ಮುಂಬೈ: 2011ರ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಬಳಕೆ ಮಾಡಿದ್ದ ಬ್ಯಾಟ್ ಭಾರೀ ಮೊತ್ತಕ್ಕೆ ಹರಾಜು ಆಗಿದ್ದು, ಆ ಮೂಲಕ ವಿಶ್ವದ ದುಬಾರಿ ಬ್ಯಾಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಏಪ್ರಿಲ್ 2, 2011 ರಂದು ನಡೆದ ಫೈನಲ್ ಪಂದ್ಯದಲ್ಲಿ ಧೋನಿ ಶ್ರೀಲಂಕಾ ವಿರುದ್ಧ ಕೊನೆಯಲ್ಲಿ ಸಿಕ್ಸರ್ ಸಿಡಿಸಿದ್ದರು. ಈ ಮೂಲಕ ಭಾರತ 28 ವರ್ಷಗಳ ಬಳಿಕ ವಿಶ್ವಕಪ್‍ಗೆ ಮುತ್ತಿಟ್ಟಿತ್ತು. ಈ ಸಾಧನೆಗೆ ಸದ್ಯ 8 ವರ್ಷ ಪೂರ್ಣಗೊಂಡಿದ್ದು, ಈ ವೇಳೆಯೇ ಒಂದು ವಿಶೇಷ ಸಾಧನೆಯನ್ನು ಗಿನ್ನಿಸ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್ ರಿವೀಲ್ ಮಾಡಿದೆ.
That bat swing – That look during the final flourish ????????
Today in 2011, the 28-year old wait came to an end ???????? #ThisDayThatYear pic.twitter.com/XFEibKDrdk
— BCCI (@BCCI) April 2, 2019
ಧೋನಿಯ ರಿಬಾಕ್ ಈ ಬ್ಯಾಟ್ 161,295 ಯುಎಸ್ ಡಾಲರ್ (ಸುಮಾರು 1.1 ಕೋಟಿ ರೂ.) ಗಳಿಗೆ ಹರಾಜಾಗಿದೆ. ಆರ್ ಕೆ ಗ್ಲೋಬಾಲ್ ಶೇರ್ಸ್ ಅಂಡ್ ಸೆಕ್ಯೂರಿಟಿ ಲಿಮಿಟೆಡ್ ಸಂಸ್ಥೆ ಜುಲೈ 18 2011ರಲ್ಲಿ ಲಂಡನ್ ನಲ್ಲಿ ನಡೆದ ಹರಾಜು ಪ್ರತಿಕ್ರಿಯೆಯಲ್ಲಿ ಖರೀದಿ ಮಾಡಿತ್ತು. ಬ್ಯಾಟ್ ಮೇಲೆ ಧೋನಿ ಅವರ ಹಸ್ತಾಕ್ಷರವಿದ್ದು, ಈ ಬ್ಯಾಟನ್ನು ಈಸ್ಟ್ ಮೀಟ್ಸ್ ವೆಸ್ಟ್ ಚಾರಿಟಿ ಡಿನ್ನರ್ ಕಾರ್ಯಕ್ರಮಲ್ಲಿ ಹರಾಜು ಹಾಕಲಾಗಿತ್ತು. ಅಲ್ಲದೇ ಈ ಹಣವನ್ನು ಭಾರತದಲ್ಲಿರುವ ಅನಾಥ ಮಕ್ಕಳ ಅಭಿವೃದ್ಧಿಗೆ ಬಳಕೆ ಮಾಡಲು ವಿನಿಯೋಗಿಸಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ.
ಶ್ರೀಲಂಕಾ ವಿರುದ್ಧ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಧೋನಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. 85 ಎಸೆತಗಳಲ್ಲಿ ಅಜೇಯ 91 ರನ್ ಗಳಿಸಿದ್ದ ಧೋನಿ, ಶ್ರೀಲಂಕಾ ನೀಡಿದ್ದ 276 ರನ್ ಗಳ ಗುರಿ ಮುಟ್ಟಲು ಕಾರಣರಾಗಿದ್ದರು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆದಿತ್ತು.