`ಸೀತಾರಾಮಂ’ (Seetharamam) ಮೂಲಕ ಸೂಪರ್ ಸಕ್ಸಸ್ ಕಂಡಿರುವ ನಟಿ ಮೃಣಾಲ್ ಠಾಕೂರ್ (Mrunal Thakaur) ಇದೀಗ ಟಾಲಿವುಡ್‌ನತ್ತ (Tollywood) ಮುಖ ಮಾಡಿದ್ದಾರೆ. ನ್ಯಾಚುರಲ್ ಸ್ಟಾರ್ ನಾನಿಗೆ ನಾಯಕಿಯಾಗುವ ಮೂಲಕ ಹೊಸ ವರ್ಷಕ್ಕೆ ಹ್ಯಾಪಿ ನ್ಯೂಸ್ ಕೊಟ್ಟಿದ್ದಾರೆ.
View this post on Instagram
ಮರಾಠಿ, ಹಿಂದಿ ಸಿನಿಮಾಗಳಲ್ಲಿ ಮಿಂಚಿದ್ದ ನಟಿ ಮೃಣಾಲ್ ಠಾಕೂರ್ ತೆಲುಗಿನ ಹೊಸ ಸಿನಿಮಾಗೆ ಸಹಿ ಹಾಕಿದ್ದಾರೆ. ದುಲ್ಕರ್ ಸಲ್ಮಾನ್ ಜೊತೆ ರೊಮ್ಯಾನ್ಸ್ ಮಾಡಿದ ಬಳಿಕ ನಾನಿ (Actor Nani) ಸಿನಿಮಾಗೆ ನಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಚಿತ್ರದ ಪೋಸ್ಟರ್ ಅನೌನ್ಸ್ ಮಾಡುವ ತಮ್ಮ ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ಕೊಟ್ಟಿದ್ದಾರೆ. ಇದನ್ನೂ ಓದಿ: ಪ್ರಿಯಾಗೆ ಕಾಲ್ಗೆಜ್ಜೆ ತೊಡಿಸಿ ಮಂಡಿಯೂರಿ ಪ್ರಪೋಸ್ ಮಾಡಿದ `ಪಾರು’ ನಟ ಸಿದ್ದು
View this post on Instagram
ನ್ಯಾಚುರಲ್ ಸ್ಟಾರ್ ನಾನಿಗೆ ಮೃಣಾಲ್ ಠಾಕೂರ್ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ವಿಭಿನ್ನ ಪಾತ್ರದ ಮೂಲಕ ನಟಿ ಬರಲಿದ್ದಾರೆ. ತಂದೆ ಮತ್ತು ಮಗಳ ಬಂಧವನ್ನ ಸಾರುವ ಕಥೆ ಇದಾಗಿದೆ. ಸದ್ಯ ಸಿನಿಮಾಗೆ ʼನಾನಿ 30ʼ ಎಂಬ ಟೈಟಲ್ ಇಡಲಾಗಿದೆ. ಇನ್ನೂ ನಾನಿ ಮತ್ತು ಮೃಣಾಲ್ ಕಾಂಬಿನೇಷನ್ ಸಿನಿಮಾ ನೋಡಲು ರೆಡಿಯಾಗಿದ್ದಾರೆ.