ಮುಡಾ ಕೇಸ್ ಸಿದ್ದರಾಮಯ್ಯ ವಿರುದ್ಧ ನಡೆಯುತ್ತಿರೋ ಷಡ್ಯಂತ್ರ: ಮಹದೇವಪ್ಪ

Public TV
1 Min Read
dharwad HC Mahadevappa 1

ಬೆಂಗಳೂರು: ಮುಡಾ ಕೇಸ್ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ನಡೆಯುತ್ತಿರುವ ಷಡ್ಯಂತ್ರ. ಯಾರು ಏನೇ ಮಾಡಿದರು ಸಿದ್ದರಾಮಯ್ಯ ಗಟ್ಟಿಯಾಗಿ ಇದ್ದಾರೆ ಎಂದು ಸಚಿವ ಮಹದೇವಪ್ಪ (H C Mahadevappa) ತಿಳಿಸಿದ್ದಾರೆ.

ಮುಡಾ ಕೇಸ್‌ನಲ್ಲಿ (MUDA Case) ತನಿಖೆಗೆ ಬರುವಂತೆ ಲೋಕಾಯುಕ್ತ ಸಿಎಂಗೆ ನೋಟಿಸ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಅವರಿಗೆ ಲೋಕಾಯುಕ್ತರು ನೋಟಿಸ್ ನೀಡಿರುವುದು ಪತ್ರಿಕೆಗಳಲ್ಲಿ ನೋಡಿದ್ದೇನೆ. ಸಿಎಂ ಕೂಡಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರೆ. ಅವರು ಕೂಡಾ ಕಾನೂನಿನ ಒಳಗೆ ಬರುತ್ತಾರೆ. ಅವರೇ ವಿಚಾರಣೆಗೆ ಹೋಗುವುದಾಗಿ ಹೇಳಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಲ್ಲಿ ರಸ್ತೆ ದಾಟುವಾಗ ಬೆನ್ಜ್ ಕಾರು ಡಿಕ್ಕಿಯಾಗಿ ಟೆಕ್ಕಿ ಸಾವು

ಸಿಎಂ ಮೇಲೆ ಲೋಕಾಯುಕ್ತದಿಂದ ತನಿಖೆ ಸರಿಯಾಗಿ ಆಗುತ್ತಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ತನಿಖೆಗೂ ಅವರ ಸ್ಥಾನಕ್ಕೂ ಸಂಬಂಧವಿಲ್ಲ. ಕಾನೂನು ಎಲ್ಲರಿಗೂ ಒಂದೇ. ಕಾನೂನು ಯಾವತ್ತು ಬದಲಾವಣೆ ಆಗುವುದಿಲ್ಲ. ಸೆಕ್ಷನ್ ಬದಲಾವಣೆ ಆಗುವುದಿಲ್ಲ. ಸರ್ಕಾರದ ಅಧೀನ ಸಂಸ್ಥೆಗಳು ಸಿಎಂರನ್ನು ಸರಿಯಾಗಿ ತನಿಖೆ ಮಾಡುವುದಿಲ್ಲ ಅನ್ನುವುದು ಕೆಲವರ ಭಾವನೆ. ಅವೆಲ್ಲ ಅಂತೆ-ಕಂತೆಗಳು. ಕಾನೂನಿನ ಮುಂದೆ ಎಲ್ಲರೂ ಒಂದೇ. ಮುಡಾ ಕೇಸ್ ಸಿಎಂ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತವಾದ ಷಡ್ಯಂತ್ರ. 40 ವರ್ಷಗಳಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದೆ ಸಿದ್ದರಾಮಯ್ಯ ಆಡಳಿತ ಮಾಡಿಕೊಂಡು ಬಂದಿದ್ದರು. ಸಿದ್ದರಾಮಯ್ಯ ಶುದ್ಧ ಹಸ್ತರಾಗಿ ಇದ್ದಾರೆ. ಮುಂದೆಯೂ ಇರುತ್ತಾರೆ ಎಂದರು. ಇದನ್ನೂ ಓದಿ: ಬೆಳಗಾವಿ| ತಹಶೀಲ್ದಾರ್‌ ಕಚೇರಿಯಲ್ಲೇ ಸಿಬ್ಬಂದಿ ಆತ್ಮಹತ್ಯೆ

ಯಾರು ಏನೇ ಮಾತಾಡಿದರು ಸಿಎಂ ಗಟ್ಟಿಯಾಗಿ ಇದ್ದಾರೆ. ನೈತಿಕವಾಗಿ ಸಿಎಂ ಗಟ್ಟಿಯಾಗಿ ಇದ್ದಾರೆ. ಇಂದು ಚನ್ನಪಟ್ಟಣ ಪ್ರಚಾರಕ್ಕೆ ಹೋಗುತ್ತಿದ್ದೇನೆ. ನಾಳೆ ಮೈಸೂರಿನಲ್ಲೆ ಇರುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ದೇವಸ್ಥಾನದಲ್ಲಿ ಕ್ಷಮೆಯಾಚಿಸಿ ಇಲ್ಲವೇ 5 ಕೋಟಿ ಕೊಡಿ: ಸಲ್ಮಾನ್‌ ಖಾನ್‌ಗೆ ಮತ್ತೊಂದು ಬೆದರಿಕೆ

Share This Article