ಬೈರೂತ್: ಹಿಜ್ಬುಲ್ಲಾದ ದೀರ್ಘಕಾಲದ ಮುಖ್ಯಸ್ಥ ಶೇಖ್ ಹಸನ್ ನಸ್ರಲ್ಲಾ (Hassan Nasrallah) ಹಾಗೂ ಅವರ ಪುತ್ರಿ ಝೈನಾಬ್ ನಸ್ರಲ್ಲಾ ಹತ್ಯೆ ಬಳಿಕ ಲೆಬನಾನ್‌ನ ಹಿಜ್ಬುಲ್ಲಾ (Hezbollah) ಭಯೋತ್ಪಾದಕರ ಗುಂಪು ಮಂಗಳವಾರ ಇಸ್ರೇಲ್ ವಿರುದ್ಧ ಪ್ರತೀಕಾರದ ದಾಳಿ ನಡೆಸಿದೆ.
ಟೆಲ್ ಅವೀವ್ ಬಳಿಯ ಗ್ಲಿಲೋಟ್‌ನ ಇಸ್ರೇಲಿ ಮಿಲಿಟರಿ ಗುಪ್ತಚರ ನೆಲೆಯನ್ನು (Israeli Military Base) ಗುರಿಯಾಗಿಸಿ ದಾಳಿ ನಡೆಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಬೈರೂತ್ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥನ ಪುತ್ರಿಯೂ ಸಾವು; ನಸ್ರಲ್ಲಾ ಬಳಿಕ ಮತ್ತೊಬ್ಬ ಟಾಪ್ ಲೀಡರ್ ಟಾರ್ಗೆಟ್!
Advertisement
Advertisement
ಮಿಲಿಟರಿ ಗುಪ್ತಚರ ಘಟಕ 8200 ಮತ್ತು ಟೆಲ್ ಅವೀವ್‌ನ ಹೊರವಲಯದಲ್ಲಿರುವ ಮೊಸಾದ್ ಪ್ರಧಾನ ಕಚೇರಿಯ ಗ್ಲಿಲೋಟ್ ಬೇಸ್ ಸೇನಾ ನೆಲೆಯ ಮೇಲೆ 4 ರಾಕೆಟ್‌ಗಳನ್ನ ಉಡಾಯಿಸಿದೆ ಎಂದು ಹೇಳಿಕೊಂಡಿದೆ. ಹಿಜ್ಬುಲ್ಲಾ ಮುಖ್ಯಸ್ಥನನ್ನು ಹತ್ಯೆಗೈದ ನಂತರ ಇಸ್ರೇಲ್ ವಿರುದ್ಧ ಇದು ಮೊದಲ ಪ್ರತೀಕಾರದ ದಾಳಿಯಾಗಿದೆ. ಇದನ್ನೂ ಓದಿ: ರೇಪ್ ಆರೋಪಿಗಳಿಗೆ ಪುರುಷತ್ವ ಹರಣ – ಇಟಲಿಯಲ್ಲಿ ಶೀಘ್ರವೇ ಬರಲಿದೆ ಹೊಸ ಕಾನೂನು
Advertisement
Advertisement
ಇತ್ತೀಚೆಗೆ ಹಿಜ್ಜುಲ್ಲಾ ಉಗ್ರರ 800 ಸ್ಥಳಗಳ ಮೇಲೆ ಇಸ್ರೇಲ್ 200 ರಾಕೆಟ್ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಲೆಬನಾನ್‌ನ ಸುಮಾರು 492 ಮಂದಿ ಸಾವನ್ನಪ್ಪಿದ್ದರು. ಲೆಬನಾನ್ ಮೇಲೆ ರಾಕೆಟ್ ದಾಳಿ ನಡೆಸಿದ ಬಳಿಕ ಲೆಬನಾನ್‌ನ ಹೆಜ್ಬುಲ್ಲಾ (Lebanonʼs Hezbollah) ಭಯೋತ್ಪಾದಕ ಸಂಘಟನೆ ಹಾಗೂ ಇಸ್ರೇಲ್ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಈ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಲೆಬನಾನ್‌ನಲ್ಲಿ ಕದನ ವಿರಾಮದ (Ceasefire) ಪ್ರಸ್ತಾಪವನ್ನು ತಿರಸ್ಕರಿಸಿ, ಇನ್ನೂ ಪೂರ್ಣ ಪ್ರಮಾಣದಲ್ಲಿ ದಾಳಿ ನಡೆಸಲು ಕರೆ ನೀಡಿದ್ದರು. ಈ ಬೆಳಣಿಗೆ ನಡೆದ ಮೂರ್ನಾಲ್ಕು ದಿನಗಳಲ್ಲೇ ಇಸ್ರೇಲ್ ವಾಯುದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ, ಆತನ ಪುತ್ರಿ, ಮತ್ತೊಬ್ಬ ನಾಯಕನನ್ನು ಸಾಲು ಸಾಲಾಗಿ ಹತ್ಯೆ ಮಾಡಿತು.
ಕಟ್ಟರ್ ಮೂಲಭೂತವಾದಿಯಾಗಿದ್ದ ನಸ್ರಲ್ಲಾ.. 1992ರಿಂದ ಹಿಜ್ಬುಲ್ಲಾದ ಮುಖ್ಯಸ್ಥನಾಗಿದ್ದು, ವಿಶ್ವದಲ್ಲಿ ಭಯೋತ್ಪಾದನೆಯನ್ನು ಪೋಷಿಸುತ್ತಿದ್ದ. ಹಿಜ್ಬುಲ್ಲಾ ಸಂಘಟನೆ ಸೇರಿದವರಿಗೆ ಉಗ್ರ ತರಬೇತಿ ನೀಡುತ್ತಿದ್ದ. ಇರಾನ್‌ನಿಂದ ಕ್ಷಿಪಣಿ ತಂದು ಇಸ್ರೇಲ್ ಮೇಲೆ ದಾಳಿ ಮಾಡ್ತಿದ್ದ. ನಸ್ರಲ್ಲಾ ಹತ್ಯೆ ಬೆನ್ನಲ್ಲೇ ಈವರೆಗೆ 11 ಉಗ್ರರನ್ನು ಹೊಡೆದಿರುವುದಾಗಿ ಇಸ್ರೇಲ್ ಸೇನೆಯೇ ಫೋಟೋ-ಹುದ್ದೆ ಸಮೇತ ಟ್ವೀಟ್ ಮಾಡಿದೆ. ಇಸ್ರೇಲ್ ವೈಮಾನಿಕ ದಾಳಿಯಲ್ಲಿ ನಸ್ರಲ್ಲಾ ಪುತ್ರಿ, ಹಿಜ್ಬುಲ್ಲಾದ ಕ್ಷಿಪಣಿ ಘಟಕದ ಕಮಾಂಡರ್ ಮೊಹಮ್ಮದ್ ಅಲಿ ಇಸ್ಮಾಯಿಲ್, ಉಪ ಕಮಾಂಡರ್ ಹುಸೇನ್ ಅಹ್ಮದ್ ಇಸ್ಮಾಯಿಲ್ ಕೂಡ ಸಾವಿಗೀಡಾಗಿದ್ದರು. ಇದನ್ನೂ ಓದಿ: ಮ್ಯಾಪ್ ತೋರಿಸಿ ಭಾರತ ವರ, ಇರಾನ್ ಶಾಪ ಎಂದ ಇಸ್ರೇಲ್ ಪ್ರಧಾನಿ ನೆತನ್ಯಾಹು