– 50:50 ಸೈಟು ಪಡೆದ ಫಲಾನುಭವಿಗಳಿಗೆ ಬಿಗ್ ಶಾಕ್
ಮೈಸೂರು: ಜಾರಿ ನಿರ್ದೇಶನಾಲಯ(ED) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ MUDA) 50:50 ಅನುಪಾದಲ್ಲಿ ಸೈಟು ಪಡೆದಿದ್ದ ಫಲಾನುಭವಿಗಳಿಗೆ ಬಿಗ್ ಶಾಕ್ ಕೊಟ್ಟಿದೆ. ಬರೋಬ್ಬರಿ 160 ಸೈಟುಗಳ ಜಪ್ತಿ ಮಾಡಿ ಇಡಿ ಆದೇಶ ಪ್ರಕಟಿಸಿದೆ.
ಅಕ್ರಮ ಹಣ ವರ್ಗಾವಣೆ ಕಾಯ್ದೆ (PMLA) ಅಡಿಯಲ್ಲಿ ಎಲ್ಲಾ ಸೈಟುಗಳ ಜಪ್ತಿಗೆ ಇಡಿ ಅಧಿಕೃತ ಆದೇಶ ಪ್ರಕಟಿಸಿದ್ದು, ಈ ಆದೇಶ ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ.
50:50 ಅನುಪಾತದಲ್ಲಿ ಹಂಚಿಕೆಯಾಗಿರುವ ಸೈಟುಗಳ ವಹಿವಾಟಿನಲ್ಲಿ ಬೇನಾಮಿ ಮತ್ತು ಅಕ್ರಮ ಹಣದ ವ್ಯವಹಾರ ಇದೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆ ಅಡಿಯಲ್ಲಿ ಇಡಿ ಎಲ್ಲಾ ಸೈಟುಗಳ ಜಪ್ತಿಗೆ ಆದೇಶ ಹೊರಡಿಸಿದೆ. ಆದೇಶ ಪತ್ರವನ್ನು ಸಬ್ ರಿಜಿಸ್ಟ್ರಾರ್‌ಗೆ ಕಳುಹಿಸಿದೆ. ಇದನ್ನೂ ಓದಿ: MUDA Scam | ಅಕ್ರಮವಾಗಿ ಮಾರಾಟ, ಸಹಕಾರಿ ಸಂಘ ಬಳಸಿ ದುರ್ಬಳಕೆ, 300 ಕೋಟಿ ಆಸ್ತಿ ಜಪ್ತಿ – ಇಡಿ ಹೇಳಿದ್ದೇನು?
ಸರ್ಕಾರದ ಮಾರ್ಗಸೂಚಿ ಪ್ರಕಾರ ಆ ಸೈಟುಗಳ ಮೌಲ್ಯ 81 ಕೋಟಿ ರೂ. ಆಗಿದೆ. ಆದರೆ ಮಾರುಕಟ್ಟೆ ಮೌಲ್ಯ 300 ಕೋಟಿ ರೂ.ಗಿಂತಲೂ ಅಧಿಕ ಇದೆ ಎನ್ನಲಾಗಿದೆ.
ಯಾರ‍್ಯಾರ ಸೈಟುಗಳು ಜಪ್ತಿ?
– ರವಿ ಅವರ 31 ಸೈಟ್, ಅಬ್ದುಲ್ ವಾಹಿದ್ ಹೆಸರಿನಲ್ಲಿದ್ದ 41 ಸೈಟ್, ಕ್ಯಾಥಡ್ರಾಲ್ ಸೊಸೈಟಿಯ 40 ಸೈಟ್, ಇತರರಿಗೆ ಸೇರಿದ 48 ಸೈಟ್ ಗಳನ್ನು ಜಪ್ತಿ ಮಾಡಿದೆ. ಇದನ್ನೂ ಓದಿ: MUDA ಅಕ್ರಮದಲ್ಲಿ ʼಕೋಕನಟ್ʼ ಡೀಲ್ – 50, 100 ಕೋಕನಟ್ ಕಳುಹಿಸಿ ಸಿಕ್ಕಿಬಿದ್ದ ಬಿಲ್ಡರ್
ಒಂದೇ ದಿನದಲ್ಲಿ 31 ಸೈಟ್:
ಮುಡಾ ಬ್ರಹ್ಮಾಂಡ್ ಭ್ರಷ್ಟಾಚಾರ ಕೇಸ್ ಬೆನ್ನು ಹತ್ತಿರುವ ಇಡಿ ಇಂಚಿಂಚೂ ಮಾಹಿತಿಯನ್ನು ಬಟಾಬಯಲು ಮಾಡುತ್ತಿದೆ. ಮುಡಾದಲ್ಲಿ ಒಂದೇ ದಿನದಲ್ಲಿ ಒಬ್ಬ ವ್ಯಕ್ತಿಯ ಹೆಸರಿನಲ್ಲಿ 31 ಸೈಟು ರಿಜಿಸ್ಟರ್ ಮಾಡಿರುವುದು ಬೆಳಕಿಗೆ ಬಂದಿದೆ.
2023ರ ಅಕ್ಟೋಬರ್ 11ರಂದು ರವಿ ಎಂಬುವವರ ಹೆಸರಿಗೆ 31 ಸೈಟುಗಳು ನೋಂದಣಿ ಆಗಿರುವುದು ಇಡಿ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ. ಮೈಸೂರು ನಗರದ ಹೃದಯ ಭಾಗ ಕುವೆಂಪುನಗರದಲ್ಲಿ 12 ಸೈಟ್, ದಟ್ಟಗಳ್ಳಿ ಮತ್ತು ವಿಜಯನಗರದಲ್ಲಿ 19 ಸೈಟುಗಳು ನೋಂದಣಿ ಆಗಿವೆ. ಇದಲ್ಲದೇ ಅಬ್ದುಲ್ ವಾಹಿದ್ ಹೆಸರಿನಲ್ಲಿ 2023ರ ಮಾರ್ಚ್ 8 ರಂದು 25 ಸೈಟ್ ನೋಂದಣಿಯಾಗಿದ್ದರೆ 2023ರ ಅ.1ರಂದು 3 ಸೈಟ್ ನೋಂದಣಿ ಆಗಿದೆ.