ಬೆಂಗಳೂರು: ಮುಡಾ ಸೈಟ್ ಹಗರಣದ (MUDA Scam) ವಿಚಾರಣೆ ಬಹುತೇಕ ಮುಕ್ತಾಯದ ಹಂತ ತಲುಪಿದೆ. ಸೆ.12ಕ್ಕೆ ವಿಚಾರಣೆ ನಡೆದ ಬಳಿಕ ತೀರ್ಪು ಪ್ರಕಟವಾಗುವ ಸಾಧ್ಯತೆಯಿದೆ. ಹೈಕೋರ್ಟ್ (High Court) ತೀರ್ಪಿನ ನಂತರ ರಾಜ್ಯ ರಾಜಕೀಯದಲ್ಲಿ ಅಸಲಿ ಗೇಮ್ ಶುರುವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.
ಮುಡಾ ಕೇಸಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ (Siddaramaiah) ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ ನಡೆಯಲಿದೆ. ಸರ್ಕಾರದ ಪರ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಲಿದ್ದಾರೆ. ಇದಲ್ಲದೇ ಸೆ. 12ರಂದು ಕೂಡ ವಾದ ಸರಣಿ ಮುಂದುವರೆಯಲಿದೆ. ಅಂದು ಅಭಿಷೇಕ್ ಮನು ಸಿಂಘ್ವಿ (Abhishek Manu Singhvi) ವಾದ ಮಂಡಿಸಲಿದ್ದಾರೆ. ಹೀಗಾಗಿ ಇಂದು ಹೈಕೋರ್ಟ್ ಆದೇಶ ನೀಡುವ ಸಾಧ್ಯತೆ ಕಡಿಮೆ ಇದೆ. ಇದನ್ನೂ ಓದಿ: ಅಕ್ಕಿ ಕೊಡ್ತೀವಿ ಅಂದ್ರೂ ರಾಜ್ಯ ಸರ್ಕಾರ ತಗೋತಿಲ್ಲ – ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ
Advertisement
Advertisement
ತೀರ್ಪಿನತ್ತ ಚಿತ್ತ:
ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆಯ ಗಾಳಿ ಬೀಸ್ತಿದೆಯಾ? ಮುಡಾ ಕೇಸಲ್ಲಿ ಪ್ರಾಸಿಕ್ಯೂಷನ್ ಭೀತಿ ಎದುರಿಸ್ತಿರುವ ಸಿದ್ದರಾಮಯ್ಯ ರಾಜೀನಾಮೆ ನೀಡುವ ಸನ್ನಿವೇಶ ಉದ್ಭವವಾಗುತ್ತಾ? ಗೊತ್ತಿಲ್ಲ. ಆದ್ರೆ ಒಂದು ಅವಕಾಶ ಸಿಕ್ಕಿದರೆ ಸಿಎಂ ಆಗಿಯೇ ಬಿಡೋಣ ಎಂದು ಕಾಂಗ್ರೆಸ್‌ನ ಕೆಲವರು ಪ್ರಯತ್ನ ಶುರು ಮಾಡಿದಂತೆ ಕಾಣುತ್ತಿದೆ.
Advertisement
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರೆ. ಅವರು ರಾಜೀನಾಮೆ ನೀಡುವ ಸ್ಥಿತಿ ಬರುವುದಿಲ್ಲ. ಅವರೇ ಐದು ವರ್ಷ ಸಿಎಂ ಆಗಿರುತ್ತಾರೆ. ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎನ್ನುತ್ತಲೇ ಸಿದ್ದರಾಮಯ್ಯ ಸುತ್ತಮುತ್ತ ಇರುವವರೇ ಗಾದಿ ಕನಸನ್ನು ಬಿಚ್ಚಿಡುತ್ತಿದ್ದಾರೆ.
Advertisement
ಊಟ, ತಿಂಡಿ ನೆಪದಲ್ಲಿ ಪರಮೇಶ್ವರ್ (G. Parameshwara) ಪಕ್ಷದ ಪ್ರಮುಖರನ್ನು ಭೇಟಿ ಮಾಡುತ್ತಿದ್ದಾರೆ. ಇದರ ಮಧ್ಯೆ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ (Satish Jarkiholi) ಎಂಬ ಪೋಸ್ಟರ್‌ಗಳನ್ನು ಅವರ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಆದರೆ ನಾವೆಲ್ಲೂ ಸಿಎಂ ಸ್ಥಾನ ಕ್ಲೇಮ್ ಮಾಡಿಲ್ಲ. ಈಗ ಸಿಎಂ ಕನಸನ್ನು ಕಂಡಿಲ್ಲ. ನನ್ನ ಟಾರ್ಗೆಟ್ ಏನಿದ್ರೂ 2028 ಅಂತಾ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕಂಡಕ್ಟರ್‌ಗಳಿಗೆ ಫಜೀತಿ ತಂದ ಶಕ್ತಿ ಯೋಜನೆ – ಮಹಿಳಾ ಪ್ರಯಾಣಿಕರಿಂದ ಕೆಲಸ ಕಳೆದುಕೊಳ್ಳೋ ಭೀತಿ
ಈ ಮಧ್ಯೆ ಸಿಎಂ ಮಾಡುವಾಗ ಸೀನಿಯರ್, ಜ್ಯೂನಿಯರ್ ವಿಚಾರ ಚರ್ಚೆಗೆ ಬರುತ್ತದೆ. ಈಗ ಆ ಚರ್ಚೆ ಅಪ್ರಸ್ತುತ ಎಂದು ಎಂಬಿ ಪಾಟೀಲ್ (MB Patil) ಹೇಳಿದ್ದಾರೆ. ಎಂಬಿ ಪಾಟೀಲ್ ಇಂದು ದೆಹಲಿಗೆ ತೆರಳುತ್ತಿದ್ದು ಇದಕ್ಕೆ ಸಚಿವ ಶಿವಾನಂದ ಪಾಟೀಲ್ ವ್ಯಂಗ್ಯ ಮಾಡಿದ್ದಾರೆ. ಎಂಬಿ ಪಾಟೀಲ್ ಮಾತ್ರವಲ್ಲ ಯಾರು ಬೇಕಾದರೂ ಸಿಎಂ ಆಗಬಹುದು. ಖುದಾ ಮೆಹರ್ಬಾನ್, ಗಧಾ ಪೈಲ್ವಾನ್ ಎಂಬ ಡೈಲಾಗ್ ಹೊಡೆದಿದ್ದಾರೆ.