ಪೆರು: ಮದುವೆ ಮನೆಯ ಸಂಭ್ರಮದ ವೇಳೆ ಗುಡ್ಡ ಕುಸಿದು 15 ಮಂದಿ ಮೃತಪಟ್ಟು, 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ದಕ್ಷಿಣ ಅಮೆರಿಕದ ಪೇರುನಲ್ಲಿ ನಡೆದಿದೆ.
ಅಲಾಂಬ್ರ ಹೋಟೆಲ್‍ನಲ್ಲಿ ಮದುವೆಯ ಪಾರ್ಟಿ ನಡೆಯುತ್ತಿತ್ತು. ಅಲ್ಲಿ ಜೋರಾಗಿ ಮಳೆ ಬಂದಿದ್ದ ಕಾರಣ ಮಣ್ಣು ಹಾಗೂ ಮಣ್ಣಿನ ವಸ್ತುಗಳು ಕೆಳಗೆ ಮದುವೆ ಮನೆಯಲ್ಲಿ ನೃತ್ಯ ಮಾಡುತ್ತಿದ್ದ ಅತಿಥಿಗಳ ಮೇಲೆ ಕುಸಿದಿದೆ. ಪರಿಣಾಮ 15 ಮಂದಿ ಮೃತಪಟ್ಟಿದ್ದಾರೆ.
Advertisement
Advertisement
ಈ ಮದುವೆ ಪಾರ್ಟಿಗೆ ಸುಮಾರು 100 ಮಂದಿ ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಅದರಲ್ಲಿ 15 ಮೃತಪಟ್ಟರೆ, 34 ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಅಧಿಕಾರಿಗಳ ಪ್ರಕಾರ ಹೋಟೆಲ್ ಗುಡ್ಡದ ಹತ್ತಿರ ನಿರ್ಮಿಸಲಾಗಿತ್ತು. ಅಲ್ಲದೇ ಗೋಡೆ ಕುಸಿದು ಬಿದ್ದ ಬಳಿಕ ಮದುವೆ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡುತ್ತಿದ್ದವರ ಮೇಲೆ ಮಣ್ಣು ಕುಸಿದು ಬಿದ್ದಿದೆ. ಗೋಡೆ ಪಕ್ಕದಲ್ಲಿದ್ದ 50 ಮಂದಿಗೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv