ಚೆನ್ನೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಅಭಿಮಾನಿಗಳು ಎಷ್ಟು ಇಷ್ಟ ಪಡುತ್ತಾರೆ ಎಂಬುವುದಕ್ಕೆ ಸಾಕ್ಷಿಯಾಗಿ ವಿಡಿಯೋ ಲಭ್ಯವಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಧೋನಿ ಅವರಿಗೆ ‘ತಲಾ’ ಎಂದೇ ಬಿರುದು ನೀಡಿದ್ದು, ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ಅಭ್ಯಾಸಕ್ಕಾಗಿ ಆಗಮಿಸಿದ ಧೋನಿ ಅವರನ್ನು ಕಾಣ್ತುಂಬಿಕೊಳ್ಳಲು ಸಾವಿರಾರರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿರುವುದನ್ನು ನಾವು ಕಾಣಬಹುದಾಗಿದೆ.
Whistle parakkum paaru! #ThalaParaak #WhistlePodu #Yellove ???????? pic.twitter.com/6EeMkYT0QY
— Chennai Super Kings (@ChennaiIPL) March 17, 2019
ಧೋನಿ ತರಬೇತಿ ಪಡೆಯಲು ಬ್ಯಾಟ್ ಹಿಡಿದು ಬರುತ್ತಿದಂತೆ ಒಮ್ಮೆಲೇ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿ ಸಂತಸ ವ್ಯಕ್ತಪಡಿಸಿದ್ದಾರೆ. ಮೈದಾನದ ಎಲ್ಲೆಡೆ ಧೋನಿ, ಧೋನಿ ಎಂಬ ಘೋಷಣೆ ಕೇಳಿ ಬಂದಿತ್ತು. ಸಾವಿರಾರರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಕಂಡ ಧೋನಿ ಕೂಡ ಕ್ಷಣ ಕಾಲ ಅಚ್ಚರಿಗೊಂಡಂತೆ ಕಂಡು ಬಂತು.
ಚೆನ್ನೈ ಸೂಪರ್ ಕಿಂಗ್ಸ್ ಟ್ವೀಟ್ ಮಾಡಿರುವ ಈ ವಿಡಿಯೋಗೆ ಇದುವರೆಗೂ 28 ಸಾವಿರ ಮಂದಿ ಲೈಕ್ ಮಾಡಿದ್ದು, 6.6 ಸಾವಿರ ಮಂದಿ ರೀ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋ ಕಂಡ ಹಲವು ಹಿರಿಯ ಆಟಗಾರರು ಹಾಗು ಕ್ರಿಕೆಟ್ ವಿಶ್ಲೇಷಕರು ಕೂಡ ಅಭಿಮಾನಿಗಳ ಕ್ರೇಜ್‍ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
I am from the same area where Dhoni resided in Ranchi. But still u guys have defeated us in terms of love towards him.
— Ayush Mishra (@ayushraj2500) March 18, 2019
ವಿಡಿಯೋ ಕುರಿತು ಕೆಲ ಅಭಿಮಾನಿಗಳು ತಮ್ಮ ಅನಿಸಿಕೆಯನ್ನು ಕೂಡ ತಿಳಿಸಿ ರೀ ಟ್ವೀಟ್ ಮಾಡಿದ್ದು, ಅಭಿಮಾನಿಗಳನ್ನು ಹೊಂದುವುದು ಎಂದರೆ ಇದು. ಪಾಕ್ ಸೂಪರ್ ಲೀಗ್ ಫೈನಲ್ ಪಂದ್ಯಕ್ಕೂ ಇಷ್ಟು ಮಂದಿ ಆಗಮಿಸರಿಲಿಲ್ಲ ಎಂದಿದ್ದಾರೆ. ಮತ್ತೊಬ್ಬ ಅಭಿಮಾನಿ, ನಾನು ಧೋನಿ ಹುಟ್ಟಿದ ಊರಿನವನೇ ಆಗಿದ್ದರೂ ಕೂಡ, ಚೆನ್ನೈ ಅಭಿಮಾನಿಗಳನ್ನು ನಮ್ಮನ್ನು ಸೋಲಿಸಿದ್ದಾರೆ ಎಂದಿದ್ದಾರೆ.
ಅಭ್ಯಾಸ ಸಮಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರೆ, ಇನ್ನು ಮಾರ್ಚ್ 23 ರಂದು ನಡೆಯುವ ಆರ್‍ಸಿಬಿ ಪಂದ್ಯಕ್ಕೆ ಅಭಿಮಾನಿಗಳು ಸಾಕಷ್ಟು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಧೋನಿ ನೇತೃತ್ವದ ಚೆನ್ನೈ ತಂಡ 3 ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದು ಬೀಗಿದ್ದು, ಇತ್ತ ಮೊದಲ ಟ್ರೋಫಿ ಗೆಲುವಿನ ವಿಶ್ವಾಸದಲ್ಲಿರುವ ಕೊಹ್ಲಿ ಪಡೆ ಕೂಡ ಭಾರೀ ಸಿದ್ಧತೆ ನಡೆಸಿದೆ.
Catch Me If You Fan #AnbuDen Version! #SuperPricelessThala @msdhoni and the smiling assassin @Lbalaji55! #WhistlePodu ???????? pic.twitter.com/xvqaRKp9kB
— Chennai Super Kings (@ChennaiIPL) March 17, 2019
#MenInBlue for the #PracticeMatch today! #WhistlePodu #AnbuDen ???????? pic.twitter.com/ka9crLNR4u
— Chennai Super Kings (@ChennaiIPL) March 17, 2019
The #PracticeMatch scenes from #AnbuDen! #WhistlePodu #YelloveAgain ???????? pic.twitter.com/63YoCb4hHj
— Chennai Super Kings (@ChennaiIPL) March 17, 2019