ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಅಫ್ಘಾನ್ ವಿರುದ್ಧ ಪಂದ್ಯಕ್ಕೆ ಎಂಎಸ್ ಧೋನಿ ನಾಯಕತ್ವ ವಹಿಸಿದ್ದು. ಈ ಮೂಲಕ ಧೋನಿ 200 ಪಂದ್ಯವನ್ನು ಮುನ್ನಡೆಸಿದ ಮೂರನೇಯ ನಾಯಕನಾಗಿ ಹೊರಹೊಮ್ಮಿದ್ದಾರೆ.
ಅಫ್ಘಾನ್ ವಿರುದ್ಧ ಪಂದ್ಯಕ್ಕೆ ತಂಡದಲ್ಲಿ ಪ್ರಮುಖವಾಗಿ ಐದು ಬದಲಾವಣೆಗಳನ್ನು ಮಾಡಲಾಗಿದೆ. ನಾಯಕ ರೋಹಿತ್ ಶರ್ಮಾ, ಶಿಖರ್ ಧವನ್, ಚಹಲ್, ಭುವನೇಶ್ವರ್ ಕುಮಾರ್, ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಉಳಿದಂತೆ ಕನ್ನಡಿಗ ಕೆಎಲ್ ರಾಹುಲ್, ಮನೀಶ್ ಪಾಂಡೆ, ಖಲೀಲ್ ಅಹ್ಮದ್, ಸಿದ್ದರ್ಥ್ ಕೌಲ್ ಅವರಿಗೆ ಸ್ಥಾನ ನೀಡಲಾಗಿದೆ.
Advertisement
Guess who's turned up at the toss for #TeamIndia.
Afghanistan wins the toss and elects to bat first #INDvAFG pic.twitter.com/mwyKFN7VmS
— BCCI (@BCCI) September 25, 2018
Advertisement
ದೀಪಕ್ ಚಹರ್: ಯುವ ಆಟಗಾರ ದೀಪಕ್ ಚಹರ್ ಅಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಚಹರ್ ರಾಜಸ್ಥಾನದ ತಂಡದ ಆಟಗಾರನಾಗಿದ್ದು, ಹಾರ್ದಿಕ್ ಪಾಂಡ್ಯ ಗಾಯಗೊಂಡು ಟೂರ್ನಿಯಿಂದ ಹೊರ ನಡೆದ ಬಳಿಕ ಚಹರ್‍ಗೆ ಅವಕಾಶ ನೀಡಲಾಗಿತ್ತು. ಇದರೊಂದಿಗೆ ಚಹರ್ ಟೀಂ ಇಂಡಿಯಾ ಏಕದಿನ ಕ್ರಿಕೆಟ್ 223 ಆಟಗಾರರಾಗಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
Advertisement
ಟಾಸ್ ಗೆದ್ದ ಅಫ್ಘಾನಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಧೋನಿ ಜನವರಿ 2017ರಲ್ಲಿ ಏಕದಿನ ನಾಯಕತ್ವದಿಂದ ಕೆಳಗಳಿದಿದ್ದರು. 696 ದಿನಗಳ ಬಳಿಕ ಮತ್ತೊಮ್ಮೆ ಟೀಂ ಇಂಡಿಯಾ ನಾಯಕತ್ವ ವಹಿಸಿದ್ದು, ಈ ಮೂಲಕ 200ನೇ ಪಂದ್ಯವನ್ನು ಪೂರ್ಣಗೊಳಿಸಿದ್ದಾರೆ. ಈ ಸಾಧನೆ ಮಾಡಿದ 3ನೇ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಅಲ್ಲದೇ ಇಂದಿನ ಪಂದ್ಯದ ತಂಡದಲ್ಲಿ ಬಹುತೇಕ ಯುವ ಆಟಗಾರರೇ ಇರುವುದು ಮತ್ತೊಂದು ವಿಶೇಷವಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Proud moment for @chahardeepak as he now becomes the 223rd player to represent #TeamIndia in ODIs ???????? pic.twitter.com/QqaAFf5rpV
— BCCI (@BCCI) September 25, 2018
Captain Cool is back!
Some changes for India means Rohit Sharma rests and MS Dhoni once again takes the reins! His 200th ODI as captain.
He's lost the toss and Afghanistan are batting, while Deepak Chahar makes his debut.
#INDvAFG LIVE ⬇️https://t.co/QOBmNShq3d#AsiaCup pic.twitter.com/OUXFy0KsJ3
— ICC (@ICC) September 25, 2018