ಚೆನ್ನೈ: 2019ರ ಐಪಿಎಲ್ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅಭಿಮಾನಿಗಳು ಮೊದಲ ಪಂದ್ಯದಲ್ಲಿಯೇ ಭರಪೂರ ಮನರಂಜನೆಯ ನಿರೀಕ್ಷೆಯಲ್ಲಿದ್ದಾರೆ. ಎಲ್ಲಾ ತಂಡಗಳು ಟೂರ್ನಿಗೆ ಭರ್ಜರಿ ತಾಲೀಮು ಕೂಡ ನಡೆಸಿದೆ. ಇದೇ ವೇಳೆ ಅಭಿಮಾನಿಗಳೊಂದಿಗೆ ಧೋನಿ ನಡೆದುಕೊಳ್ಳುವ ರೀತಿ ಮತ್ತೊಮ್ಮೆ ಮೆಚ್ಚುಗೆಗೆ ಕಾರಣವಾಗಿದೆ.
ಚೆನ್ನೈನ ಕ್ರೀಡಾಂಗಣದಲ್ಲಿ ಅಭ್ಯಾಸಕ್ಕಿಳಿದಿದ್ದ ಧೋನಿರನ್ನ ಕಣ್ತುಂಬಿಕೊಳ್ಳಲು ಸಾವಿರಾರು ಅಭಿಮಾನಿಗಳು ನೆರೆದಿದ್ದ ವಿಡಿಯೋ ಕೆಲ ದಿನಗಳ ಸಾಕಷ್ಟು ವೈರಲ್ ಆಗಿತ್ತು. ಅಂತೆಯೇ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಧೋನಿಯವರ ಬಳಿ ಆಟೋಗ್ರಾಫ್ ಕೇಳಿದ್ದು, ತಕ್ಷಣವೇ ಧೋನಿ ಕ್ರೀಡಾಂಗಣದ ಫೇನ್ಸ್ ಹಾರಿ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
The #Yellove on the faces of all the kids out there defines #Thala and the #AnbuDen! #WhistlePodu ???????? pic.twitter.com/u1ZLwk9lSR
— Chennai Super Kings (@ChennaiIPL) March 22, 2019
ಚೆನ್ನೈ ಸೂಪರ್ ಕಿಂಗ್ಸ್ ಈ ವಿಡಿಯೋವನ್ನು ತನ್ನ ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿದೆ. ಸಿಎಸ್‍ಕೆ ಟ್ವೀಟ್‍ಗೆ ಇದುವರೆಗೂ 15 ಸಾವಿರ ಮಂದಿ ಲೈಕ್ ಮಾಡಿದ್ದು, ಸುಮಾರು 3 ಸಾವಿರ ಮಂದಿ ರೀ ಟ್ವೀಟ್ ಮಾಡಿದ್ದಾರೆ. ವಿಡಿಯೋದಲ್ಲಿ ಧೋನಿ ಆಟೋಗ್ರಾಫ್ ಪಡೆದ ಹಲವು ಮಕ್ಕಳು ಹರ್ಷ ವ್ಯಕ್ತಪಡಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
37 ವರ್ಷದ ಧೋನಿ ನಾಯತ್ವದ ಸಿಎಸ್‍ಕೆ ಹಾಗೂ ಆರ್ ಸಿಬಿ ತಂಡಗಳ ಕಾದಾಟದೊಂದಿಗೆ ಈ ಬಾರಿಯ ಐಪಿಎಲ್ ಆರಂಭವಾಗುತ್ತಿದ್ದು, ಕಳೆದ ಬಾರಿಯ ಚಾಂಪಿಯನ್ ತಂಡ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ಇತ್ತ ಮೊದಲ ಟ್ರೋಫಿ ಜಯದ ವಿಶ್ವಾಸದಲ್ಲಿರುವ ಆರ್ ಸಿಬಿ ಆವೃತ್ತಿಯ ಶುಭಾರಂಭ ಮಾಡುವ ಉದ್ದೇಶವನ್ನು ಹೊಂದಿದೆ.
How Namma #Thala has always played Bangalore in style and reigned! #CSKvsRCB #WhistlePodu #Yellove???????? pic.twitter.com/jCxDBN2gFE
— Chennai Super Kings (@ChennaiIPL) March 23, 2019