– ಇ.ಡಿ ಕೇಳಿದ 9 ಪ್ರಶ್ನೆಗಳು `ಪಬ್ಲಿಕ್ ಟಿವಿ’ಗೆ ಲಭ್ಯ
ಮೈಸೂರು: ಮುಡಾ ಹಗರಣ ಹಿನ್ನೆಲೆ ಇಡಿ ಟೀಂ ಬೆಂಗಳೂರು ಮತ್ತು ಮೈಸೂರಿನಲ್ಲಿ ಇಡಿ ದಾಳಿ (ED Raid) ಮಾಡಿದೆ. ದಾಳಿ ವೇಳೆ ಇಡಿ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ ರಾಕೇಶ್ ಪಾಪಣ್ಣ ಹಾಗೂ ಮುಡಾ ಮಾಜಿ ಆಯುಕ್ತ ನಟೇಶ್ (DB Natesh) ವಿಚಾರಣೆ ಮುಕ್ತಾಯ ಮಾಡಿ ಪ್ರಮುಖ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಅಧಿಕಾರಿಗಳು ತಮ್ಮ ರಣಬೇಟೆ ಮುಂದುವರಿಸಲಿದ್ದಾರೆ.
Advertisement
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಆಕ್ರಮ ಹಂಚಿಕೆ ಹಗರಣದ (MUDA Scam) ತನಿಖೆಯನ್ನು ಇಡಿ ಚುರುಕುಗೊಳಿಸಿದೆ. ಕಳೆದೆರಡು ದಿನಗಳಿಂದ ಇಡಿ ಅಧಿಕಾರಿಗಳು ಬೆಂಗಳೂರು ಮೈಸೂರಿನ 9 ಕಡೆಗಳಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ರಾಕೇಶ್ ಪಾಪಣ್ಣ (Rakesh Papanna) ಕೆಲವು ರಾಜಕಾರಣಿಗಳ ಬೇನಾಮಿ ಇರಬಹುದು ಹಾಗೂ ಮುಡಾದ ಹಲವು ವ್ಯವಹಾರಗಳಲ್ಲಿ ರಾಕೇಶ್ ಮಧ್ಯಸ್ಥಿಕೆ ವಹಿಸಿದ್ದರು ಎಂಬ ಹಿನ್ನೆಲೆ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. 2 ದಿನಗಳ ಕಾಲ 5 ಅಧಿಕಾಗಳಿಂದ ಸತತ 35 ಗಂಟೆಗಳ ತನಿಖೆ ನಡೆಸಿ ಬಳಿಕ ಇಡಿ ಅಧಿಕಾರಿಗಳು ವಾಪಸ್ ಆಗಿದ್ದಾರೆ.
Advertisement
Advertisement
ಇತ್ತ ಬೆಂಗಳೂರಿನ (Bengaluru) ಮಲ್ಲೇಶ್ವರ 10ನೇ ಕ್ರಾಸ್‌ನಲ್ಲಿರುವ ಮುಡಾ ಮಾಜಿ ಆಯುಕ್ತ ನಟೇಶ್ ಮನೆಯಲ್ಲಿ ಮಂಗಳವಾರ ಬೆಳ್ಳಿಗ್ಗೆ 8 ಗಂಟೆಯಿಂದ ಇಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮಾಡಿದ್ರು. ನಟೇಶ್ ಮುಡಾ ಆಯುಕ್ತರಾಗಿದ್ದಾಗ ಸಿಎಂ ಪತ್ನಿಗೆ ಸೈಟ್ ಹಂಚಿಕೆಯಾಗಿದ್ದರ ಬಗ್ಗೆ ದಾಖಲೆ ತಡಕಾಡಿದ್ರು. ಆದ್ರೆ ಇಡಿ ತನಿಖೆಗೆ ಮಾಜಿ ಆಯುಕ್ತ ನಟೇಶ್ ಸಹಕರಿಸದೇ ನಾನು ಪ್ರಕರಣದಲ್ಲಿ ತಪ್ಪೇ ಮಾಡಿಲ್ಲ. ಸರ್ಕಾರದ ಆದೇಶ ಚಾಚು ತಪ್ಪದೆ ಪರಿಪಾಲನೆ ಮಾಡಿದ್ದೀನಿ. ಬಿಲ್ಡರ್ ಮಂಜುನಾಥ್ ಕಾನೂನಾತ್ಮಕವಾಗಿ ಲೇಔಟ್ ನಿರ್ಮಾಣ ಮಾಡಿದ್ದಾರೆ. 50:50 ಅನುಪಾತದಲ್ಲಿ ಯಾವುದೇ ಅವ್ಯವಹಾರ ಮಾಡಿಲ್ಲವೆಂದರು. ಸಂಜೆವರೆಗೂ ನಟೇಶ್ ಮನೆಯಲ್ಲಿ ಶೋಧ ಮಾಡಿದ ಅಧಿಕಾರಿಗಳು ಎರಡು ಬ್ಯಾಗ್‌ನಲ್ಲಿ ದಾಖಲೆಗಳನ್ನ ಕೊಂಡೊಯ್ದರು. ತನಿಖೆಗೆ ಸಹಕರಿಸದ ಕಾರಣ ನಟೇಶ್‌ನನ್ನು ಅಧಿಕಾರಿಗಳು ವಶಕ್ಕೆ ಪಡೆದ್ರು. ನಂತರ ಶಾಂತಿನಗರದ ಇಡಿ ಕಚೇರಿಗೆ ವಿಚಾರಣೆ ಮಾಡಿ ಕಳುಹಿಸಿದ್ದಾರೆ.
Advertisement
ಪ್ರಕರಣಕ್ಕೆ ಸಂಬಂಧಿಸಿಂತೆ ಮುಂದಿನ ವಾರ ವಿಚಾರಣೆಗೆ ಹಾಜರಾಗಲು ರಾಕೇಶ್ ಪಾಪಣ್ಣಗೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. ಮುಡಾ ಹಗರಣದ ತನಿಖೆಯಲ್ಲಿ ಇನ್ನು ಯರ‍್ಯಾರಿಗ ಹಬ್ಬ ಕಾದಿದೆ ನೋಡಬೇಕಿದೆ. ಇದನ್ನೂ ಓದಿ: ಭಾರತದಲ್ಲಿ ವಾಯು ಮಾಲಿನ್ಯದಿಂದ ವರ್ಷಕ್ಕೆ 33000 ಸಾವು – ಬೆಂಗ್ಳೂರಿನ ಸ್ಥಿತಿ ಏನು?
ಇಡಿ ಅಧಿಕಾರಿಗಳ ಪ್ರಶ್ನೆಗಳು ಪಬ್ಲಿಕ್ ಟಿವಿಗೆ ಲಭ್ಯ:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 50:50 ಸೈಟು ಹಂಚಿಕೆ ವಿಚಾರವಾಗಿ ದಾಳಿ ನಡೆಸಿದ್ದ ಇ.ಡಿ ಅಧಿಕಾರಿಗಳು ವಕ್ರತುಂಡ ಗೃಹನಿರ್ಮಾಣ ಸಹಕಾರ ಸಂಘದ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನ ಕೇಳಿದೆ ಎಂಬ ಮಾಹಿತಿ `ಪಬ್ಲಿಕ್ ಟಿವಿ’ಗೆ ಲಭ್ಯವಾಗಿದೆ. ಜಯರಾಮ್ ಎಂಬವರಿಗೆ ಸೇರಿದ್ದ ಎಂಎಂಜಿ ಕನ್ಸ್‌ಸ್ಟ್ರಕ್ಷನ್ ಕಚೇರಿ ಹಾಗೂ ವಕ್ರತುಂಡ ಗೃಹನಿರ್ಮಾಣ ಸಹಕಾರ ಸಂಘದಲ್ಲೇ ಅಧಿಕಾರಿಗಳು ಹೇಳಿಕೆಯನ್ನ ದಾಖಲು ಮಾಡಿಕೊಂಡಿದ್ದಾರೆ. ಪ್ರತಿಯೊಂದು ಪ್ರಶ್ನೆ ಮತ್ತು ಉತ್ತರವನ್ನು ಕಚೇರಿಯಲ್ಲೇ ಕುಳಿತು ಟೈಪ್ ಮಾಡಿಕೊಂಡಿದ್ದಾರೆ. ಜೊತೆಗೆ ದಾಖಲೆ ಪರಿಶೀಲನೆಯ ನಂತರ ಅನುಮಾನದ ಮೇಲೆ ಒಂದುಷ್ಟು ಪ್ರಶ್ನೆಗಳನ್ನ ಕೇಳಿದ್ದಾರೆ. `ಇ.ಡಿ ಕೇಳಿದ ಪ್ರಶ್ನೆಗಳು ಉನ್ನತ ಮೂಲಗಳಿಂದ `ಪಬ್ಲಿಕ್ ಟಿವಿ’ಗೆ ಲಭ್ಯವಾಗಿದೆ. ಇದನ್ನೂ ಓದಿ: ಯಶ್ ‘ಟಾಕ್ಸಿಕ್’ ಸಿನಿಮಾಗಾಗಿ ಮರ ಕಡಿದ ಆರೋಪ – ಸಚಿವರ ಆರೋಪಕ್ಕೆ ಚಿತ್ರತಂಡದ ಸ್ಪಷ್ಟನೆ ಏನು?
ಇ.ಡಿ ಪ್ರಶ್ನೆಗಳೇನು?
1. ವಕ್ರತುಂಡ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಎಷ್ಟು ಜನ ಸದಸ್ಯರಿದ್ದಾರೆ? ಎಷ್ಟು ಬ್ಯಾಂಕ್ ಅಕೌಂಟ್ ಗಳನ್ನ ಹೊಂದಿದ್ದೀರಾ?
2. ಸಂಘದ ಸಾಮಾನ್ಯ ಸಭೆ ಯಾವಾಗ ನಡೆಸಿದ್ದೀರ? ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಯಾವುದು?
3. ಸಹಕಾರ ಸಂಘದ ನಿರ್ದೇಶಕರ ವಿವರ ತಿಳಿಸಿ?
4. ಇಲ್ಲಿಯವರೆಗೆ ಎಷ್ಟು ಲೇಔಟ್ ನಿರ್ಮಾಣ ಮಾಡಿದ್ದೀರಾ?
5. ಎಷ್ಟು ಜನರಿಂದ ಮುಂಗಡವಾಗಿ ಹಣ ಪಡೆದಿದ್ದೀರಾ?
6. ಇನ್ನೂ ಎಷ್ಟು ಜನರಿಗೆ ನಿವೇಶನ ಕೊಡಬೇಕು?
7. ಹಲವು ಬ್ಯಾಂಕ್ ಖಾತೆಗಳಿಗೆ ಕೆವೈಸಿ ಲಿಂಕ್ ಆಗಿಲ್ಲ, ದಾಖಲೆಗಳು ಇಲ್ಲದಿದ್ದರು ಹೇಗೆ ವ್ಯವಹಾರ ಮಾಡುತ್ತಿದ್ದೀರಿ?
8. ಮುಡಾದಿಂದ ವಕ್ರತುಂಡ ಗೃಹನಿರ್ಮಾಣ ಸಹಕಾರ ಸಂಘಕ್ಕೆ 50:50 ಅನುಪಾತದಡಿ ಮುಡಾದಿಂದ ಎಷ್ಟು ನಿವೇಶನ ಬಂದಿದೆ?
9 ಕಚೇರಿಯಲ್ಲಿ ಪ್ರತಿಯೊಂದು ದಾಖಲೆಗಳನ್ನ ಪರಿಶೀಲನೆ ಪ್ರಶ್ನೆಗಳನ್ನ ಕೇಳುತ್ತಿರುವ ಇಡಿ ಅಧಿಕಾರಿಗಳು.