ಬೆಂಗಳೂರು: ಮುಡಾ ಹಗರಣ (MUDA Scam) ಸಂಬಂಧ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ದ ದಾಖಲಾದ ಎರಡು ಖಾಸಗಿ ದೂರುಗಳ ವಿಚಾರಣೆಯನ್ನು ಬೆಂಗಳೂರಿನ ಜನ್ರಪತಿನಿಧಿಗಳ ಕೋರ್ಟ್ ಇಂದು ನಡೆಸಿತು.
ಸಿಎಂ ವಿರುದ್ಧ ತನಿಖೆಗೆ ಪೂರ್ವಾನುಮತಿ ಬೇಕೇ ಬೇಕು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು. ಆದರೆ ಈ ಹಂತದಲ್ಲಿ ಪೂರ್ವಾನುಮತಿ ಬೇಕಿಲ್ಲ ಎಂದು ದೂರುದಾರನ ಪರ ವಕೀಲರು ವಾದ ಮಂಡಿಸಿದರು. ಕೊನೆಗೆ ಕೋರ್ಟ್ ಆದೇಶವನ್ನು ಆಗಸ್ಟ್ 20ಕ್ಕೆ ಕಾಯ್ದಿರಿಸಿತು. ಇದನ್ನೂ ಓದಿ: ಸಿಎಂ ಜೊತೆ ಚರ್ಚಿಸಿ ಅಕ್ಕಿ ಪೂರೈಕೆಗೆ ಕೇಂದ್ರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಲಾಗುವುದು: ಕೆ.ಹೆಚ್ ಮುನಿಯಪ್ಪ
Advertisement
Advertisement
ಇದೇ ವೇಳೆ ಟಿಜೆ ಅಬ್ರಾಹಂ ಅರ್ಜಿಯ ವಿಚಾರಣೆಯನ್ನು ಆಗಸ್ಟ್ 21ಕ್ಕೆ ಕೋರ್ಟ್ ಮುಂದೂಡಿತು. ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ದೂರನ್ನು ತಿರಸ್ಕರಿಸಿ ಎಂದು ಆಲಂ ಪಾಶ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ. ಇದನ್ನೂ ಓದಿ: ಟಿಬಿ ಡ್ಯಾಂಗೆ ಸ್ಟಾಪ್ ಲಾಗ್ ಗೇಟ್ ಅಳವಡಿಸಲು ಪ್ಲಾನ್ – ಏನೇನು ತಯಾರಿ ನಡೆಯುತ್ತಿದೆ?
Advertisement
ಈ ಮಧ್ಯೆ ಸಿಎಂ ವಿರುದ್ಧ ಇಬ್ಬರು ನೀಡಿರುವ ಖಾಸಗಿ ದೂರುಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಹೇಳಿದ್ದಾರೆ.