ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ತಲೇಖಾನ್ ಗ್ರ್ರಾಮದಲ್ಲಿ ಉಗ್ರರ ಪರ ಸಂಭ್ರಮಾಚರಣೆ ಮಾಡಿದ ಘಟನೆ ಖಂಡಿಸಿ ಲಿಂಗಸುಗೂರಿನ ಮುದಗಲ್ ಪಟ್ಟಣ ಬಂದ್ ಮಾಡಲಾಗಿದೆ. ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ.
ಶನಿವಾರ ರಜೆ ಮಾಡಿ ಭಾನುವಾರ ಜೋರು ವ್ಯಾಪಾರ ನಡೆಯುತ್ತಿದ್ದ ಪಟ್ಟಣ ಇಂದು ಸಂಪೂರ್ಣ ಬಂದ್ ಆಗಿದೆ. ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗ್ಗಟ್ಟುಗಳನ್ನ ಮುಚ್ಚಿದ್ದು ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತವಾಗಿದೆ. ಹಿಂದೂಪರ ಸಂಘಟನೆಗಳು ಪಟ್ಟಣದಲ್ಲಿ ಮೆರವಣಿಗೆ, ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಸಂಭ್ರಮಾಚರಣೆ ಮಾಡಿದ್ದ ಘಟನೆ ಹಿನ್ನೆಲೆಯಲ್ಲಿ ತಲೇಖಾನ್ ಗ್ರಾಮದ ಐದು ಜನ ಆರೋಪಿಗಳನ್ನ ಈಗಾಗಲೇ ಮಸ್ಕಿ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಭದ್ರತೆ ಮುಂದುವರಿದಿದೆ.
ಏನಿದು ಘಟನೆ?
ಪುಲ್ವಾಮಾದಲ್ಲಿ ನಡೆದ ಸೈನಿಕರ ಹತ್ಯೆಯನ್ನ ಸಂಭ್ರಮಿಸಿ ಕೆಲ ಕಿಡಿಗೇಡಿ ಮುಸ್ಲಿಂ ಯುವಕರು ತಲೇಖಾನ್ ಗ್ರಾಮದಲ್ಲಿ ತಡರಾತ್ರಿ ಪರಸ್ಪರ ಹಸಿರು ಬಣ್ಣ ಎರಚಾಡಿಕೊಂಡು, ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಈ ವಿಚಾರ ಗ್ರಾಮಸ್ಥರಿಗೆ ತಿಳಿದು ಸ್ಥಳಕ್ಕೆ ಬರುವಷ್ಟರಲ್ಲಿ ಯುವಕರು ಅಲ್ಲಿಂದ ಪರಾರಿಯಾಗಿದ್ದರು. ಅಂದು ಘಟನೆ ಖಂಡಿಸಿ ಗ್ರಾಮಸ್ಥರು ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಘಟನೆಯನ್ನು ಖಂಡಿಸಿ ಮಸ್ಕಿಯಲ್ಲಿ ವಿವಿಧ ಸಂಘಟನೆಗಳಿಂದ ಬೈಕ್ ರ್ಯಾಲಿ ಸಹ ನಡೆಸಲಾಗಿತ್ತು.
ಯುವಕರು ಸಂಭ್ರಮಾಚರಣೆ ನಡೆಸಿರುವ ಗುರುತಾಗಿ ಸ್ಥಳದಲ್ಲಿ ಹಸಿರು ಬಣ್ಣ ಮತ್ತು ಪಟಾಕಿ ಬಾಕ್ಸ್ ಕೂಡ ಪತ್ತೆಯಾಗಿತ್ತು. ವಿಜಯೋತ್ಸವ ಆಚರಣೆ ಮಾಡಿ ಸಮಾಜದಲ್ಲಿ ಕೋಮುಗಲಭೆ ಉಂಟಾಗುವಂತೆ ಮಾಡುವ ಕಾರ್ಯ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv