ದುಬೈ: ಇಲ್ಲಿನ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಡೊ ಪಾಕ್ ಕದನದಲ್ಲಿ ಧೋನಿ ಮತ್ತೆ ಮೋಡಿ ಮಾಡಿದ್ದು, ಡಿಆರ್ ಎಸ್ ಸಿಸ್ಟಮನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಮತ್ತೊಮ್ಮೆ ತಂಡಕ್ಕೆ ನೆರವಾದರು.
https://twitter.com/DHONIism/status/1043838189939482625?
Advertisement
ಪಂದ್ಯದ 8ನೇ ಓವರ್ ಬೌಲ್ ಮಾಡುತ್ತಿದ್ದ ಚಹಲ್ ಎಸೆತದಲ್ಲಿ ಇಮಾಮ್ ಹುಲ್ ಹಕ್ ಎಲ್‍ಬಿಡಬ್ಲೂ ಒಳಗಾಗಿದ್ದರು. ಆದರೆ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು. ಈ ವೇಳೆ ಕ್ಷಣ ಮಾತ್ರವೂ ಯೋಚಿಸದ ಧೋನಿ ಡಿಆರ್‍ಎಸ್‍ಗೆ ಮನವಿ ಮಾಡಿದರು. ಟೀಂ ಇಂಡಿಯಾ ಡಿಆರ್‍ಎಸ್ ಮನವಿ ಮೇರೆಗೆ ರಿವ್ಯೂವ್ ಪರಿಶೀಲಿಸಿದ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಈ ವೇಳೆ 10 ರನ್ ಗಳಿಸಿದ್ದ ಇಮಾಮ್ ಪೆವಿಲಿಯನ್ ಮರಳಿದರು.
Advertisement
https://twitter.com/DHONIism/status/1043837395097939968?
Advertisement
ಟೀಂ ಇಂಡಿಯಾ ಅಭಿಮಾನಿಗಳು ಐಸಿಸಿ ಡಿಆರ್ ಎಸ್ ಸಿಸ್ಟಮ್ ಅನ್ನು ಧೋನಿ ರಿವ್ಯೂವ್ ಸಿಸ್ಟಮ್ ಎಂದೇ ಕರೆಯುತ್ತಾರೆ. ಈ ಹಿಂದೆಯೂ ಹಲವು ಬಾರಿ ಧೋನಿ ತಮ್ಮ ಚಾಣಕ್ಷತನದಿಂದ ಡಿಆರ್ ಎಸ್ ಪಡೆದು ಎದುರಾಳಿ ತಂಡಕ್ಕೆ ಪೆಟ್ಟು ನೀಡಿದ್ದರು. ಇದುವರೆಗೂ ಧೋನಿ ಪಡೆದಿರುವ ಡಿಆರ್ ಎಸ್ ನಲ್ಲಿ 99% ಯಶಸ್ವಿಯಾಗಿದ್ದಾರೆ ಎನ್ನಬಹುದು. ಬಾಂಗ್ಲಾ ವಿರುದ್ಧ ಪಂದ್ಯದಲ್ಲೂ ಧೋನಿ ತಮ್ಮ ಚಾಣಕ್ಷತನದಿಂದ ಸುದ್ದಿಯಾಗಿದ್ದರು.
Advertisement
*Indian bowler appeals*
Umpire denies, but also secretly prays Dhoni doesn't ask for DRS ????????
— LOLendra Singh (@LOLendraSingh) September 23, 2018