ದುಬೈ: ಟಿ20 ವಿಶ್ವಕಪ್ ಕ್ರಿಕೆಟ್‍ಗೆ ಮಾರ್ಗದರ್ಶಕರಾಗಿ ಆಯ್ಕೆಗೊಂಡಿರುವ ಮಾಜಿ ನಾಯಕ ಎಂ.ಎಸ್ ಧೋನಿ ಟೀಂ ಇಂಡಿಯಾ ಆಟಗಾರರಿಗೆ ಕ್ಲಾಸ್ ಆರಂಭಿಸಿದ್ದಾರೆ. ಆಟಗಾರರು ಕೂಡ ಹೊಸ ಜೋಶ್‍ನೊಂದಿಗೆ ಇಂದು ನಡೆಯಲಿರುವ ಅಭ್ಯಾಸ ಪಂದ್ಯಕ್ಕಾಗಿ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ.
Advertisement
ದುಬೈನಲ್ಲಿ ನಡೆದ 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆದ ಬಳಿಕ ಇದೀಗ ಧೋನಿಗೆ ಹೊಸ ಅಗ್ನಿ ಪರೀಕ್ಷೆ ಎದುರಾಗಿದೆ. ಹೌದು ಈ ಬಾರಿ ದುಬೈನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‍ನಲ್ಲಿ ಭಾರತ ತಂಡಕ್ಕೆ ಮಾರ್ಗದರ್ಶನ ನೀಡಲು ಅವಕಾಶ ಪಡೆದಿರುವ ಧೋನಿ ಇದೀಗ ಆಟಗಾರನಾಗಿ ಅಲ್ಲದೆ ತಂಡವನ್ನು ವಿಶ್ವಕಪ್ ಗೆಲ್ಲುವಂತೆ ಮಾಡುವ ಸವಾಲು ಎದುರಾಗಿದೆ. ಇದನ್ನೂ ಓದಿ: ಟಿ20 ವಿಶ್ವಕಪ್ #BoycottPakistan ಬಿಸಿಬಿಸಿ ಚರ್ಚೆ
Advertisement
Advertisement
ವಿಶ್ವದ ಬಲಿಷ್ಠ ತಂಡಗಳ ನಡುವಿನ ಟಿ20 ವಿಶ್ವಕಪ್ ಸಮರ ಇದೀಗ ಆರಂಭವಾಗಿದೆ ಎಲ್ಲಾ ದೇಶದ ತಂಡಗಳು ಕೂಡ ಸಿದ್ಧತೆಯಲ್ಲಿ ತೊಡಗಿಕೊಂಡಿದೆ. ಭಾರತ ತಂಡ ಕೂಡ ಧೋನಿ ಮತ್ತು ರವಿಶಾಸ್ತ್ರಿ ಗರಡಿಯಲ್ಲಿ ಅಭ್ಯಾಸ ಆರಂಭಿಸಿದ್ದು, ಈ ಮೂಲಕ 2007ರ ಬಳಿಕ ಮತ್ತೊಮ್ಮೆ ಭಾರತಕ್ಕೆ ವಿಶ್ವಕಪ್ ಗೆಲ್ಲಿಸುವ ಹೊಸ ಹುಮ್ಮಸಿನೊಂದಿಗೆ ಕೊಹ್ಲಿ ನಾಯಕತ್ವದ ಭಾರತ ತಂಡ ಕಣಕ್ಕಿಳಿಯಲಿದೆ. ಇದನ್ನೂ ಓದಿ: ಚಾಂಪಿಯನ್ ಆಟಗಾರರಿಗಿಲ್ಲ T20 ವಿಶ್ವಕಪ್ ಆಡುವ ಅದೃಷ್ಟ
Advertisement
ಭಾರತ ತಂಡ ಆಕ್ಟೋಬರ್ 24ರಂದು ಬದ್ಧವೈರಿ ಪಾಕಿಸ್ತಾನದ ಸವಾಲಿನೊಂದಿಗೆ ಕೂಟವನ್ನು ಆರಂಭಿಸುತ್ತಿದೆ. ಇದಕ್ಕೂ ಮೊದಲು ಭಾರತ ತಂಡ ದುಬೈನಲ್ಲಿ ಎರಡು ಅಭ್ಯಾಸ ಪಂದ್ಯವಾಡಳಿದೆ. ಮೊದಲ ಅಭ್ಯಾಸ ಪಂದ್ಯ ಮಾರ್ಗನ್ ನೇತೃತ್ವದ ಇಂಗ್ಲೆಂಡ್ ತಂಡದ ವಿರುದ್ಧ ಇಂದು ನಡೆಯಲಿದೆ. 2ನೇ ಅಭ್ಯಾಸ ಪಂದ್ಯ ಆಸ್ಟ್ರೇಲಿಯಾ ತಂಡದ ವಿರುದ್ಧ ಅಕ್ಟೋಬರ್ 20 ರಂದು ನಡೆಯಲಿದೆ.