ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಇಡಿ ECIR ದಾಖಲಿಸುತ್ತಿದ್ದಂತೆ ಮುಡಾ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಹತ್ವದ ಬೆಳವಣಿಗೆಯಲ್ಲಿ ಸಿಎಂ ಪತ್ನಿ ಪಾರ್ವತಿ 14 ಸೈಟ್‌ಗಳನ್ನು ವಾಪಸ್ ಮಾಡಿ ಮುಡಾಗೆ ಪತ್ರ ಬರೆದಿದ್ದಾರೆ.
40 ವರ್ಷದ ರಾಜಕಾರಣದಲ್ಲಿ ಸಣ್ಣ ಕಳಂಕ ಹೊಂದಿಲ್ಲದ ನನ್ನ ಪತಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ, ನನ್ನ ಪಾಲಿಗೆ ಅರಿಶಿನ-ಕುಂಕುಮದ ರೂಪದಲ್ಲಿ ತವರಿನಿಂದ ಸಿಕ್ಕಿದ ಜಮೀನು (Land) ಕಂಟಕವಾಗುತ್ತೆ ಎಂದು ಎಣಿಸಿರಲಿಲ್ಲ. ಹೀಗಾಗಿ 14 ಸೈಟ್ ವಾಪಸ್ ನೀಡ್ತಿದ್ದೇನೆ ಎಂದು ಸಿಎಂ ಪತ್ನಿ ಪಾರ್ವತಿ (Parvathy) ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ವಿಚಾರ ತಮ್ಮ ಪತಿಗೂ ಗೊತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಅಕ್ಟೋಬರ್ 3ಕ್ಕೆ PSI ಪರೀಕ್ಷೆ; ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆ, ENT ವೈದ್ಯರ ನಿಯೋಜನೆ: – ಕೆಇಎ
Advertisement
Advertisement
ಈ ಬೆನ್ನಲ್ಲೇ ಪತ್ನಿ ನಿರ್ಧಾರವನ್ನು ಸಿಎಂ ಸ್ವಾಗತಿಸಿದ್ದಾರೆ. ನನ್ನ ವಿರುದ್ಧ ನಡೆಯುತ್ತಿರುವ ರಾಜಕೀಯ ಷಡ್ಯಂತ್ರದಿಂದ ನೊಂದಿರುವ ನನ್ನ ಪತ್ನಿ ಈ ನಿವೇಶನಗಳನ್ನು ಹಿಂದಿರುಗಿಸುವ ನಿರ್ಧಾರ ಕೈಗೊಂಡಿದ್ದಾರೆ. ಕುಟುಂಬಕ್ಕಷ್ಟೆ ಸೀಮಿತವಾಗಿದ್ದ ನನ್ನ ಪತ್ನಿ, ನನ್ನ ವಿರುದ್ಧದ ದ್ವೇಷದ ರಾಜಕಾರಣಕ್ಕೆ ಬಲಿಯಾಗಿ ಮಾನಸಿಕವಾಗಿ ಹಿಂಸೆ ಅನುಭವಿಸ್ತಿದ್ದಾರೆ ಎಂದು ಸಿಎಂ ಹೇಳಿದ್ದಾರೆ. ಇದರ ಮಧ್ಯೆ, ಪಾರ್ವತಿ ಪತ್ರವನ್ನು ಸಿಎಂ ಪುತ್ರ, ಎಂಎಲ್‌ಸಿ ಯತೀಂದ್ರ ಮುಡಾ ಆಯುಕ್ತರಿಗೆ ಮಂಗಳವಾರ ಬೆಳಗ್ಗೆ ತಲುಪಿಸಿದ್ದಾರೆ. ಇದನ್ನು ಪರಿಶೀಲಿಸಿದ ಮುಡಾ, 14 ಸೈಟ್‌ಗಳ ಸೇಲ್ ಡೀಡ್ ರದ್ದು ಮಾಡಿದೆ. ವಿಜಯನಗರದಲ್ಲಿ ಸಿಎಂ ಪತ್ನಿಗೆ ನೀಡಿದ್ದ 14 ಸೈಟ್‌ಗಳನ್ನು ಮುಡಾ ವಾಪಸ್ ಪಡೆದಿದೆ.
Advertisement
Advertisement
ಸಿಎಂ ಪತ್ನಿ ಸೈಟ್ ವಾಪಸ್.. ಮುಂದೇನು?
* ಕಾನೂನಾತ್ಮಕವಾಗಿ ಯಾವುದೇ ಪರಿಣಾಮ ಬೀರಲ್ಲ
* ಈಗಾಗಲೇ ತನಿಖೆಗೆ ಆದೇಶ ಆಗಿದ್ದು, ತನಿಖೆ ನಡೆಯಲೇಬೇಕು
* ತನಿಖೆಯಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ
* ಸಿಎಂ, ಸಿಎಂ ಪತ್ನಿ, ಉಳಿದ ಆರೋಪಿಗಳು ತನಿಖೆ ಎದುರಿಸಲೇಬೇಕು
* ಪ್ರಕರಣದಲ್ಲಿ ಸಿಎಂಗೆ ಕಾನೂನು ಹೋರಾಟ ಅನಿವಾರ್ಯ
ಅಧಿಕಾರಿಗಳ ಸಮ್ಮುಖದಲ್ಲೇ ಭೂಮಿ ಪರಿಶೀಲನೆ:
ಮುಡಾಗೆ ಸಿಎಂ ಪತ್ನಿ ಸೈಟ್‌ಗಳನ್ನು ವಾಪಸ್ ಮಾಡಿದ ಬೆಳವಣಿಗೆ ಮಧ್ಯೆ ಮೈಸೂರು ಲೋಕಾಯುಕ್ತದಲ್ಲಿ ತನಿಖೆ ಚುರುಕಾಗಿದೆ. ಇವತ್ತು ದೂರುದಾರ ಸ್ನೇಹಮಯಿ ಕೃಷ್ಣರನ್ನು ವಿಚಾರಣೆಗೆ ಒಳಪಡಿಸಿದ್ರು. ಅಲ್ಲದೇ, ಸ್ನೇಹಮಯಿ ಕೃಷ್ಣ ಸಮ್ಮುಖದಲ್ಲಿ ಕೆಸರೆ ಗ್ರಾಮದ ವಿವಾದಿತ ಜಮೀನಲ್ಲಿ ಮಹಜರು ನಡೆಸಿದ್ರು. ಬಳಿಕ ಮಾತಾಡಿದ ಸ್ನೇಹಮಯಿ ಕೃಷ್ಣ, ಇವತ್ತಿನ ಸ್ಥಳ ಮಹಜರು ಪ್ರಕ್ರಿಯೆ ತೃಪ್ತಿ ನೀಡಿದೆ. ಲೋಕಾಯುಕ್ತ ಅಧಿಕಾರಿಗಳೇ ಖುದ್ದು ಸ್ನೇಹಮಯಿ ಕೃಷ್ಣ ಅವರೊಂದಿಗೆ ತೆರಳಿ, ಮೈಸೂರು ತಾಲೂಕು ಕೆಸರೆ ಗ್ರಾಮದಲ್ಲಿರೋ ಸರ್ವೆ ನಂ. 464ರ 3.16 ಎಕರೆ ಭೂಮಿಯನ್ನ ಸ್ಥಳ ಮಹಜರು ನಡೆಸಿದ್ದಾರೆ. ಸಿಎಂ ಪತ್ನಿ ಖರೀದಿಸಿರುವ ಜಮೀನಿನಲ್ಲಿ ನಿವೇಶನ ರಚನೆ ಕುರುಹುಗಳು ಕಂಡುಬಂದಿವೆ. ಗುರುವಾರ ವಿಜಯನಗರ 3-4ನೇ ಹಂತದಲ್ಲಿರುವ 14 ಸೈಟ್‌ಗಳಲ್ಲಿ ಮಹಜರು ನಡೆಯಲಿದೆ. ನನಗೆ ಹಾಜರಿರಲು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆಂದರು.
ಈ ಮಧ್ಯೆ, ದೂರುದಾರ ಸ್ನೇಹಮಯಿ ಕೃಷ್ಣಗೆ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಅವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಕೋರಿ ಗೃಹ ಸಚಿವರು ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ನಸ್ರಲ್ಲಾ ಹತ್ಯೆ ಬಳಿಕ ಹಿಜ್ಬುಲ್ಲಾ ಪ್ರತೀಕಾರದ ದಾಳಿ – ಮೊಸಾದ್ ಹೆಡ್‌ಕ್ವಾರ್ಟಸ್ ಮೇಲೆ ಅಟ್ಯಾಕ್
ಸಿಎಂ ತಲೆದಂಡಕ್ಕೆ ವಿಪಕ್ಷಗಳ ಪಟ್ಟು:
ಸಿಎಂ ಪತ್ನಿ ಸೈಟ್ ವಾಪಸ್ ನೀಡಿದ ಬೆನ್ನಲ್ಲೇ ವಿಪಕ್ಷಗಳ ವಾಗ್ದಾಳಿ ಇನ್ನಷ್ಟು ತೀವ್ರಗೊಂಡಿದೆ. ತಪ್ಪು ಮಾಡಿಲ್ಲ ಅಂದ್ಮೇಲೆ ಸೈಟ್ ಏಕೆ ವಾಪಸ್ ಕೊಡ್ಬೇಕಿತ್ತು? ಅವರು ಸೈಟ್ ವಾಪಸ್ ಮಾಡಿದ್ದಾರೆ ಅಂದ್ಮೇಲೆ ಅವರು ತಪ್ಪು ಒಪ್ಪಿಕೊಂಡಂತೆ ಆಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎನ್ನುತ್ತಾ ಕೇಸರಿ ಪಡೆ ಮುಗಿಬಿದ್ದಿದೆ. ಕಾನೂನು ಕುಣಿಕೆಯಿಂದ ಬಚಾವ್ ಆಗಲು, ರಾಜಕೀಯವಾಗಿ ಅನುಕಂಪ ಪಡೆಯಲು ಸೈಟು ವಾಪಸ್ ಮಾಡಿದ್ದಾರೆ. ಭಾವನಾತ್ಮಕ ದಾಳ ಉರುಳಿಸಿದ್ದಾರೆ. ಆದ್ರೆ, ಇದು ವರ್ಕೌಟ್ ಆಗಲ್ಲ ಎಂದು ಬಿಜೆಪಿ ಹೇಳಿದೆ.
ಸಿದ್ದರಾಮಯ್ಯ ಯಾವುದೇ ಕ್ಷಣದಲ್ಲಿ ರಾಜೀನಾಮೆ ಕೊಡಬಹುದು ಎಂದು ವಿಜಯೇಂದ್ರ ಭವಿಷ್ಯ ಹೇಳಿದ್ದಾರೆ. ಜಂಬೂಸವಾರಿಗೆ ಸಿಎಂ ಪುಷ್ಪಾರ್ಚನೆ ಮಾಡೋದೇ ಅನುಮಾನ ಎಂದು ಶಾಸಕ ಶ್ರೀವತ್ಸ ಹೇಳಿದ್ದಾರೆ. ನಾನು ಹಿಂದೆನೇ ಸಿಎಂಗೆ ಹೇಳಿದ್ದೇ. ಅವರು ಮಾತೇ ಕೇಳಲಿಲ್ಲ, ಈಗ ಸೈಟ್ ವಾಪಸ್ ಮಾಡಿದ್ರೂ ಏನು ಪ್ರಯೋಜನ ಇಲ್ಲ. ತನಿಖೆ ಎದುರಿಸಲೇಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಇದನ್ನೂ ಓದಿ: ಒಂದು ದಿನವಾದ್ರೂ ನನ್ನನ್ನ ಜೈಲಿಗೆ ಕಳಿಸಲು ರಾಜ್ಯ ಸರ್ಕಾರದಿಂದ ಸಂಚು – ಹೆಚ್‌ಡಿಕೆ ಗಂಭೀರ ಆರೋಪ