ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧದ ಮುಡಾ ಸೈಟ್ (MUDA Case) ಅಕ್ರಮ ಆರೋಪ ಪ್ರಕರಣದ ವಿಚಾರಣೆಯನ್ನು ಕೋರ್ಟ್ ಜನವರಿ 5 ಕ್ಕೆ ಮುಂದೂಡಿದೆ.
ಮುಡಾ ಸೈಟ್ ಹಗರಣದಲ್ಲಿ ಲೋಕಾಯುಕ್ತ ಬಿ ರಿಪೋರ್ಟ್ ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ಬೆಂಗಳೂರಿನ ಸೆಷನ್ಸ್ ಕೋರ್ಟ್ನಲ್ಲಿ ನಡೆಯಿತು. ತನಿಖೆ ಪೂರ್ಣಗೊಂಡಿದ್ದರೂ, ಬಾಕಿ ಇದೆ ಅಂತ ಅಧಿಕಾರಿಗಳು ಸುಳ್ಳು ಹೇಳಿದ್ದಾರೆ. ಎ1 ಹಾಲಿ ಸಿಎಂ ಅವರನ್ನು ನಿರಪರಾಧಿ ಅಂತ ತೋರಿಸುವ ಪ್ರಯತ್ನ ನಡೀತಿದೆ. ಆರೋಪ ಸಾಬೀತಾದರೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾಗುತ್ತೆ ಅಂದರು. ತನಿಖಾಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೇ ಪ್ರಕರಣ ದಾಖಲಿಸಲು ಕೋರಿದರು. ಕೋರ್ಟ್ ಜನವರಿ 5ಕ್ಕೆ ವಿಚಾರಣೆ ಮುಂದೂಡಿದೆ. ಇದನ್ನೂ ಓದಿ: ಮುಡಾ ಹಗರಣ: ಇಂದು ಸಿಎಂ ಭವಿಷ್ಯ ನಿರ್ಧಾರ
ಸ್ನೇಹಮಯಿ ಕೃಷ್ಣ ವಾದ ಏನು?
ತನಿಖಾಧಿಕಾರಿ ಎಡಿಜಿಪಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ಅಂತಿಮ ವರದಿ ಸಲ್ಲಿಸಲು ಅಂತಿದೆ. ಆರೋಪಿ ವಿರುದ್ಧ ಆರೋಪ ಸಾಬೀತಾಗದ ಕಾರಣ. ಅಂತಿಮ ವರದಿ ಸಲ್ಲಿಸಲು ಅನುಮತಿ ಕೋರಲಾಗಿದೆ ಅಂತಾ ಪತ್ರ ಬರೆದಿದ್ದಾರೆ. ಪ್ರಕರಣದ ಎ1 ರಿಂದ ಎ4 ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಇರುವುದರಿಂದ. ಆರೋಪ ಸಾಬೀತಾಗಾದ ಕಾರಣ ಅಂತಿಮ ವರದಿ ಸಲ್ಲಿಸಲು ಅಂತಾ ನಮೂನೆ ಇದೆ. ಎಲ್ಲಾ ಕಡೆಯು ಅಂತಿಮ ವರದಿ ಅಂತಾ ಇದೆ. ಹಾಗಾದರೆ, ಅಂತಿಮ ವರದಿ ಅಂದ್ರೆ ಅರ್ಥ ಏನು? ಇಲ್ಲವೇ ಮಧ್ಯಂತರ ವರದಿ ಅಂತಾ ಎಲ್ಲಿದೆ? ತನಿಖೆ ಪೂರ್ಣಗೊಂಡ ನಂತರ ಅಂತಿಮ ವರದಿ ಸಲ್ಲಿಸಬೇಕು ಎಂದು ವಾದಿಸಿದರು.
ತನಿಖೆ ಬಾಕಿ ಇದೇ ಎಂದು ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ. ತನಿಖೆ ಪೂರ್ಣಗೊಂಡಿದೆ. ಅಂತಿಮ ವರದಿ ಎಂದು ಅವರೇ ಸಲ್ಲಿಸಿದ್ದಾರೆ. ಎಸ್ಪಿ ನ್ಯಾಯಾಲಯಕ್ಕೆ ದಾರಿ ತಪ್ಪಸುವ ಕೆಲಸ ಮಾಡುತ್ತಿದ್ದಾರೆ. ಎ1 ಹಾಲಿ ಸಿಎಂ ಆಗಿರುತ್ತಾರೆ. ಹೀಗಾಗಿ, ಅವರನ್ನ ನಿರಪರಾಧಿ ಅಂತ ತೋರಿಸುವ ಪ್ರಯತ್ನ ನಡೆಯುತ್ತಿದೆ. ಆರೋಪ ಸಾಬೀತಾದರೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾಗುತ್ತೆ. ಹೀಗಾಗಿ, ಸಿಎಂ ಸಿದ್ದರಾಮಯ್ಯ ಅವರನ್ನ ರಕ್ಷಣೆ ಮಾಡಲಾಗ್ತಿದೆ ಎಂದು ಎಸ್‌ಪಿಪಿ ವಿರುದ್ಧ ಸ್ನೇಹಮಯಿ ಕೃಷ್ಣ ಆರೋಪ ಮಾಡಿದರು. ಇದನ್ನೂ ಓದಿ: ಮುಡಾ ಹಗರಣ – ಡಿ.23ಕ್ಕೆ ಸಿಎಂ ಭವಿಷ್ಯ ನಿರ್ಧಾರ
ಒಂದೇ ಪ್ರಕರಣದಲ್ಲಿ ಕೆಲವರ ವಿರುದ್ಧ ಬಿ ರಿಪೋರ್ಟ್ ಸಲ್ಲಿಕೆಯಾಗಿದೆ. ಯಾವ ಕಾನೂನಿನಲ್ಲಿ ಇದಕ್ಕೆ ಅವಕಾಶ ಇದೆ. ಮುಡಾ ಕೇಸ್ ತನಿಖಾಧಿಕಾರಿ ಲೋಕಾಯುಕ್ತ ಎಸ್‌ಪಿ ಉದೇಶ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸ್ನೇಹಮಹಿ ಕೃಷ್ಣ ವಾದ ಮಂಡಿಸಿದರು. ತನಿಖಾಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೇ ಪ್ರಕರಣ ದಾಖಲಿಸಲು ಕೋರಿದರು.

