ಸೋಶಿಯಲ್‌ ಮೀಡಿಯಾದಲ್ಲಿ ಧೂಳೆಬ್ಬಿಸಿದ ಮಹಿ ನ್ಯೂ ಲುಕ್‌; ಯಾರಿದು ಹೀರೋ ಅಂತಿದ್ದಾರೆ ಫ್ಯಾನ್ಸ್‌

Public TV
2 Min Read
MS Dhoni

ಮುಂಬೈ: ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್‌ ಧೋನಿ (MS Dhoni) ಕಳೆದ ಒಂದೂವರೆ ದಶಕಗಳ ಕ್ರಿಕೆಟ್ ಬದುಕಿನಲ್ಲಿ ಹಲವು ಬಾರಿ ತಮ್ಮ ಹೇರ್‌ಸ್ಟೈಲ್ ಮೂಲಕವೇ ಗಮನ ಸೆಳೆದಿದ್ದಾರೆ. ಅದರಲ್ಲೂ ಟೀಂ ಇಂಡಿಯಾ (Team India) ಪ್ರವೇಶಿಸಿದ್ದ ಆರಂಭದ ದಿನಗಳಲ್ಲಿ ಹೇರ್‌ಸ್ಟೈಲ್‌ನಿಂದಲೇ ಮಹಿ ಎಲ್ಲರ ಫೇವ್‌ರೆಟ್‌ ಆಗಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಿನಿಂದ ಹಿಡಿದು 2007ರ ಐಸಿಸಿ ಟಿ20 ವಿಶ್ವಕಪ್ ಗೆಲ್ಲುವವರೆಗೆ ಮಹಿಯ ಉದ್ದದ ಹೇರ್‌ಸ್ಟೈಲ್ (HairStyle) ಅಭಿಮಾನಿಗಳ ಮನಗೆದ್ದಿತ್ತು. ಒಮ್ಮೆ ಭಾರತ ತಂಡವು ಪಾಕಿಸ್ತಾನ ಪ್ರವಾಸ ಮಾಡಿದ್ದಾಗ ಪಾಕಿಸ್ತಾನದ ಪ್ರಧಾನಿಯಾಗಿದ್ದ ಪರ್ವೇಜ್‌ ಮುಷರಫ್ ಕೂಡಾ ಧೋನಿ ಹೇರ್‌ಸ್ಟೈಲ್ ಗುಣಗಾನ ಮಾಡಿದ್ದರು. ಇದೀಗ ಧೋನಿ ಕ್ರಿಕೆಟ್ ವೃತ್ತಿಬದುಕಿನ ಸಂಧ್ಯಾಕಾಲದಲ್ಲಿದ್ದು, ಮತ್ತೊಮ್ಮೆ ಧೋನಿಯನ್ನು ಹೊಸ ಹೇರ್‌ಸ್ಟೈಲ್‌ ಲುಕ್‌ನಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದೆ. ಇದನ್ನೂ ಓದಿ: Asian Games 2023: ಕೊನೇ ಪ್ರಯತ್ನದಲ್ಲಿ ಗುಂಡು ಎಸೆದು ಚಿನ್ನ ಗೆದ್ದ ಗಂಡುಗಲಿ – ಭಾರತಕ್ಕೆ ಒಂದೇ ದಿನ 15 ಪದಕ

ಹೌದು. ಪ್ರಖ್ಯಾತ ಕೇಶ ವಿನ್ಯಾಸಕಾರನಾಗಿರುವ ಅಲಿಮ್ ಹಕೀಂ, ಇದೀಗ ಧೋನಿಗೆ ಮತ್ತೊಮ್ಮೆ ಹೊಸ ಹೇರ್‌ಸ್ಟೈಲ್ ಮಾಡಿದ್ದಾರೆ. ಧೋನಿ ಸಹ ಹೊಸ ಲುಕ್‌ನಲ್ಲಿ ಫೋಟೋ ಶೂಟ್‌ ಮಾಡಿಸಿದ್ದಾರೆ. ಇದನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದು, ಭಾರೀ ಸದ್ದು ಮಾಡುತ್ತಿವೆ. ಅಭಿಮಾನಿಗಳಂತೂ ಯಾರಿದೂ ಹೊಸ ಹೀರೋ ಎಂದು ಜೈಕಾರ ಹಾಕುತ್ತಿದ್ದಾರೆ.

ಈ ಕುರಿತಂತೆ ಧೋನಿಯ ಜೊತೆಗಿನ ಒಡನಾಟವನ್ನು ಹಾಗೂ ಅವರ ಹೇರ್‌ ಸ್ಟೈಲ್‌ ಬಗ್ಗೆ ಅಲೀಮ್ ಹಕೀಂ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: Asian Games 2023: ಚೊಚ್ಚಲ ಅಂತಾರಾಷ್ಟ್ರೀಯ T20 ಶತಕ ಸಿಡಿಸಿ ಗಿಲ್‌ ದಾಖಲೆ ಮುರಿದ ಯಶಸ್ವಿ

2024ರ ಐಪಿಎಲ್‌ನಲ್ಲೂ ಆಡ್ತಾರಾ ಕೂಲ್‌ ಕ್ಯಾಪ್ಟನ್‌?
2023ರ ಐಪಿಎಲ್‌ ಟೂರ್ನಿಯಲ್ಲಿ ಎಂ.ಎಸ್‌ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು 5ನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದ ಗುಜರಾತ್‌ ಟೈಟಾನ್ಸ್‌ ತಂಡವನ್ನು ಸದೆಬಡಿದು ಚಾಂಪಿಯನ್‌ ಪಟ್ಟಕ್ಕೇರಿತ್ತು. ಈ ಸಂದರ್ಭದಲ್ಲಿ ಮಹಿ ಐಪಿಎಲ್‌ ವೃತ್ತಿ ಬದುಕಿಗೂ ವಿದಾಯ ಹೇಳುವ ಸಾಧ್ಯತೆಗಳಿತ್ತು. ಆದ್ರೆ ಟ್ರೋಫಿ ಗೆದ್ದ ಬಳಿಕ ಮತ್ತೆ ಮಹಿ 2024ರ ಐಪಿಎಲ್‌ನಲ್ಲೂ ಆಡುವುದಾಗಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: Asian Games 2023: 5000 ಮೀ. ಓಟದಲ್ಲಿ ಪಾರುಲ್‌ ಪ್ರಚಂಡ ಗೆಲುವು – ವನಿತೆಯರ ಬಂಗಾರದ ಬೇಟೆ

Web Stories

Share This Article