ನೇಪಾಳದಲ್ಲಿ ಹೊಸತಲೆಮಾರಿನ ಯುವಜನ (GEN-Z) ದಂಗೆಯಿಂದಾಗಿ ನೇಪಾಳದ (Nepal) ಪ್ರಧಾನಿ ಸ್ಥಾನಕ್ಕೆ ಸೆ.9ರಂದು ಕೆ.ಪಿ.ಶರ್ಮಾ ಓಲಿ (KP Sharma Oli) ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಕರ್ನಾಟಕದ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಎಂಟೆಕ್ ಪದವೀಧರ ಪಿಎಂ ರೇಸ್‌ನಲ್ಲಿದ್ದಾರೆ ಎನ್ನಲಾಗುತ್ತಿದೆ.ಇದನ್ನೂ ಓದಿ: ನೇಪಾಳ ಧಗ ಧಗ – ಉದ್ರಿಕ್ತರಿಂದ ಮನೆಗೆ ಬೆಂಕಿ, ಮಾಜಿ ಪ್ರಧಾನಿ ಪತ್ನಿ ಸಾವು
ಸದ್ಯ ನೇಪಾಳದ ರಾಜಧಾನಿ ಕಠ್ಮಂಡುವಿನ ಮೇಯರ್ ಆಗಿರುವ ಬಲೇನ್ ಅಲಿಯಾಸ್ ಬಲೇಂದ್ರಗೆ ಯುವಜನರ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಬಲೇನ್ ಅವರೇ ಮುಂದಿನ ಪ್ರಧಾನಿ ಆಗಬೇಕು, ಯುವಜನರ ಆಶೋತ್ತರ ಈಡೇರಿಸಲು ಅವರೇ ಸೂಕ್ತ ಎಂಬ ಒತ್ತಾಯ ಜಾಲತಾಣದಲ್ಲಿ ಕೇಳಿಬರುತ್ತಿದೆ. ಇವರ ಜೊತೆಗೆ ಸಂಸದೆ ಸುಮನಾ ಶ್ರೇಷ್ಠ ಅವರ ಹೆಸರೂ ಕೂಡ ಮುನ್ನೆಲೆಗೆ ಬಂದಿದೆ.
ಸದ್ಯ 35 ವರ್ಷದ ಬಲೇಂದ್ರ ಅವರ ಪರವಾಗಿ ಆನ್‌ಲೈನ್‌ನಲ್ಲಿ ದೇಶಾದ್ಯಂತ ದೊಡ್ಡಮಟ್ಟದ ಕ್ಯಾಂಪೇನ್ ನಡೆಯುತ್ತಿದೆ. ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಯುವಜನರು ಯುವ ಮುಖವೊಂದನ್ನು ದೇಶದ ಪ್ರಧಾನಿ ಸ್ಥಾನದಲ್ಲಿ ತಂದು ಕೂರಿಸುವ ಬೇಡಿಕೆ ಇಡುತ್ತಿದ್ದಾರೆ.
ಬಲೇನ್ ಹಿನ್ನೆಲೆ ಏನು?
1990ರಲ್ಲಿ ಜನಿಸಿರುವ ಬಲೇನ್ ಅವರು ಎಂಜಿನಿಯರಿಂಗ್ ಪದವೀಧರ. ಕಠ್ಮಂಡುವಿನಲ್ಲಿ ಎಂಜಿನಿ ಯರಿಂಗ್ ಮುಗಿಸಿ ಅವರು, ಬಳಿಕ ಕರ್ನಾಟಕದ ಬೆಳಗಾವಿಯಲ್ಲಿ ಕೇಂದ್ರ ಸ್ಥಾನ ಹೊಂದಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ಸ್ಟçಕ್ಚರಲ್ ಎಂಜಿನಿಯರಿAಗ್‌ನಲ್ಲಿ ಎಂಟೆಕ್ ಪದವಿ ಪಡೆದಿದ್ದಾರೆ.
ರಾಜಕೀಯಕ್ಕೆ ಕಾಲಿಡುವ ಮೊದಲು ಶಾ ನೇಪಾಳದ ಭೂಗತ ಹಿಪ್ ಆಫ್‌ನಲ್ಲಿದ್ದು ಸದ್ದು ಮಾಡಿದವರು. ರ‍್ಯಾಪರ್ ಆಗಿ, ಸಾಹಿತಿಯಾಗಿ ಯುವಜನರ ಗಮನಸೆಳೆದವರು. ಬಳಿಕ 2022ರಲ್ಲಿ ಕಠ್ಮಂಡು ಮೇಯರ್ ಚುನಾವಣೆಗೆ ಸ್ಪರ್ಧಿಸಿ ಸಿಪಿಎನ್ (ಯುಎಂಎಲ್) ಅಭ್ಯರ್ಥಿ ವಿರುದ್ಧ 61,000 ಮತಗಳ ಅಂತರದಿಂದ ಗೆದ್ದಿದ್ದರು. ನೇಪಾಳಿ ರ‍್ಯಾಪ್ ಬ್ಯಾಟಲ್ ಲೀಗ್‌ನ 2ನೇ ಆವೃತ್ತಿಯ ವಿನ್ನರ್ ಕೂಡ ಆಗಿರುವ ಬಲೇಂದ್ರ ಸಾಮಾಜಿಕ ಜಾತಾಣದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ.ಇದನ್ನೂ ಓದಿ: ನೇಪಾಳದಲ್ಲಿ ಅಲ್ಲೋಲ ಕಲ್ಲೋಲ – ಹಣಕಾಸು ಸಚಿವನನ್ನ ಬೀದಿಯಲ್ಲಿ ಅಟ್ಟಾಡಿಸಿ ಹೊಡೆದ ಉದ್ರಿಕ್ತರು