ್ ವಿರುದ್ಧವೂ ಕ್ರಾಂತಿ ನಡೆಯಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಬಾಂಗ್ಲಾ ಸೇನೆಯ (Army) ಉನ್ನತಾಧಿಕಾರಿಗಳು ತುರ್ತು ಸಭೆ ನಡೆಸಿದ್ದಾರೆ.
ಯೂನುಸ್ ಸರ್ಕಾರದ ಜವಾಬ್ದಾರಿ ವಹಿಸಿಕೊಂಡ ದಿನದಿಂದ ಬಾಂಗ್ಲಾ ಪ್ರಜೆಗಳಲ್ಲಿ ಅಶಾಂತಿ, ಅಪನಂಬಿಕೆ ಹೆಚ್ಚಿದೆ. ಇದು ಮುಂದಿನ ದಿನಗಳಲ್ಲಿ ತೀವ್ರ ಪರಿಣಾಮಗಳಿಗೆ ಎಡೆ ಮಾಡಿಕೊಡಬಹುದು. ದಂಗೆಯೂ ನಡೆಬಹುದು ಎಂಬ ಆತಂಕ ವ್ಯಕ್ತವಾಗಿದೆ. ಇದನ್ನೂ ಓದಿ: ಹೊಸ ವಿವಾದದಲ್ಲಿ ನಿತ್ಯಾನಂದ – ವರ್ಷಕ್ಕೆ 8.96 ಲಕ್ಷ, ಬೊಲಿವಿಯಾದಲ್ಲಿ ಬೆಂಗಳೂರಿನ 5 ಪಟ್ಟು ಭೂಮಿ ಲೀಸ್‌ಗೆ ಪಡೆದು ವಂಚನೆ
ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಪ್ರಕಾರ ಸೇನೆಯು ಮುಹಮ್ಮದ್ ಯೂನಸ್ ಅವರನ್ನು ಪದಚ್ಯುತಗೊಳಿಸುವ ಮೂಲಕ ಅಧಿಕಾರವನ್ನು ವಶಪಡಿಸಿಕೊಳ್ಳಲಿದೆ. ಈ ಸಂಬಂಧ ಕೆಲ ದಿನಗಳ ಹಿಂದೆ ಬಾಂಗ್ಲಾದೇಶ ಸೇನೆಯ ಪ್ರಮುಖ ತುರ್ತು ಸಭೆ ನಡೆದಿದೆ. ಈ ಸಭೆಯಲ್ಲಿ ಐದು ಲೆಫ್ಟಿನೆಂಟ್ ಜನರಲ್‌ಗಳು, ಎಂಟು ಮೇಜರ್ ಜನರಲ್‌ಗಳು (GOC), ಸ್ವತಂತ್ರ ಬ್ರಿಗೇಡ್‌ಗಳ ಕಮಾಂಡಿಂಗ್ ಅಧಿಕಾರಿಗಳು ಮತ್ತು ಸೇನಾ ಪ್ರಧಾನ ಕಚೇರಿಯ ಇತರ ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು.
ಇತ್ತೀಚಿನ ದಿನಗಳಲ್ಲಿ ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ಬೀದಿಗಳಲ್ಲಿ ಸೇನಾ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಗಸ್ತು ತಿರುಗುತ್ತಿವೆ.