ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ (MS Dhoni) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಈಗಾಗಲೇ 3 ವರ್ಷ ಕಳೆದಿದೆ. ಈಗ ಅವರ ನಂ.7 ಜೆರ್ಸಿಯನ್ನೂ ನಿವೃತ್ತಗೊಳಿಸಲು ನಿರ್ಧರಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತಿಳಿಸಿದೆ.
ಭಾರತ ಕ್ರಿಕೆಟ್ ಕಂಡ ಯಶಸ್ವಿ ನಾಯಕರಲ್ಲಿ ಧೋನಿ ಅಗ್ರಗಣ್ಯರು. ಭಾರತ ತಂಡಕ್ಕೆ ಮೂರು ಐಸಿಸಿ (ICC) ಟ್ರೋಫಿ ಗೆಲ್ಲಿಸಿಕೊಟ್ಟ ಏಕೈಕ ನಾಯಕ. ಅವರ ಸಾಧನೆಗೆ ಸಮಾನಾರ್ಥಕವಾಗಿದೆ ಜೆರ್ಸಿ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ನಂ. 10 ಶರ್ಟ್ ಕೂಡ ಈಗಾಗಲೇ ಭಾರತೀಯ ಮಂಡಳಿಯಿಂದ ನಿವೃತ್ತಿ ಹೊಂದಿದೆ. ಅಂತೆಯೇ ಭಾರತ ತಂಡಕ್ಕೆ ಧೋನಿ ನೀಡಿದ ಕೊಡುಗೆಯನ್ನು ಗೌರವಿಸಿ ನಂ. 7 ಜೆರ್ಸಿಯನ್ನು ಆ ಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ಸೂರ್ಯ ಬೆಂಕಿ ಆಟ, ಕುಲ್ದೀಪ್ ಮಾರಕ ಬೌಲಿಂಗ್‌ಗೆ ಆಫ್ರಿಕಾ ಬರ್ನ್ – ಸರಣಿ 1-1 ರಲ್ಲಿ ಸಮ
Advertisement
Advertisement
ಭಾರತೀಯ ಜೆರ್ಸಿ ಧರಿಸುವಾಗ 10 ನೇ ಶರ್ಟ್ ಅನ್ನು ಆಯ್ಕೆ ಮಾಡಲು ಯಾರಿಗೂ ಅವಕಾಶವಿಲ್ಲ. ಹಾಗೆಯೇ ಭಾರತೀಯ ತಂಡದಲ್ಲಿರುವ ಆಟಗಾರರು ನಂಬರ್ 7 ಜೆರ್ಸಿ ಧರಿಸುವಂತಿಲ್ಲ ಎಂದು ಬಿಸಿಸಿಐ ಹೇಳಿದೆ.
Advertisement
ಯುವ ಆಟಗಾರರು ಮತ್ತು ಪ್ರಸ್ತುತ ಭಾರತೀಯ ತಂಡದ ಆಟಗಾರರು ಎಂ.ಎಸ್.ಧೋನಿಯ ನಂಬರ್ 7 ಜೆರ್ಸಿಯನ್ನು ಆಯ್ಕೆ ಮಾಡುವಂತಿಲ್ಲ. ಧೋನಿ ಆಟಕ್ಕೆ ನೀಡಿದ ಕೊಡುಗೆಗಾಗಿ ಅವರ ಟೀ-ಶರ್ಟ್ ಅನ್ನು ನಿವೃತ್ತಿ ಮಾಡಲು ಬಿಸಿಸಿಐ ನಿರ್ಧರಿಸಿದೆ. ಲಭ್ಯವಿರುವ ಸಂಖ್ಯೆಗಳ ಪಟ್ಟಿಯಿಂದ ನಂ.10 ಈಗಾಗಲೇ ಹೊರಗಿದೆ” ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ರೋಹಿತ್, ಮ್ಯಾಕ್ಸಿ ವಿಶ್ವದಾಖಲೆ ಸರಿಗಟ್ಟಿದ ಸೂರ್ಯ – ವಿಶ್ವದ ನಂ.1 ಬ್ಯಾಟರ್‌ನ ಮತ್ತೊಂದು ಸಾಧನೆ
Advertisement
ಭಾರತೀಯ ತಂಡದಲ್ಲಿ ಆರಂಭಿಕ ದಿನಗಳಲ್ಲಿ ವೇಗಿ ಶಾರ್ದೂಲ್ ಠಾಕೂರ್ ಸ್ವಲ್ಪ ಸಮಯದವರೆಗೆ ನಂ.10 ಜೆರ್ಸಿ ಧರಿಸಿದ್ದರು. ನಂತರ ಅದನ್ನು ನಿವೃತ್ತಿಗೊಳಿಸಲಾಯಿತು. ನಂ. 7 ಜೆರ್ಸಿ ವಿಷಯದಲ್ಲಿ ಬಿಸಿಸಿಐ ಚುರುಕಾಗಿ ಕಾರ್ಯನಿರ್ವಹಿಸಿದೆ ಎನ್ನಲಾಗಿದೆ.
ಪ್ರಸ್ತುತ ಭಾರತ ತಂಡದ ಆಟಗಾರರಿಗೆ ಒಟ್ಟು 60 ನಂಬರ್‌ಗಳನ್ನು ನೀಡಲಾಗಿದೆ ಎಂದು ಬಿಸಿಸಿಐ (BCCI) ಅಧಿಕಾರಿ ಖಚಿತಪಡಿಸಿದ್ದಾರೆ. ಇದನ್ನೂ ಓದಿ: 8 ಸಿಕ್ಸ್, 7 ಫೋರ್, ಸೂರ್ಯನ ಸ್ಫೋಟಕ ಶತಕಕ್ಕೆ ಹರಿಣರು ಕಂಗಾಲು – ದಕ್ಷಿಣ ಆಫ್ರಿಕಾಗೆ 202 ರನ್‌ಗಳ ಗುರಿ