ಬಾಲಿವುಡ್ ಬ್ಯೂಟಿ ಮೃಣಾಲ್ ಠಾಕೂರ್ (Mrunal Thakur) ಮತ್ತು ವಿಜಯ್ ದೇವರಕೊಂಡ (Vijay Devarakonda) ನಟನೆಯ ‘ಫ್ಯಾಮಿಲಿ ಸ್ಟಾರ್’ (Family Star) ಸಿನಿಮಾ ರಿಲೀಸ್ಗೆ ಸಿದ್ಧವಾಗಿದೆ. ಇದರ ನಡುವೆ ಚಿತ್ರದ ಪ್ರಚಾರ ಕಾರ್ಯದಲ್ಲಿ ನಾಯಕಿ ಮೃಣಾಲ್ ಅವರು ವಿಜಯ್ಗೆ ದೃಷ್ಟಿ ತೆಗೆದಿದ್ದಾರೆ. ಈ ನಡೆ ಎಲ್ಲರ ಗಮನ ಸೆಳೆದಿದೆ.
View this post on Instagram
Advertisement
‘ಫ್ಯಾಮಿಲಿ ಸ್ಟಾರ್’ ಸಿನಿಮಾ ಪ್ರಚಾರ ಕಾರ್ಯದಲ್ಲಿ ವಿಜಯ್ ಮತ್ತು ಮೃಣಾಲ್ ಬ್ಯುಸಿಯಾಗಿದ್ದಾರೆ. ಇದೀಗ ಹೈದರಾಬಾದ್ನಲ್ಲಿ ನಡೆದ ಈವೆಂಟ್ವೊಂದರಲ್ಲಿ ವಿಜಯ್ ಬಗ್ಗೆ ನಟಿ ಮೆಚ್ಚುಗೆ ಸೂಚಿಸಿದ್ದಾರೆ. ವೇದಿಕೆಯಲ್ಲಿ ವಿಜಯ್ಗೆ ಮೃಣಾಲ್ ದೃಷ್ಟಿ ತೆಗೆದಿದ್ದಾರೆ.
Advertisement
View this post on Instagram
Advertisement
ಮುಂಬೈ ಬೆಡಗಿ ಮೃಣಾಲ್ ‘ಸೀತಾರಾಮಂ’ ಸಿನಿಮಾದಿಂದ ಟಾಲಿವುಡ್ಗೆ ಪರಿಚಿತರಾದರು. ಅಲ್ಲಿಂದ ನಾನಿಗೆ ‘ಹಾಯ್ ನಾನಾ’ ಸಿನಿಮಾದಲ್ಲಿ ನಾಯಕಿಯಾದರು. ಈ 2 ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸಕ್ಸಸ್ ಕಂಡಿತ್ತು. ಇದೀಗ 3ನೇ ಚಿತ್ರ ಫ್ಯಾಮಿಲಿ ಸ್ಟಾರ್ ಮೂಲಕ ಮತ್ತೆ ತೆಲುಗಿನಲ್ಲಿ ಸದ್ದು ಮಾಡುತ್ತಿದ್ದಾರೆ. ತೆಲುಗು ಪ್ರೇಕ್ಷಕರ ಪ್ರೀತಿಗೆ ಪ್ರಚಾರ ಕಾರ್ಯದ ವೇಳೆ, ಶಿರಬಾಗಿ ಮೃಣಾಲ್ ನಮಿಸಿದ್ದಾರೆ.
Advertisement
ಅಂದಹಾಗೆ ಸಂದರ್ಶನವೊಂದರಲ್ಲಿ ಮೃಣಾಲ್ ಸೌಂದರ್ಯದ ಬಗ್ಗೆ ವಿಜಯ್ ಬಣ್ಣಿಸಿದ್ದರು. ಮೃಣಾಲ್ಗೆ ಚಿಕ್ಕ ವಯಸ್ಸಿನಿಂದಲೂ ನಟನೆ ಎಂದರೆ ತುಂಬಾ ಇಷ್ಟ. ಭಾಷೆ ತಿಳಿಯದಿದ್ದರೂ ಅದನ್ನು ಅರಿತು ಚೆನ್ನಾಗಿ ನಟಿಸುತ್ತಾರೆ. ಅದು ನನಗೆ ಹಲವು ಬಾರಿ ಅಚ್ಚರಿ ಮೂಡಿಸಿದೆ ಎಂದು ಮೃಣಾಲ್ ಬಗ್ಗೆ ವಿಜಯ್ ಹೇಳಿದ್ದಾರೆ. ಬಳಿಕ ನಿರ್ದೇಶಕರು ಏನೇ ಹೇಳಿದ್ದರು ಅದನ್ನು ಅರ್ಥ ಮಾಡಿಕೊಂಡು ನಟಿಸುವ ಸಾಮರ್ಥ್ಯ ಅವರಿಗಿದೆ. ಬ್ಯೂಟಿ ಅವರಿಗೆ ದೇವರು ಕೊಟ್ಟ ಕೊಡುಗೆ. ಮೃಣಾಲ್ ಕಣ್ಣು, ಮೂಗು, ತುಟಿ ಎಲ್ಲವೂ ಅವರಲ್ಲಿರುವ ಅದ್ಭುತ ಎಂದು ‘ಫ್ಯಾಮಿಲಿ ಸ್ಟಾರ್’ ನಾಯಕಿಯ ಬಗ್ಗೆ ವಿಜಯ್ ದೇವರಕೊಂಡ ಕೊಂಡಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ರಶ್ಮಿಕಾ ಮಂದಣ್ಣ (Rashmika Mandanna) ಕಥೆಯೇನು? ಎಂದು ವಿಜಯ್ಗೆ ನೆಟ್ಟಿಗರು ಕಾಲೆಳೆದಿದ್ದಾರೆ.
ಶೂಟಿಂಗ್ ಸಂದರ್ಭದಲ್ಲಿ ನಿರ್ದೇಶಕ ಪರಶುರಾಮ್ ಮತ್ತು ಮೃಣಾಲ್ ಠಾಕೂರ್ ನನಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ವಿಜಯ್ ಮಾತನಾಡಿದ್ದಾರೆ.