– ಐಪಿಎಲ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಕೂಲ್ ಕ್ಯಾಪ್ಟನ್
ಚೆನ್ನೈ: ಲಕ್ನೋ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಎಂ.ಎಸ್.ಧೋನಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿದೆ.
ನಿನ್ನೆ ನಡೆದ ಪಂದ್ಯದಲ್ಲಿ 11 ಬಾಲ್‌ಗೆ ಧೋನಿ ಗಳಿಸಿದ್ದು 26 ರನ್. ಹೀಗಿದ್ದರೂ ಅವರಿಗೆ ಪ್ಲೇಯರ್ ಆಫ್ ದಿ ಮ್ಯಾಚ್ ಅವಾರ್ಡ್ ನೀಡಲಾಗಿದೆ. ಅದು ಯಾಕೆ ಎಂಬ ಕತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಸ್ವತಃ ಧೋನಿಯೇ, ‘ನನಗೆ ಯಾಕೆ ಈ ಪ್ರಶಸ್ತಿ ನೀಡಿದ್ದೀರಿ’ ಎಂದು ಪ್ರಶ್ನಿಸಿದ್ದಾರೆ.
ಎಂಎಸ್ ಧೋನಿ 11 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ ಅಜೇಯ 26 ರನ್ ಗಳಿಸಿದರು. ಎಲ್‌ಎಸ್‌ಜಿ ನೀಡಿದ 166 ರನ್‌ಗಳ ಗುರಿ ಬೆನ್ನಟ್ಟಿದ ಚೆನ್ನೈ ಜಯ ಸಾಧಿಸಿತು. ತಂಡ ಐದು ವಿಕೆಟ್ ಕಳೆದುಕೊಂಡಿದ್ದಾಗ, ಶಿವಂ ದುಬೆ ಮತ್ತು ಧೋನಿ 57 ರನ್‌ಗಳ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಧೋನಿ ಪರಿಣಾಮಕಾರಿ ಇನ್ನಿಂಗ್ಸ್‌ಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಹಿಂದಿನ ಐದು ಪಂದ್ಯಗಳಲ್ಲಿ ಸತತ ಸೋಲಿನ ಸರಣಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ಕೊನೆಗೊಳಿಸಿದೆ. ನಾಯಕ ಎಂ.ಎಸ್.ಧೋನಿ ರನ್ ಚೇಸ್‌ನಲ್ಲಿ ಪ್ರಮುಖ ಪಾತ್ರ ವಹಿಸಿದರು. ತಾನೊಬ್ಬ ಉತ್ತಮ ಫಿನಿಷರ್‌ಗಳಲ್ಲಿ ಒಬ್ಬ ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿದರು.
ಐಪಿಎಲ್ ಇತಿಹಾಸದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಸಿಎಸ್‌ಕೆ ನಾಯಕ ಪಾತ್ರರಾಗಿದ್ದಾರೆ. 43 ವರ್ಷ ವಯಸ್ಸಿನ ಧೋನಿ, 2014ರ ಐಪಿಎಲ್ ಆವೃತ್ತಿಯಲ್ಲಿ ಕೆಕೆಆರ್ ವಿರುದ್ಧ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ 42ರ ಪ್ರವೀಣ್ ತಾಂಬೆ ಅವರ ದಾಖಲೆಯನ್ನು ಮುರಿದಿದ್ದಾರೆ.
ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಅತ್ಯಂತ ಹಿರಿಯ ಆಟಗಾರರು ಇವರು..
43 ವರ್ಷ – ಎಂಎಸ್ ಧೋನಿ vs ಎಲ್‌ಎಸ್‌ಜಿ, ಲಕ್ನೋ, 2025
42 ವರ್ಷ – ಪ್ರವೀಣ್ ತಾಂಬೆ vs ಕೆಕೆಆರ್, ಅಹಮದಾಬಾದ್, 2014
42 ವರ್ಷ – ಪ್ರವೀಣ್ ತಾಂಬೆ vs ಆರ್‌ಸಿಬಿ, ಅಬುಧಾಬಿ, 2014