ದುಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಕೊರೊನಾ ವಿರುದ್ಧ ಹೋರಾಡಲು ಮಾಸ್ಕ್ ಹಾಕಿ, ಲಸಿಕೆಯನ್ನು ಪಡೆಯಿರಿ ಎಂದು ಕ್ಯಾಂಪೇನ್ ಮಾಡಿದ್ದಾರೆ.
Advertisement
ಐಪಿಎಲ್‍ನ ದ್ವಿತೀಯ ಚರಣದ ಪಂದ್ಯಗಳಿಗಾಗಿ ಈಗಾಗಲೇ ದುಬೈನಲ್ಲಿರುವ ಧೋನಿ, ಖಾಸಗಿ ಆಸ್ಪತ್ರೆಯೊಂದಿಗೆ ಸೇರಿ ಸಾರ್ವಜನಿಕರಿಗೆ ಕೊರೊನಾ ವಿರುದ್ಧ ಅರಿವು ಮೂಡಿಸುವ ಕಾರ್ಯಕ್ರಮವನ್ನು ಮುಂದುವರೆಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ವಿಶೇಷವಾಗಿ ‘ವಾಕ್ಸಿನ್ ಪೋಡು, ಮಾಸ್ಕ್ ಪೋಡು’ ಎಂಬ ಘೋಷವಾಕ್ಯದೊಂದಿಗೆ ಜನರಿಗೆ ಅರಿವು ಮೂಡಿಸುತ್ತಿದ್ದಾರೆ. ಇದನ್ನೂ ಓದಿ: ಉಪನಾಯಕನ ಪಟ್ಟದಿಂದ ಕೆಳಗಿಳಿಸಿ – ರೋಹಿತ್ ಬಗ್ಗೆ ಕೊಹ್ಲಿ ಮಾತು
Advertisement
Advertisement
ನಮ್ಮ ಆರೋಗ್ಯದ ಸುರಕ್ಷತೆ ನಮ್ಮ ಕೈಯಲ್ಲಿದ್ದು, ಪ್ರತಿಯೊಬ್ಬರು ಲಸಿಕೆ ಪಡೆದು ಮಾಸ್ಕ್ ಧರಿಸಿ ಓಡಾಡಿ ಎಂದು ಧೋನಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ಧೋನಿ ಸಿಎಸ್‍ಕೆ ತಂಡದೊಂದಿಗೆ ದುಬೈನಲ್ಲಿದ್ದು, ಐಪಿಎಲ್ ಪಂದ್ಯಾವಳಿಗಾಗಿ ಬಯೋ ಬಬಲ್‍ನಲ್ಲಿದ್ದಾರೆ. ಇದನ್ನೂ ಓದಿ:ಡೆಲ್ಲಿ ನಾಯಕನಾಗಿ ಪಂತ್ ಮುಂದುವರಿಕೆ
Advertisement
Andha arabic kadal P-orom ????
The dates are here, bring on the Whistles!#IPL2021 #WhistlePodu #Yellove ???????? pic.twitter.com/JTp0NvXNbD
— Chennai Super Kings (@ChennaiIPL) July 25, 2021
ಐಪಿಎಲ್ ಸೆಪ್ಟೆಂಬರ್ 19 ರಂದು ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡ ಪರಸ್ಪರ ಎದುರುಬದುರಾಗಲಿದೆ. ಇದನ್ನೂ ಓದಿ:ಟಿ20 ವಿಶ್ವಕಪ್ ಬಳಿಕ ಟಿ20 ನಾಯಕತ್ವ ತ್ಯಜಿಸುತ್ತೇನೆಂದ ವಿರಾಟ್ ಕೊಹ್ಲಿ