ಧೋನಿಯನ್ನ ಹಾಡಿಹೊಗಳಿದ ಹಾರ್ದಿಕ್ ಪಾಂಡ್ಯ

Public TV
1 Min Read
dhoni 3

ಚೆನ್ನೈ: 2019 ಐಪಿಎಲ್ ಟೂರ್ನಿಯ ಆರಂಭದಲ್ಲೇ ಧೋನಿ ಶೈಲಿಯಲ್ಲಿ ಸಿಕ್ಸರ್ ಸಿಡಿಸಿ ಮಿಂಚಿದ್ದ ಹಾರ್ದಿಕ್ ಪಾಂಡ್ಯ, ಎಂಎಸ್‍ಡಿಯನ್ನ ಹಾಡಿ ಹೊಗಳಿದ್ದಾರೆ.

ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ತಂಡ ಚೆನ್ನೈ ವಿರುದ್ಧ ಗೆದ್ದು 5ನೇ ಬಾರಿಗೆ ಟೂರ್ನಿಯಲ್ಲಿ ಫೈನಲ್ ಪ್ರವೇಶ ಮಾಡಿದೆ. ಇದೇ ಸಂದರ್ಭದಲ್ಲಿ ಧೋನಿ ಅವರೊಂದಿಗಿನ ಫೋಟೋ ಟ್ವೀಟ್ ಮಾಡಿರುವ ಹಾರ್ದಿಕ್ ಪಾಂಡ್ಯ, ಧೋನಿ ತಮಗೆ ಪ್ರೇರಣೆ, ಸ್ನೇಹಿತ, ಸಹೋದರ ಹಾಗೂ ತಮ್ಮ ಲೆಜೆಂಡ್ ಎಂದು ಕರೆದಿದ್ದಾರೆ.

ಹಾರ್ದಿಕ್ ಅವರ ಈ ಟ್ವೀಟ್‍ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತ ಪಂದ್ಯದ ವೇಳೆ ಧೋನಿ ಬ್ಯಾಟಿಂಗ್‍ಗೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಮಾಸ್ ಎಂಟ್ರಿ ನೀಡಿದ್ದಾರೆ. ‘ತಾಲಾ’ ಎಂಬ ಘೋಷಣೆಯನ್ನ ಎದ್ದು ಕೂಗುತ್ತಾ ಧೋನಿಗೆ ಸ್ವಾಗತ ಕೋರಿದ್ದರು.

ಟೂರ್ನಿಯಲ್ಲಿ ಚೆನ್ನೈ ಇದುವರೆಗೂ ಪ್ಲೇ ಆಫ್ ಹಂತ ತಲುಪದೇ ಹೊರಬಿದ್ದಿಲ್ಲ. ಮುಂಬೈ ವಿರುದ್ಧದ ಪಂದ್ಯದ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಧೋನಿ, ಪಂದ್ಯದಲ್ಲಿ ಯಾವುದೋ ಒಂದು ತಂಡ ಗೆಲುವು ಸಾಧಿಸಲೇಬೇಕಾಗುತ್ತದೆ. ಈ ಪಂದ್ಯದಲ್ಲಿ ನಮ್ಮ ತಂಡ ಆಟಗಾರರು ಉತ್ತಮ ಬ್ಯಾಟಿಂಗ್ ನಡೆಸಲು ವಿಫಲರಾಗಿದ್ದೇ ಸೋಲಿಗೆ ಕಾರಣವಾಗಿದ್ದು, ನಮಗೆ ಮತ್ತೊಂದು ಅವಕಾಶವಿದೆ ಎಂದಿದ್ದಾರೆ.

Share This Article