– ಬೇನಾಮಿ ವ್ಯಕ್ತಿಗಳಿಗೆ ಸೈಟ್ ಹಂಚಿಕೆ
– ಡಿ.ಬಿ.ನಟೇಶ್‌ರಿಂದ ಭಾರೀ ಅಕ್ರಮ
ಬೆಂಗಳೂರು: 14 ಸೈಟ್ ಅಲ್ಲದೇ ಹಲವು ಸೈಟ್‌ಗಳನ್ನು ಅಕ್ರಮ ಮಾರಾಟ ಮಾಡಲಾಗಿದೆ. ಸಹಕಾರ ಸಂಘಗಳನ್ನು ಬಳಸಿ ದುರ್ಬಳಕೆ ಮಾಡಲಾಗಿದೆ. ಬೇನಾಮಿ ವ್ಯಕ್ತಿಗಳಿಗೆ ಹಂಚಿಕೆ ಮಾಡಿ ಕೋಟ್ಯಂತರ ರೂ. ಹಣವನ್ನು ವಂಚಿಸಲಾಗಿದೆ.
ಇದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ನಿವೇಶನ ಹಂಚಿಕೆ ಹಗರಣದ ಬಗ್ಗೆ ಜಾರಿ ನಿರ್ದೇಶನಾಲಯ (ED) ನಡೆಸಿದ ತನಿಖೆಯಲ್ಲಿ ಕಂಡು ಬಂದ ಅಂಶಗಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 142 ಸೈಟ್ ಗಳು ಸೇರಿದಂತೆ 300 ಕೋಟಿ ರೂ. ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ತಿಳಿಸಿದೆ.
Advertisement
ಮೈಸೂರಿನ ಗಂಗರಾಜು ಹಾಗೂ ಸ್ನೇಹಮಯಿ ಕೃಷ್ಣ ನೀಡಿದ್ದ ದೂರಿನ ಆಧಾರದ ಮೇಲೆ ಮೈಸೂರು ಮುಡಾ ಕಚೇರಿ ಸೇರಿ, ಅಧಿಕಾರಿಗಳ ಮೇಲೆ ಇಡಿ ದಾಳಿ ನಡೆಸಿತ್ತು.
Advertisement
Advertisement
ಇಡಿ ಹೇಳಿದ್ದೇನು?
ಕರ್ನಾಟಕದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಇತರರ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಅಂದಾಜು 300 ಕೋಟಿ ರೂ. ಮೌಲ್ಯದ 142 ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಈ ಆಸ್ತಿಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿರುವ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ನೋಂದಾಯಿಸಲಾಗಿತ್ತು.
Advertisement
ಕರ್ನಾಟಕದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಲೋಕಾಯುಕ್ತ ಪೊಲೀಸರು ಐಪಿಸಿಯ ವಿವಿಧ ಸೆಕ್ಷನ್ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಅಡಿಯಲ್ಲಿ ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಇಡಿ ತನಿಖೆ ನಡೆಸಿತ್ತು. ಇದನ್ನೂ ಓದಿ: ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು: ಕಾಂಗ್ರೆಸ್ ನಾಯಕರಿಗೆ ಖರ್ಗೆ ಖಡಕ್ ಸಂದೇಶ
ಮುಡಾ ಸ್ವಾಧೀನಪಡಿಸಿಕೊಂಡ 3 ಎಕರೆ 16 ಗುಂಟೆ ಭೂಮಿಗೆ ಬದಲಾಗಿ ತಮ್ಮ ಪತ್ನಿ ಬಿ.ಎಂ. ಪಾರ್ವತಿ ಅವರ ಹೆಸರಿನಲ್ಲಿರುವ 14 ನಿವೇಶನಗಳ ಪರಿಹಾರವನ್ನು ಪಡೆಯಲು ಸಿದ್ದರಾಮಯ್ಯ ತಮ್ಮ ರಾಜಕೀಯ ಪ್ರಭಾವವನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಮೂಡಾ 3,24,700 ರೂ.ಗೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡರೆ ದುಬಾರಿ ಬೆಲೆ ಇರುವ ಜಾಗದಲ್ಲಿ ಅಂದಾಜು 60 ಕೋಟಿ ರೂ. 14 ನಿವೇಶನಗಳನ್ನು ಪರಿಹಾರವಾಗಿ ನೀಡಲಾಗಿದೆ. ಪಾರ್ವತಿ ಅವರಿಗೆ ಅಕ್ರಮ ಪರಿಹಾರ ನಿವೇಶನ ಹಂಚಿಕೆಯಲ್ಲಿ ಮಾಜಿ ಮುಡಾ ಆಯುಕ್ತ ಡಿ.ಬಿ. ನಟೇಶ್ ಪಾತ್ರ ಪ್ರಮುಖ ಪಾತ್ರ ವಹಿಸಿದ್ದಾರೆ.
ತನಿಖೆಯ ವೇಳೆ ಪಾರ್ವತಿ ಅವರಿಗೆ ಹಂಚಿಕೆಯಾದ 14 ನಿವೇಶನಗಳನ್ನು ಹೊರತುಪಡಿಸಿ, ಹೆಚ್ಚಿನ ಸಂಖ್ಯೆಯ ನಿವೇಶನಗಳನ್ನು ಮುಡಾ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಪರಿಹಾರವಾಗಿ ಅಕ್ರಮವಾಗಿ ಹಂಚಿಕೆ ಮಾಡಿರುವುದು ದೃಢಪಟ್ಟಿದೆ. ಪಡೆದುಕೊಂಡ ನಿವೇಶನಗಳನ್ನು ಭಾರೀ ಲಾಭಕ್ಕೆ ಮಾರಾಟ ಮಾಡಲಾಗಿದೆ. ಹೀಗೆ ಅಕ್ರಮವಾಗಿ ಗಳಿಸಿದ ಲಾಭವನ್ನು ಕಾನೂನುಬದ್ಧ ಮೂಲಗಳಿಂದ ಪಡೆಯಲಾಗಿದೆ ಎಂದು ತೋರಿಸಲಾಗಿದೆ.
ದಾಳಿಯ ವೇಳೆ ಪ್ರಭಾವಿ ವ್ಯಕ್ತಿಗಳು ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳ ಬೇನಾಮಿಗಳು/ನಕಲಿ ವ್ಯಕ್ತಿಗಳ ಹೆಸರಿನಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಮಾಜಿ ಮುಡಾ ಅಧ್ಯಕ್ಷ ಹಾಗೂ ಮುಡಾ ಆಯುಕ್ತರಿಗೆ ಸೇರಿದ ಸ್ಥಿರಾ ಆಸ್ತಿ ,ಮುಡಾ ನಿವೇಶನಗಳು ,ನಗದು ಇತ್ಯಾದಿಗಳ ಬಗ್ಗೆ ದಾಖಲೆ ಲಭ್ಯವಾಗಿದೆ. ಹೀಗೆ ಪಡೆದ ಅಕ್ರಮ ಹಣವನ್ನು ಮತ್ತಷ್ಟು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದ್ದರೂ ಕಾನೂನುಬದ್ಧ ಮೂಲಗಳಿಂದ ಪಡೆಯಲಾಗಿದೆ ಎಂದು ತೋರಿಸಿದ್ದಾರೆ
ಮುಡಾದ ಮಾಜಿ ಆಯುಕ್ತರಾಗಿದ್ದ ಜಿ.ಟಿ. ದಿನೇಶ್ ಕುಮಾರ್ ಅವರ ಸಂಬಂಧಿಕರ ಹೆಸರಿನಲ್ಲಿ ಆಸ್ತಿ, ಐಷಾರಾಮಿ ವಾಹನಗಳು ಇತ್ಯಾದಿಗಳನ್ನು ಖರೀದಿಸಲು ಸಹಕಾರಿ ಸಂಘದ ಮೂಲಕ ಹಣವನ್ನು ವರ್ಗಾಯಿಸಲಾಗಿದೆ.