– ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಅಸಮಾಧಾನ ಇರುವ ಜನ ಕಾಂಗ್ರೆಸ್‌ನಲ್ಲಿ ಹೆಚ್ಚಿದ್ದಾರೆ ಎಂದ ದೂರುದಾರ
ಮೈಸೂರು: ಮುಡಾ ಹಗರಣದಲ್ಲಿ ನನಗೆ ಸಿಎಂ ವಿರುದ್ಧ ಅತಿ ಹೆಚ್ಚಿನ ದಾಖಲೆ ಕೊಟ್ಟಿದ್ದೆ ಕಾಂಗ್ರೆಸ್ ನಾಯಕರು ಎಂದು ದೂರುದಾರ ಸ್ನೇಹಮಯಿ ಕೃಷ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ.
Advertisement
‘ಪಬ್ಲಿಕ್ ಟಿವಿ’ ಜೊತೆ ಮಾತಾಡಿದ ಅವರು, ಮುಡಾ ಹಗರಣದ ವಿಚಾರದಲ್ಲಿ ಕಳೆದ ಜನವರಿ ತಿಂಗಳಿಂದ ನನಗೆ ಅತಿ ಹೆಚ್ಚಿನ ದಾಖಲೆಗಳು ಕಾಂಗ್ರೆಸ್ ನಾಯಕರಿಂದ ಬಂದಿವೆ. ಕಾಂಗ್ರೆಸ್ ನಾಯಕರು ಕೊಟ್ಟಿರುವ ದಾಖಲೆಗಳು ನನ್ನ ಹೋರಾಟದ ವೇಗ ಹೆಚ್ಚಿಸಿವೆ ಎಂದು ತಿಳಿಸಿದ್ದಾರೆ.
Advertisement
ಕಾಂಗ್ರೆಸ್‌ನಲ್ಲೂ ಸಿಎಂ ಭ್ರಷ್ಟಾಚಾರದ ಬಗ್ಗೆ ಅಸಮಾಧಾನ ಇರುವ ಜನ ಹೆಚ್ಚಿದ್ದಾರೆ. ಪಕ್ಷದ ಒಳಗೆ ಅದನ್ನು ತೋರಿಸಲು ಅವರಿಗೆ ಆಗಲ್ಲ. ಹೀಗಾಗಿ, ನನಗೆ ದಾಖಲೆ ಕೊಟ್ಟಿದ್ದಾರೆ. ಕಾಂಗ್ರೆಸ್‌ನ ಯಾವ ಹಂತದ ನಾಯಕರು, ಅವರು ಯಾರು ಅನ್ನೋದನ್ನು ನಾನು ಹೇಳುವುದಿಲ್ಲ ಎಂದಿದ್ದಾರೆ.