– ಸಿಎಂಗೆ ಕಾನೂನಿನ ಅವಕಾಶಗಳ ಬಾಗಿಲು ಇನ್ನೂ ಮುಚ್ಚಿಲ್ಲ
ಮೈಸೂರು: ಮುಡಾ ಪ್ರಕರಣದಲ್ಲಿ (MUDA Case) ಜನಪ್ರತಿನಿಧಿಗಳ ನ್ಯಾಯಾಲಯ ನೀಡಿರುವ ಆದೇಶವನ್ನೇ ರದ್ದು ಮಾಡಿಸುವ ಬಹು ದೊಡ್ಡ ಅವಕಾಶ ಕಾನೂನಿನಲ್ಲಿದೆ ಎಂದು ಹಿರಿಯ ವಕೀಲ ವೇಣುಗೋಪಾಲ್ (Venugopal) ಹೇಳಿದ್ದಾರೆ.
Advertisement
ಮುಡಾ ಪ್ರಕರಣ ಸಂಬಂಧ ʼಪಬ್ಲಿಕ್ ಟಿವಿʼ ಜೊತೆ ಮಾತನಾಡಿದ ಅವರು, ಸಿಎಂಗೆ ಇನ್ನೂ ಕಾನೂನಿನ ಅವಕಾಶಗಳ ಬಾಗಿಲುಗಳು ಮುಚ್ಚಿಲ್ಲ. ಪ್ರಕರಣದಲ್ಲಿ ಸಿಎಂ (Siddaramaiah) ನಿರೀಕ್ಷಣಾ ಜಾಮೀನು ಪಡೆದುಕೊಳ್ಳಬಹುದು. ಬಹಳ ಗಂಭೀರವಾದ ಸೆಕ್ಷನ್‌ಗಳು ಹಾಕಲು ನ್ಯಾಯಾಲಯ ಸೂಚನೆ ನೀಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಪವರ್‌ಫುಲ್ ಲೀಡರ್ ಎಂಬುದು ಮೋದಿಗೂ ಗೊತ್ತು: ಆರ್.ವಿ ದೇಶಪಾಂಡೆ
Advertisement
Advertisement
ಕೋರ್ಟ್‌ನಿಂದ ಲೋಕಾಯುಕ್ತಕ್ಕೆ ಆದೇಶ ಸ್ವೀಕಾರವಾಗುತ್ತಿದ್ದಂತೆ ಎಫ್‌ಐಆರ್ ದಾಖಲಾಗುತ್ತದೆ. ದೂರುದಾರರು ತಮ್ಮ ದೂರಿನಲ್ಲಿ ಯಾವ ರೀತಿ ಆರೋಪಿಗಳ ಹೆಸರನ್ನು ಉಲ್ಲೇಖಿಸಿರುತ್ತಾರೋ ಅದರ ಆಧಾರದ ಮೇಲೆ ಎ1, ಎ2 ಆರೋಪಿಗಳ ಕ್ರಮಸಂಖ್ಯೆಯನ್ನು ಹಾಕಲಾಗುತ್ತದೆ ಎಂದು ನುಡಿದರು. ಇದನ್ನೂ ಓದಿ: ತಮಿಳುನಾಡು| ಒಂದೇ ಕುಟುಂಬದ ಐವರು ಕಾರಿನಲ್ಲಿ ಶವವಾಗಿ ಪತ್ತೆ – ಆತ್ಮಹತ್ಯೆ ಶಂಕೆ
Advertisement
ಸಿದ್ದರಾಮಯ್ಯನವರಿಗೆ 2 ದೊಡ್ಡ ಅವಕಾಶಗಳಿವೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸಿಎಂ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಬಹುದು. ಇನ್ನೊಂದು ಸ್ಪೆಷಲ್ ಕೋರ್ಟ್ ಆದೇಶದಲ್ಲಿ ಬಿಎನ್‌ಎಸ್‌ಎಸ್ ಅಳವಡಿಸಿಕೊಳ್ಳುವ ಬದಲಾಗಿ ಸಿಆರ್‌ಪಿಸಿ ಮಾಡಿದ್ದಾರೆ. ಇದನ್ನು ಸುಪ್ರೀಂ ಕೋರ್ಟ್ ಒಪ್ಪಿದರೆ ಈ ಆದೇಶವೇ ರದ್ದಾಗುತ್ತದೆ. ಇನ್ನು ಸಿದ್ದರಾಮಯ್ಯನವರಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನನ್ನು ಕೂಡ ಪಡೆದುಕೊಳ್ಳಬಹುದು ಎಂದರು. ಇದನ್ನೂ ಓದಿ: ಉಸಿರುಗಟ್ಟಿಸಿ ಮಹಾಲಕ್ಷ್ಮಿ ಕೊಲೆ; ಆ್ಯಕ್ಸಲ್ ಬ್ಲೇಡ್‌ನಿಂದ ದೇಹ ಪೀಸ್ – ಹಂತಕನ ಡೆತ್‌ನೋಟ್‌ನಲ್ಲಿ ಕೊಲೆ ರಹಸ್ಯ ರಿವೀಲ್