ಇಂಗ್ಲೆಂಡ್ ವಿರುದ್ಧ ಪಂದ್ಯದ ವೇಳೆ ರಕ್ತ ಉಗುಳಿದ ಧೋನಿ

Public TV
1 Min Read
DHONI A

ಲಂಡನ್: ಟೀಂ ಇಂಡಿಯಾ ಅನುಭವಿ ಆಟಗಾರ ಎಂಎಸ್ ಧೋನಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡು ರಕ್ತ ಉಗುಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಂದ್ಯದಲ್ಲಿ ಧೋನಿ ಬಲಗೈ ಹೆಬ್ಬೆರಳಿಗೆ ಗಾಯವಾಗಿದ್ದು, ಈ ವೇಳೆ ಬೆರಳಿನಲ್ಲಿದ್ದಸ ರಕ್ತವನ್ನು ಚೀಪಿ ಧೋನಿ ಉಗುಳಿದ್ದಾರೆ. ಈ ಫೋಟೋಗಳನ್ನು ಧೋನಿ ಅಭಿಮಾನಿಗಳು ಟ್ವೀಟ್ ಮಾಡಿ ಧೋನಿ ಬಹುಬೇಗ ಚೇತರಿಸಿಕೊಳ್ಳಲಿ ಎಂದು ಬರೆದುಕೊಂಡಿದ್ದಾರೆ.

ಪಂದ್ಯದ ವೇಳೆ ಧೋನಿ ಗಾಯಗೊಂಡಿರುವುದು ಹೆಚ್ಚಿನ ಜನರ ಗಮನಕ್ಕೆ ಬಂದಿರಲಿಲ್ಲ. ಆದರೆ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ನಡೆಸಿದ್ದಕ್ಕೆ ಧೋನಿ ಟ್ರೋಲ್ ಆಗಿದ್ದರು. 32 ಎಸೆತಗಳಲ್ಲಿ ಅಜೇಯ 41 ರನ್ ಗಳನ್ನು ಧೋನಿ ಗಳಿಸಿದ್ದರು. ಪಂದ್ಯದಲ್ಲಿ ಟೀಂ ಇಂಡಿಯಾ 31 ರನ್ ಅಂತರದಲ್ಲಿ ಸೋಲುಂಡಿತ್ತು.

https://twitter.com/Shashank654/status/1145962487583391744

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್ ಮಾತ್ರವಲ್ಲದೇ ಕೀಪಿಂಗ್ ಬಗ್ಗೆಯೂ ಕೆಲ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದುವರೆಗೂ ವಿಶ್ವಕಪ್ ಟೂರ್ನಿಯಲ್ಲಿ ಧೋನಿ 2 ಕ್ಯಾಚ್ ಹಾಗೂ 2 ಸ್ಟಂಪಿಂಗ್ ಅವಕಾಶಗಳನ್ನು ಕೈಚೆಲ್ಲಿದ್ದಾರೆ. ಅಲ್ಲದೇ ಕಳೆದ ಪಂದ್ಯದಲ್ಲಿ ಡಿಆರ್‍ಎಸ್ ಮನವಿ ಮಾಡಲು ತೆಗೆದುಕೊಳ್ಳಲು ಕೂಡ ತಪ್ಪು ಎಸಗಿದ್ದರು. ಪಂದ್ಯದ 11ನೇ ಓವರಿನಲ್ಲಿ ಜೇಸನ್ ರಾಯ್ ಕ್ಯಾಚ್ ನೀಡಿದ್ದರು. ಆದರೆ ಅಂಪೈರ್ ಇದನ್ನು ನಿರಾಕರಿಸಿದ್ದರು. ಆದರೆ ಕೊಹ್ಲಿ ಡಿಆರ್‍ಎಸ್ ಪಡೆಯಲು ಮುಂದಾಗಲಿಲ್ಲ. ವಿಕೆಟ್ ಹಿಂದೆ ನಿಂತಿದ್ದ ಧೋನಿ ಕೂಡ ಇದನ್ನು ಗ್ರಹಿಸಲು ವಿಫಲರಾಗಿದ್ದರು. ಧೋನಿ ಅನೇಕ ಬಾರಿ ಡಿಆರ್‍ಎಸ್ ಪಡೆದು ಯಶಸ್ವಿ ಆಗಿದ್ದರು ಕೂಡ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮಾತ್ರ ಅವರ ನಿರ್ಧಾರ ತಂಡಕ್ಕೆ ಮುಳುವಾಗಿತ್ತು. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು.

https://twitter.com/DazzlingSree27_/status/1145956219640659968

Share This Article
Leave a Comment

Leave a Reply

Your email address will not be published. Required fields are marked *